Annabhagya Scheme Amount Check: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಯಲ್ಲಿ ತಿಳಿಸುವ ವಿಷಯವೇನೆಂದರೆ, ಅನ್ನ ಭಾಗ್ಯ ಯೋಜನೆಯು ಕರ್ನಾಟಕದಲ್ಲಿ ಪ್ರಸ್ತುತ ಚಾಲ್ತಿಯಲ್ಲಿದ್ದು ಕರ್ನಾಟಕ ಸರ್ಕಾರವು ಫಲಾನುಭವಿಗಳ ಖಾತೆಗೆ ಅಂದರೆ ಮನೆಯ ಮುಖ್ಯ ಮಹಿಳೆಯ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣವನ್ನು ಹಾಕುತ್ತಾರೆ.
ಅನ್ನಭಾಗ್ಯ ಯೋಜನೆಯ ಹಣವು ಪ್ರತಿಯೊಬ್ಬ ಮಹಿಳೆಯರ ಕಥೆಗೂ ತಲುಪುತ್ತಿದೆ ಹಾಗೂ ಕೆಲವು ಮಹಿಳೆಯರ ಖಾತೆಗೆ ತಲುಪಿಲ್ಲ ಅಂತಾನೇ ಹೇಳಬಹುದು ಆದರೆ ಅನ್ನಭಾಗ್ಯ ಯೋಜನೆಯ ಹಣವು ಇತ್ತೀಚಿನ ದಿನಗಳಲ್ಲಿ ಫಲಾನುಭವಿ ಮಹಿಳೆಯ ಖಾತೆಗೆ ಜಮಾ ಆಗಿದ್ದು ಅದನ್ನು ಪರಿಶೀಲಿಸಿಕೊಳ್ಳುವುದು ಹೇಗೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಟ್ಟಿರುತ್ತೇನೆ.
ಕರ್ನಾಟಕ ಸರ್ಕಾರವು ಚುನಾವಣೆಗೂ ಮೊದಲು 10 ಕೆಜಿ ಅಕ್ಕಿಯನ್ನು ಪ್ರತಿಯೊಬ್ಬ ಸದಸ್ಯನಿಗೂ ನೀಡುತ್ತೇನೆ ಎಂದು ತಿಳಿಸಿತ್ತು ಆದರೆ ಕೇಂದ್ರ ಸರ್ಕಾರವು ಇದಕ್ಕೆ ಸಮ್ಮತಿ ಕೊಡದ ಕಾರಣ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಹಾಗೂ ಪ್ರತಿ ಕೆಜಿ ಅಕ್ಕಿಗೆ ರೂಪಾಯಿ 72ರಂತೆ ಮನೆಯಲ್ಲಿ ಎಷ್ಟು ಸದಸ್ಯರು ಇರುತ್ತಾರೆ ಅವರಿಗೆ ಎಲ್ಲಾನು ಸೇರಿ ಫಲಾನುಭವಿಯ ಮಹಿಳೆಯ ಖಾತೆಗೆ ಹಣವನ್ನು ಜಮಾ ಮಾಡುತ್ತಿದೆ.
ಅನ್ನಭಾಗ್ಯ ಯೋಜನೆಯ ಹಣ ಬಾರದವರು ಏನು ಮಾಡಬೇಕು?
- ಇ – ಕೆವೈಸಿ ಯನ್ನ ಮಾಡಿಸಬೇಕು
- ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು.
- ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು
- ಮರಣ ಹೊಂದಿದ ಸದಸ್ಯರನ್ನು ರೇಷನ್ ಕಾರ್ಡ್ ನಿಂದ ತೆಗೆದು ಹಾಕಬೇಕು.
ಈ ಮೇಲಿನ ಎಲ್ಲಾ ಕೆಲಸಗಳು ನೀವು ಮಾಡಿಸಿದ್ದಲ್ಲಿ ನಿಮ್ಮ ಖಾತೆಗೆ ಅನ್ನ ಭಾಗ್ಯ ಯೋಜನೆಯ ಹಣವು ಜಮಾ ಆಗುತ್ತದೆ.
ಅನ್ನಭಾಗ್ಯ ಯೋಜನೆಯ ಹಣವನ್ನು ಪರಿಶೀಲಿಸಿಕೊಳ್ಳಲು ಈ ಕೆಳಗಿನ ನೀಡಿರುವ ಲಿಂಕನ್ನು ಒಂದು ಸಲ ಭೇಟಿ ನೀಡಿ.
https://ahara.kar.nic.in/status1/status_of_dbt_new.aspx
ಮೇಲಿನ ಲಿಂಕನ್ನು ಕ್ಲಿಕ್ ಮಾಡಿದ ತಕ್ಷಣ ನೀವು ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಗೂ ವರ್ಷಗಳನ್ನು ಸೆಲೆಕ್ಟ್ ಮಾಡಿಕೊಂಡು ನೀವು ನಂತರ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಫಲಾನುಭವಿಯ ಹೆಸರನ್ನು ಸೆಲೆಕ್ಟ್ ಮಾಡಿಕೊಂಡು ರೇಷನ್ ಕಾರ್ಡ್ ಹೊಂದಿರುವವರ ಖಾತೆಗೆ ಹಣ ಬಂದಿದೆಯ ಇಲ್ಲವಾ ಎಂದು ಪಡೆದುಕೊಳ್ಳಬಹುದಾಗಿರುತ್ತದೆ.
ಸ್ನೇಹಿತರೆ ಇದಾಗಿತ್ತು ಅನ್ನ ಭಾಗ್ಯ ಯೋಜನೆ ಹಣವನ್ನು ಯಾವ ರೀತಿ ಪರಿಶೀಲಿಸಿಕೊಳ್ಳಬೇಕು ಎಂಬುದರ ಮಾಹಿತಿ ಇದೇ ರೀತಿ ಹೆಚ್ಚಿನ ಮಾಹಿತಿಗಳನ್ನು ದಿನಾಲು ಓದಲು ಇಷ್ಟಪಡುತ್ತಿದ್ದರೆ ಹಾಗೂ ಉದ್ಯೋಗದ ಮಾಹಿತಿಗಳು ಇನ್ನಿತರ ಇತ್ತೀಚಿನ ಯೋಜನೆಗಳ ಬಗ್ಗೆ ವಿವರಣೆಯನ್ನು ಪಡೆದುಕೊಳ್ಳಲು ದಿನನಿತ್ಯವೂ ಇಷ್ಟಪಡುತ್ತಿದ್ದರೆ ನೀವು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿರಿ.