2nd puc exam 2 time table 2024: ನಿನ್ನೆಯ ದಿನದಂದೇ ಎಲ್ಲಾ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಒಂದರ ಫಲಿತಾಂಶ ಕೂಡ ಪ್ರಕಟಣೆಯಾಗಿದೆ. ಈಗಾಗಲೇ ಎಲ್ಲಾ ಲಕ್ಷಾಂತರ ವಿದ್ಯಾರ್ಥಿಗಳು ಕೂಡ ತಮ್ಮ ಫಲಿತಾಂಶವನ್ನು ಕೂಡ ಫೋನಿನ ಮುಖಾಂತರವೇ ಚೆಕ್ ಮಾಡಿಕೊಂಡು ಈಗಾಗಲೇ ಅವರು ಅನುತ್ತೀರ್ಣರಾಗಿದ್ದಾರೋ ಅಥವಾ ಉತ್ತೀರ್ಣರಾಗಿದ್ದಾರೋ ಈ ಒಂದು ಪರೀಕ್ಷೆಯಲ್ಲಿ ಎಂಬುದನ್ನು ಕೂಡ ಖಚಿತಪಡಿಸಿಕೊಂಡಿದ್ದಾರೆ. ಅನುತ್ತೀರ್ಣರಾಗಿರುವಂತಹ (Fail) ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಮಂಡಳಿಯು ಪರೀಕ್ಷೆ ಎರಡರ ಅಂತಿಮ ವೇಳಾಪಟ್ಟಿಯನ್ನು ಕೂಡ ನೆನ್ನೆ ದಿನದಂದೆ ಬಿಡುಗಡೆ ಮಾಡಿದ್ದು, ಆ ಒಂದು ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಸ್ತುತ ಲೇಖನದಲ್ಲಿ ತಿಳಿದುಕೊಳ್ಳಿರಿ.
ಪರೀಕ್ಷೆ 2ರ ಅಂತಿಮ ವೇಳಾಪಟ್ಟಿ ಪ್ರಕಟ !
ತಮ್ಮ ಫಲಿತಾಂಶವನ್ನು ಕೂಡ ನೆನ್ನೆ ದಿನದಂದೇ ಎಲ್ಲಾ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ನೋಡಿರುತ್ತಾರೆ. ಅವರಿಗೆ ತೃಪ್ತಿಯಾಗದಿದ್ದರೆ ಅವರು ಮರು ಮೌಲ್ಯಮಾಪನಕ್ಕೆ ಮತ್ತೊಮ್ಮೆ ಕೂಡ ಹಾಕಬಹುದು. ಹಾಗೂ ಇನ್ನೂ ಕೆಲ ವಿದ್ಯಾರ್ಥಿಗಳು ವಿಷಯವಾರು ವಿಷಯಗಳು ಅನುತ್ತೀರ್ಣವಾದ ಅಂಕಗಳನ್ನು ಗಳಿಸಿ ಅನುತ್ತೀರ್ಣರಾಗಿರುತ್ತಾರೆ. ಅಂತಹ ವಿದ್ಯಾರ್ಥಿಗಳು ಕೂಡ ಮತ್ತೆ ಮರು ಪರೀಕ್ಷೆಯನ್ನು ಕೂಡ ಬರೆಯಬಹುದು.
ಈ ವಿದ್ಯಾರ್ಥಿಗಳಿಗೆ ಎರಡು ಬಾರಿ ಅವಕಾಶವನ್ನು ನೀಡುತ್ತಿದೆ ಶಿಕ್ಷಣ ಇಲಾಖೆ, ಎರಡೆರಡು ಬಾರಿ ಪರೀಕ್ಷೆಯನ್ನು ಬರೆಯಬಹುದು ಅಂದರೆ ಪರೀಕ್ಷೆ ಎರಡರಲ್ಲಿ ಬರೆಯುವಂತಹ ವಿದ್ಯಾರ್ಥಿಗಳು ಅಲ್ಲಿಯೂ ಕೂಡ ಉತ್ತೀರ್ಣವಾದ ಅಂಕಗಳನ್ನು ಗಳಿಸದಿದ್ದರೆ ಮುಂದಿನ ದಿನಗಳ ಪರೀಕ್ಷೆಯಲ್ಲೂ ಕೂಡ ಪಾಲ್ಗೊಂಡು ಮತ್ತೊಮ್ಮೆ ಪರೀಕ್ಷೆಯನ್ನು ಬರೆಯಬಹುದು. ಅದು ಪರೀಕ್ಷೆ ಮೂರು ಎಂದು ಪರಿಗಣಿಕೆಯಾಗುತ್ತದೆ. ಈ ರೀತಿಯಾಗಿ ಪ್ರಸ್ತುತ 2023-24ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ನಿಯಮ ಅನ್ವಯವಾಗಲಿದೆ.
ಪರೀಕ್ಷೆ ಎರಡರ ಸಂಪೂರ್ಣ ಮಾಹಿತಿ !
ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿಯೇ ಪರೀಕ್ಷೆ ಎರಡರ ಪರೀಕ್ಷೆಗಳು ಕೂಡ ಪ್ರಾರಂಭವಾಗುತ್ತದೆ. ಮೊದಲಿಗೆ ಕನ್ನಡ ವಿಷಯ ಹಾಗೂ ಅರೇಬಿಕ್ ವಿಷಯ ಪರೀಕ್ಷೆಗಳು ಪ್ರಾರಂಭವಾಗಲಿದೆ. ನೀವು ಕೂಡ ಈ ರೀತಿಯ ವಿಷಯದಲ್ಲಿ ಅನುತ್ತೀರ್ಣವಾದ ಅಂಕಗಳನ್ನು ಗಳಿಸಿ ಈಗಾಗಲೇ ಅನುತ್ತೀರ್ಣವಾದ ಫಲಿತಾಂಶವನ್ನು ಪಡೆದಿದ್ದೀರಿ ಎಂದರೆ, ನೀವು ಇದೇ ತಿಂಗಳಿನಲ್ಲಿಯೇ ಪರೀಕ್ಷೆಗಳನ್ನು ಕಟ್ಟುವ ಮುಖಾಂತರ ಮತ್ತೊಮ್ಮೆ ಪರೀಕ್ಷೆ ಎರಡರಲ್ಲಿ ಹಾಜರಾಗಬಹುದು.
ಯಾವ ವಿಷಯದಲ್ಲಿ ಅನುತ್ತೀರ್ಣವಾದ ಅಂಕಗಳನ್ನು ಪಡೆದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ, ಬಳಿಕ ನಿಮ್ಮ ಕಾಲೇಜುಗಳಿಗೆ ಭೇಟಿ ನೀಡಿ ಈ ಒಂದು ವಿಷಯದ ಪರೀಕ್ಷೆಯನ್ನು ಕೂಡ ಕಟ್ಟಬಹುದು ಶುಲ್ಕವನ್ನು ಕೂಡ ವಿಧಿಸಲಾಗುತ್ತದೆ. ಒಂದು ವಿಷಯವನ್ನು ಮಾತ್ರ ನೀವು ಮರು ಪರೀಕ್ಷೆ ಬರೆಯಲು ಬಯಸುವಿರಿ ಎಂದರೆ ನಿಮಗೆ 175 ರೂ ಹಣ ಶುಲ್ಕವಾಗಿ ಅನ್ವಯಿಸುತ್ತದೆ. ಆ ಒಂದು ಹಣವನ್ನು ನೀವು ಕಾಲೇಜುಗಳಲ್ಲಿಯೇ ಕಟ್ಟಬೇಕಾಗುತ್ತದೆ.
ಈಗಾಗಲೇ ಪರೀಕ್ಷೆಯನ್ನು ಕಟ್ಟುವಂತಹ ಪ್ರಕ್ರಿಯೆ ಕೂಡ ಆರಂಭವಾಗಿದೆ. ನಿನ್ನೆ ದಿನದಂದೆಯೇ ಆರಂಭವಾಗಿದ್ದು ಇನ್ನೂ ಕೇವಲ ಆರು ದಿನಗಳಲ್ಲಿಯೇ ಮುಕ್ತಾಯಗೊಳ್ಳಲಿದೆ. ಆ ಮುಕ್ತಾಯದ ದಿನಾಂಕದ ಒಳಗೆ ಪರೀಕ್ಷೆಯನ್ನು ಕಟ್ಟುತ್ತಿರಿ ಎಂದರೆ, ನಿಮಗೆ ಯಾವುದೇ ರೀತಿಯ ದಂಡ ಶುಲ್ಕ ಕೂಡ ಅನ್ವಯವಾಗುವುದಿಲ್ಲ ಅಥವಾ ನೀವೇನಾದರೂ ದಿನಾಂಕ ಮುಗಿದ ಬಳಿಕ ಕಟ್ಟುತ್ತಿರಿ ಎಂದರೆ 50 ರೂ ಹಣ ಶುಲ್ಕವಾಗಿ ವಿಧಿಸಲಾಗುತ್ತದೆ.
ಪರೀಕ್ಷೆ 2ರ ಅಂತಿಮ ವೇಳಾಪಟ್ಟಿ ಹೀಗಿದೆ :-
- 29-04-2024 : ಕನ್ನಡ ವಿಷಯ ಹಾಗೂ ಅರೇಬಿಕ್ ವಿಷಯ
- 30-04-2024 : ಇತಿಹಾಸ ಹಾಗೂ ಭೌತಶಾಸ್ತ್ರ ವಿಷಯ
- 01-05-2024 : ಪರೀಕ್ಷೆ ಇರುವುದಿಲ್ಲ
- 02-05-2024 : ಇಂಗ್ಲಿಷ್ ವಿಷಯ
- 03-05-2024 : ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
- 04-05-2024 : ಭೂಗೋಳಶಾಸ್ತ್ರ, ರಾಸಾಯನಶಾಸ್ತ್ರ, ಮನಂ ಶಾಸ್ತ್ರ, ಗೃಹ ವಿಜ್ಞಾನ, ಹಾಗೂ ಮೂಲ ಗಣಿತ
- 05-05-2024 : ಪರೀಕ್ಷೆಗೆ ರಜಾ ದಿನ
- 06-05-2024 : ಪರೀಕ್ಷೆ ಇರುವುದಿಲ್ಲ
- 07-05-2024 : ಈ ದಿನವೂ ಕೂಡ ಪರೀಕ್ಷೆ ಇರುವುದಿಲ್ಲ
- 08-05-2024 : ಗುರುವಾರದಂದು ಕೂಡ ರಜ ದಿನ
- 09-05-2024 : ವ್ಯವಹಾರ ಅಧ್ಯಯನ, ತರ್ಕಶಾಸ್ತ್ರ, ಗಣಿತ ಹಾಗೂ ಶಿಕ್ಷಣ ಶಾಸ್ತ್ರ
- 10-05-2024 : ಬಸವ ಜಯಂತಿಯ ಪ್ರಯುಕ್ತ ರಜ ದಿನ
- 11-05-2024 : ಸಮಾಜಶಾಸ್ತ್ರ, ಜೀವಶಾಸ್ತ್ರ, ಭೂಗರ್ಭ ಶಾಸ್ತ್ರ, ಗಣಿತ ವಿಜ್ಞಾನ, ವಿದ್ಯುನ್ಮಾನ ಶಾಸ್ತ್ರ,
- 12-05-2024 : ಭಾನುವಾರದಂದು ರಜಾದಿನ
- 13-05-2024 : ಅರ್ಥಶಾಸ್ತ್ರ ಪರೀಕ್ಷೆ
- 14-05-2024 : ಐಚ್ಚಿಕ ಕನ್ನಡ, ಹಾಗೂ ಲೆಕ್ಕಶಾಸ್ತ್ರ,
- 15-05-2024 : ಹಿಂದಿ ವಿಷಯ
- 16-05-2024 : ತಮಿಳು, ತೆಲುಗು, ಮಲಯಾಳಂ, ರಿಟೇಲ್, ಮರಾಠಿ, ಉರ್ದು, ಹಾಗೂ ಸಂಸ್ಕೃತ, ಫ್ರೆಂಚ್, ಆಟೋಮೊಬೈಲ್