Loan Scheme: ಸ್ವಂತ ಉದ್ಯಮ ನಡೆಸಲು ಸಿಗುತ್ತೆ 3 ಲಕ್ಷ ಸಾಲ! ಈಗಲೇ ಅರ್ಜಿ ಸಲ್ಲಿಸಿ

Udyogini Loan Scheme

Udyogini Loan Scheme: ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಮತ್ತೊಂದು ಒಳ್ಳೆಯ ಉಡುಗೊರೆ ನೀಡಲಿದೆ. ಈ ಹೊಸ ಯೋಜನೆಯ ಅಡಿಯಲ್ಲಿ ಯಾವುದೇ ಗ್ಯಾರಂಟಿ ಕೊಡದೆ ಹೆಚ್ಚು ಬಡ್ಡಿಯನ್ನು ಪಾವತಿ ಮಾಡದೆ ಸುಲಭವಾಗಿ ಮೂರು ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯವನ್ನು (Loan) ಕೂಡ ಪಡೆಯಬಹುದು ಆಗಿದೆ.

ಉದ್ಯೋಗಿನಿ ಯೋಜನೆ ಬಗ್ಗೆ ಮಾಹಿತಿ! (Udyogini scheme)

ಸ್ವಂತ ಉದ್ಯಮವನ್ನ ಮಾಡಲು ಮಹಿಳೆಯರಿಗಾಗಿಯೇ ರಾಜ್ಯ ಸರ್ಕಾರ ಉದ್ಯೋಗಿನಿ ಯೋಜನೆಯನ್ನು ಜಾರಿಗೆ ತಂದಿದೆ ಅಂತಾನೆ ಹೇಳಬಹುದು. ಈ ಯೋಜನೆಯ ಅಡಿಯಲ್ಲಿ ಮಹಿಳೆಯರು ರೂ. 3 ಲಕ್ಷ ರೂಪಾಯಿಗಳನ್ನು ಬಡ್ಡಿ ರಹಿತ ಸಾಲವನ್ನಾಗಿ ಪಡೆಯಬಹುದು ಆಗಿದೆ ಅದರ ಜೊತೆಗೆ ಯಾವುದೇ ಹೆಚ್ಚಿನ ದಾಖಲೆಗಳನ್ನು ಕೂಡ ನೀವು ನೀಡಬೇಕಾಗಿಲ್ಲ. ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಉದ್ಯೋಗಿನಿ ಯೋಜನೆ ಸಹಾಯಕವಾಗಲಿದೆ ಎಂದು ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಅರ್ಹತೆ ಏನು?

ಅಂದ್ರೆ ಆರ್ಥಿಕವಾಗಿ ಹಿಂದುಳಿದ ಹಾಗೂ ಬಡ ಮಹಿಳೆಯರು, ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಹಿಳೆಯರು, ವಿಧವ ಮಹಿಳೆಯರು, ಅಂಗವೈಕಲ್ಯತೆ ಹೊಂದಿರುವ ಮಹಿಳೆಯರು ಮತ್ತು ಸಾಮಾನ್ಯ ಮಹಿಳೆಯರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ಸಾಲ ಸೌಲಭ್ಯ (loan facility) ಪಡೆಯಬಹುದಾಗಿದೆ.

ಪರಿಶಿಷ್ಟರ ಜಾತಿ (S.C) ಮತ್ತು ಪರಿಶಿಷ್ಟ ಪಂಗಡದ (S.T) ಮಹಿಳೆಯರು 3,00,000 ರೂ. ಸಾಲಕ್ಕೆ 1,50,000 ರೂ. ಗಳ ರಿಯಾಯ್ತಿ ಅಥವಾ ಶೇಕಡ 50% ನಷ್ಟು ಸಬ್ಸಿಡಿ (subsidy) ಯನ್ನ ಪಡೆದುಕೊಳ್ಳಬಹುದು ಆಗಿದೆ. ಸಾಮಾನ್ಯ ಮಹಿಳೆಯರು 3 ಲಕ್ಷ ರೂಪಾಯಿಗಳ ಸಾಲಕ್ಕೆ ಗರಿಷ್ಠ 90 ಸಾವಿರ ರೂಪಾಯಿ ಅಥವಾ 30% ನಷ್ಟು ಸಬ್ಸಿಡಿ ಪಡೆಯಬಹುದು ಆಗಿದೆ ಎಂದು ತಿಳಿಸಲಾಗಿದೆ.

ವಯಸ್ಸಿನ ಮಿತಿ

ಉದ್ಯೋಗಿನಿ ಯೋಜನೆ (Udyogini Scheme)ಗೆ 18 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಅರ್ಜಿಯನ್ನಾ ಕೂಡ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಯಾವುವು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ
  • ಅಂಗವಿಕಲತೆ ಇದ್ದರೆ ಅದರ ದೃಢೀಕರಣ ಪ್ರಮಾಣ ಪತ್ರ
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ರೇಷನ್ ಕಾರ್ಡ್ ಅಥವಾ ಇತರ ದಾಖಲೆಗಳು

ಎಲ್ಲಿ ಹಾಗೂ ಯಾವ ರೀತಿ ಅರ್ಜಿ ಸಲ್ಲಿಸಬೇಕು?

ಶಿಶು ಅಭಿವೃದ್ಧಿ( Child Development) ಯೋಜನಾಧಿಕಾರಿ ಕಚೇರಿಗೆ ಹೋಗಿ ಸರಿಯಾದ ಮಾಹಿತಿ ಮತ್ತು ದಾಖಲೆ ನೀಡಿ ಅರ್ಜಿಯನ್ನಾ ಸಲ್ಲಿಸಬಹುದು. ಉದ್ಯೋಗಿನಿ ಯೋಜನೆಯ ಸಾಲವನ್ನು ಯಾವುದೇ ವಾಣಿಜ್ಯ ಬ್ಯಾಂಕ್ ಗಳಲ್ಲಿ, ಜಿಲ್ಲಾ ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದುಕೊಳ್ಳಬಹುದು ಆಗಿದೆ ಎಂದು ತಿಳಿಸಲಾಗಿದೆ.

ಮಹಿಳೆಯರು ಸ್ವಂತ ಉದ್ಯಮ (Own Business) ವನ್ನ ಮಾಡಿ ಸ್ವಂತ ಹಣ ಸಂಪಾದಿಸಿ ಆರ್ಥಿಕವಾಗಿ ಸಬಲರಾಗಬೇಕು ಅಂದ್ರೆ ಉದ್ಯೋಗಿನಿ ಯೋಜನೆ ಬಹಳ ಸಹಾಯಕಾರಿಯಾಗಿದೆ ಎಂದು ಹೇಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *