ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ! ಇಲ್ಲಿದೆ ನೋಡಿ ವಿವರ

Ration Card Correction News

Ration Card Correction News: ನಮಸ್ಕಾರ ಸ್ನೇಹಿತರೇ ,ನೀವು ಎಪಿಎಲ್ (APL), AAY ಅಥವಾ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಬೇಕ? ಹಾಗಿದ್ರೆ ಈ ಸುದ್ದಿ ನಿಮಗಾಗಿ ಇದೇ.ಕೊನೆಯವರೆಗೂ ಓದಿ.

ಸ್ನೇಹಿತರೆ, ಇದೀಗ ರಾಜ್ಯ ಸರ್ಕಾರ (State government) ಜನತೆಗೆ ಗುಡ್ ನ್ಯೂಸ್ ನೀಡಿದ್ದು ಇನ್ನು ಸದ್ಯದಲ್ಲಿಯೇ ರೇಷನ್ ಕಾರ್ಡ್ (Ration Card) ವಿತರಣೆ ಮಾಡುವುದಾಗಿ ಮಾಹಿತಿಯನ್ನೂ ಕೂಡ ನೀಡಿದೆ. ಇದರ ಜೊತೆಗೆ ಹೊಸ ರೇಷನ್ ಕಾರ್ಡ್ ಗೆ ಅಪ್ಲಿಕೇಶನ್ ಕೂಡ ಹಾಕಬಹುದು ಎನ್ನುವುದು ಖುಷಿಯ ವಿಚಾರ ಕೂಡ ತಿಳಿಸಲಾಗಿದೆ.

ಕಳೆದ 2.5 ವರ್ಷಗಳಿಂದ ಕೇವಲ 57,000 ರೇಷನ್ ಕಾರ್ಡ್(Ration Card)ಅರ್ಜಿಗಳನ್ನು ಪರಿಶೀಲಿಸಿ ಫಲಾನುಭವಿಗಳಿಗೆ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಹೊರತು 2.95 ಲಕ್ಷ ಪಡಿತರ ಚೀಟಿ ಅರ್ಜಿಗಳಲ್ಲಿ ಇಂದಿಗೂ ಲಕ್ಷಾಂತರ ಅರ್ಜಿಗಳು ನೆನೆಗುದಿಗೆ ಬಿದ್ದಿವೆ ಎಂದೇ ಹೇಳಬಹುದು.

ಈ ಸನ್ನಿವೇಶವನ್ನೂ ಪರಿಗಣಿಸಿರುವ ರಾಜ್ಯ ಸರ್ಕಾರ ಇದೆ ವರ್ಷ ಮಾರ್ಚ್ 31ನೇ ತಾರೀಖಿನ ಒಳಗೆ ಅರ್ಜಿಗಳನ್ನು ಪರಿಶೀಲಿಸಿ, ಏಪ್ರಿಲ್ 01 ರಿಂದ BPL ಮತ್ತು APL ಕಾರ್ಡ್ ವಿತರಣೆ ಮಾಡಲು ಆರಂಭಿಸಲಾಗುವುದು ಎಂದು ಭರವಸೆಯನ್ನೂ ಕೂಡ ಇದೀಗ ಹೊಸದಾಗಿ ನೀಡಿದೆ.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ ಯಾವಾಗ?

ಈಗಾಗಲೇ ಸುಮಾರು ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ 700ಕ್ಕೂ ಹೆಚ್ಚಿನ ಮೆಡಿಕಲ್ ಎಮರ್ಜೆನ್ಸಿ(Medical Emergency)ಸಲುವಾಗಿ ರೇಷನ್ ಕಾರ್ಡ್(Ration Card)ವಿತರಣೆ ಮಾಡಲಾಗಿದೆ ಎಂದೇ ಹೇಳಬಹುದು. ಆದರೆ ಇದರಿಂದ ಎಲ್ಲರೂ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಬಹುದು. ಆದ್ದರಿಂದ ಹೊಸ ಪಡಿತರ ಚೀಟಿ ವಿತರಣೆ ಮಾಡಲು ಹಾಗೂ ಹೊಸ ಅರ್ಜಿಗಳನ್ನು ಸ್ವೀಕರಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿಸಲಾಗಿದೆ.

ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಇಂತವರಿಗೆ ಮಾತ್ರ ಅವಕಾಶ!

ಹೊಸದಾಗಿ ಮದುವೆಯಾಗಿರುವ ದಂಪತಿಗಳು ಇನ್ನೊಂದು ಕುಟುಂಬವನ್ನು ಸೇರಿದ ನವದಂಪತಿಗಳು ಮದುವೆಯ ನಂತರ ಬೇರೆ ಮನೆ ಮಾಡಿ ವಾಸಿಸುತ್ತಿದ್ದಾರೆ ಎಂದೇ ಹೇಳಬಹುದು. ಅಂತವರು ಹೊಸ ರೇಷನ್ ಕಾರ್ಡ್(Ration Card)ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

ಎರಡನೆಯದಾಗಿ ಈಗಾಗಲೇ ರೇಷನ್ ಕಾರ್ಡ್(Ration Card)ಹೊಂದಿರುವ ಕುಟುಂಬದಿಂದ ಬೇರೆ ಉಳಿದು ಬೇರೆ ಮನೆಯಲ್ಲಿ ವಾಸ ಮಾಡುವವರು ಸಹ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಬಹುದು ಎಂದು ಕೂಡ ತಿಳಿಸಲಾಗಿದೆ.

ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ!

ಸ್ನೇಹಿತರೆ,ಈಗಾಗಲೇ ಅರ್ಜಿ ಸಲ್ಲಿಕೆ ಆಗಿರುವ ಅರ್ಜಿಗಳ ವಿತರಣೆ ಹೊಸ ರೇಷನ್ ಕಾರ್ಡ್(New Ration Card)ಪಡೆದುಕೊಳ್ಳಲು ಅರ್ಜಿ(Application)ಸ್ವೀಕಾರ ಇವುಗಳ ಜೊತೆಗೆ ಈಗಾಗಲೇ ಇರುವ ರೇಷನ್ ಕಾರ್ಡ್ ನಲ್ಲಿ ಅಗತ್ಯ ಇರುವ ಬದಲಾವಣೆಗೆ ಕೂಡ ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಲಿದೆ ಎಂದು ತಿಳಿಸಲಾಗಿದೆ.

ಸ್ನೇಹಿತರೆ,ಈ ಮೂಲಕ ತಿದ್ದುಪಡಿ ಮಾಡಿಕೊಳ್ಳಬಹುದಾಗಿದ್ದರೂ ಕೂಡ Online Portal ಗಳು ಇಡೀ ದಿನ ತಮ್ಮ ಕಾರ್ಯನಿರ್ವಹಿಸುವುದಿಲ್ಲ, ಇಂತಹ ಸಂದರ್ಭದಲ್ಲಿ ನೀವು ಹತ್ತಿರದ ಆನ್ಲೈನ್ ಸೇವಾ ಕೇಂದ್ರಕ್ಕೆ ಹೋಗಿ ಆನ್ಲೈನ್ ಪೋರ್ಟಲ್(Online Portal)ತೆರೆದುಕೊಳ್ಳುವ ಸಮಯದಲ್ಲಿ ತಿದ್ದುಪಡಿ ಮಾಡಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡುತ್ತೇನೆ.

WhatsApp Group Join Now
Telegram Group Join Now