Ration Card big update: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ ಫೆಬ್ರವರಿ 29ನೇ ತಾರೀಖಿನ ಒಳಗೆ ನೀವು ಈ ಎರಡು ಕೆಲಸ ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ನಿಷ್ಕ್ರಿಯಗೊಳಿಸಬಹುದು ಅಥವಾ ನಿಮ್ಮ ರೇಷನ್ ಕಾರ್ಡ್ ಡಿಲೀಟ್ ಆಗಬಹುದು. ಇದರ ಬಗ್ಗೆ ಪೂರ್ತಿ ತಿಳಿದುಕೊಳ್ಳಲು ಲೇಖನವನ್ನು ಕೊನೆವರೆಗೂ ಓದಿ.
ಇದೇ ರೀತಿಯ ಹೆಚ್ಚಿನ ಸುದ್ದಿಗಳನ್ನು ದಿನನಿತ್ಯ ಓದಲು ಇಷ್ಟಪಡುತ್ತಿದ್ದಾರೆ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಅಲ್ಲಿ ನಿಮಗೆ ಇದೇ ತರದ ಸುದ್ದಿಗಳು ದಿನನಿತ್ಯ ದೊರಕುತ್ತವೆ ಮತ್ತು ಕರ್ನಾಟಕ ಸರ್ಕಾರದ ಇತ್ತೀಚಿನ ಯೋಜನೆಗಳು ಹಾಗೂ ಉದ್ಯೋಗದ ಮಾಹಿತಿಗಳು ದೊರಕುತ್ತದೆ.
ರೇಷನ್ ಕಾರ್ಡನ್ನು ಉಳಿಸಿಕೊಳ್ಳಲು ಎರಡು ಮಾರ್ಗಗಳನ್ನು ಅನುಸರಿಸಿ.
ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡನ್ನು ರೇಷನ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಸಿ ಅಂದಾಗ ಮಾತ್ರ ಅವರು ರೇಷನ್ ಕಾರ್ಡ್ ನಲ್ಲಿ ಇರಲು ಯೋಗ್ಯರು ಇಲ್ಲ ಅಂದರೆ ಅವರ ಹೆಸರುಗಳು ರೇಷನ್ ಕಾರ್ಡ್ ನಿಂದ ಡಿಲೀಟ್ ಆಗುತ್ತದೆ ಎಂದು ತಿಳಿದುಬಂದಿದೆ.
ರೇಷನ್ ಕಾರ್ಡ್ ನಲ್ಲಿ ಹೆಸರು ಇದ್ದು ಮತ್ತು ಅವರ ಆಧಾರ್ ಕಾರ್ಡ್ ರೇಷನ್ ಕಾರ್ಡ್ ನೊಂದಿಗೆ ಲಿಂಕ್ ಇರುವುದಿಲ್ಲವೋ ಅಂದಾಗ ಅವರ ಹೆಸರು ರೇಷನ್ ಕಾರ್ಡ್ ನಿಂದ ಡಿಲೀಟ್ ಆಗುತ್ತದೆ ಉದಾಹರಣೆಗೆ ಒಂದು ರೇಷನ್ ಕಾರ್ಡ್ ಮೇಲೆ ಐದು ಜನ ಇದ್ದೀರ ಅಂತ ಇಟ್ಟುಕೊಳ್ಳಿ ಐದು ಜನರ ಆಧಾರ್ ಕಾರ್ಡ್ ರೇಷನ್ ಕಾರ್ಡ್ ನೊಂದಿಗೆ ಲಿಂಕ್ ಆಗಿರಬೇಕು.
ರೇಷನ್ ಕಾರ್ಡ್ ಉಳಿಸಿಕೊಳ್ಳಲು ಈ ಮಾರ್ಗವೂ ಕೂಡ ಅನುಸರಿಸಬೇಕು!
ರೇಷನ್ ಕಾರ್ಡ್ ನಲ್ಲಿರುವ ಪ್ರತಿಯೊಬ್ಬ ಸದಸ್ಯರು ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ನ ಕೆವೈಸಿ ಯನ್ನು ಮಾಡಿಸಿರಬೇಕಾಗುತ್ತದೆ ಅಂದಾಗ ಮಾತ್ರ ರೇಷನ್ ಕಾರ್ಡ್ ನಿಷ್ಕ್ರಿಯಗೊಳಿಸುವುದನ್ನು ತಪ್ಪಿಸಬಹುದಾಗಿರುತ್ತದೆ ಈ ಕೆಲಸಗಳನ್ನು ನೀವು ಮಾಡಿದ್ದೆ ಆದಲ್ಲಿ ನಿಮ್ಮ ರೇಷನ್ ಕಾರ್ಡಿಗೆ ಯಾವುದೇ ತೊಂದರೆ ಇಲ್ಲ ಮಾಡಿಲ್ಲ ಅಂದರೆ ಫೆಬ್ರವರಿ 29 ನೇ ತಾರೀಕು ಕೊನೆಯ ದಿನಾಂಕವಾಗಿರುತ್ತದೆ.
ನೀವೇನಾದರೂ ಫೆಬ್ರವರಿ 29 ನೇ ತಾರೀಕು ಮುಗಿದರೂ ಕೂಡ ನೀವು ಈ ಕೆಲಸಗಳನ್ನು ಮಾಡದೆ ಇದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ಅನ್ನು ತಾತ್ಕಾಲಿಕವಾಗಿ ನಿಷ್ಕ್ರಿಯೆಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಈ ಎರಡು ಕೆಲಸಗಳನ್ನು ಹೇಗೆ ಮಾಡುವುದು?
ನಿಮ್ಮ ಮೊಬೈಲಲ್ಲಿ ಮೇರಾ ರೇಷನ್ ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳೋ ಮೂಲಕ ಅದೇ ಅಪ್ಲಿಕೇಶನ್ ನಲ್ಲಿ ನೀವು ಮಾಡಿಕೊಳ್ಳಬಹುದು. ನಿಮಗೆ ತಿಳಿದೇ ಇದ್ದಲ್ಲಿ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯನ್ನು ಸಂಪರ್ಕಿಸಿ ಅಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಕಂಪ್ಯೂಟರ್ ಆಪರೇಟರ್ಗಳು ಇರುತ್ತಾರೆ ಅವರಿಗೆ ನೀವು ರೇಷನ್ ಕಾರ್ಡ್ ಲಿಂಕ್ ಮತ್ತು ರೇಷನ್ ಕಾರ್ಡ್ ನಲ್ಲಿ e-KYC ಯನ್ನು ಮಾಡಲು ಅವರಿಗೆ ತಿಳಿಸಿ ಅವರು ಮಾಡುತ್ತಾರೆ.
ಆದರೆ ಒಂದು ಮಾತು ನೆನಪಿಟ್ಟುಕೊಳ್ಳಿ ನೀವು ಫೆಬ್ರವರಿ 29 ನೇ ತಾರೀಖಿನ ಒಳಗಾಗಿ ಈ ಎರಡು ಕೆಲಸಗಳನ್ನು ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ತಾತ್ಕಾಲಿಕವಾಗಿ ರದ್ದಾಗಿದ್ದು ಅಲ್ಲದೆ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಲ್ಲಿ ನಿಮಗೆ ರೂ.2000 ಹಣ ದೊರಕುವುದಿಲ್ಲ ಹಾಗೂ ರೇಷನ್ ಕಾರ್ಡ್ ನ ಅಕ್ಕಿ ಹಣವು ಕೂಡ ನಿಮಗೆ ದೊರಕುವುದಿಲ್ಲ..!