ಇಂತಹ ಮಹಿಳೆಯರಿಗೆ ಸಿಗಲ್ಲಾ ಗೃಹಲಕ್ಷ್ಮಿ ಹಣ! ನಿಮ್ಮ ಹೆಸರು ಕೂಡ ಇದೆಯಾ ಅಂತ ತಿಳಿದುಕೊಳ್ಳಿ!

Gruhalaxmi Scheme News: ಸ್ನೇಹಿತರೇ, ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ,ಗೃಹಲಕ್ಷ್ಮೀ ಯೋಜನೆಯ 5 ಕಂತಿನ ಹಣ,ಮಹಿಳೆಯರ ಬ್ಯಾಂಕ್‌ ಖಾತೆ(Bank Account)ಗೆ ನೇರ ವರ್ಗಾವಣೆಯ ಮೂಲಕ ಜಮೆ ಆಗಿದೆ.

ಕರ್ನಾಟಕ ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದೇ ಹೇಳಬಹುದು. ಈ ಪೈಕಿ ಗೃಹಲಕ್ಷ್ಮೀ ಯೋಜನೆ ಕೂಡ ಅದರಲ್ಲಿ ಒಂದು. ಈ ಯೋಜನೆಯ ಮೂಲಕ ಮಹಿಳೆಯರಿಗೆ ಪ್ರತೀ ತಿಂಗಳು ₹2,000 ರೂಪಾಯಿ ಹಣವನ್ನು ಬ್ಯಾಂಕ್‌ ಖಾತೆಗಳಿಗೆ ಹಾಕಲಾಗುತ್ತದೆ.

ಇದುವರೆಗೆ 5 ಕಂತುಗಳ ಮೂಲಕ ಒಟ್ಟು 10 ಸಾವಿರ ರೂಪಾಯಿ ಹಣವನ್ನು ಮಹಿಳೆಯರು ಪಡೆದುಕೊಂಡಿದ್ದಾರೆ. ಆದರೆ 6ನೇ ಕಂತಿನ ಗೃಹಲಕ್ಷ್ಮೀ ಯೋಜನೆಯ ಹಣಕ್ಕಾಗಿ ಫಲಾನುಭವಿಗಳು ಕಾದು ಕೊಂಡು ಕುಳಿತಿದ್ದಾರೆ.

ಆದಾಯ ತೆರಿಗೆ ಪಾವತಿ ಮಾಡುತ್ತಿದ್ದ ಕೆಲವು ಮಹಿಳೆಯರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಗೃಹಲಕ್ಷ್ಮೀ ಯೋಜನೆಯ ಮಾನದಂಡಗಳನ್ನು ಉಲ್ಲಂಘನೆ ಮಾಡಿರುವ ಎಲ್ಲಾ ಮಹಿಳೆಯರ ಖಾತೆಗೆ ಹಣ ಜಮಾ ಮಾಡದಿರಲು ಇದೀಗ ನಿರ್ಧರಿಸಿದೆ.

ಗೃಹಲಕ್ಷ್ಮೀಯ ಹಣವನ್ನು ಪಡೆಯಲು ಫಲಾನುಭವಿಗಳು ಕಡ್ಡಾಯವಾಗಿ e-KYC ಮಾಡಿಸಬೇಕಾಗಿದೆ ಎಂದು ತಿಳಿಸಲಾಗಿದೆ. ಜೊತೆಗೆ NCPI ಮ್ಯಾಪಿಂಗ್‌ ಮಾಡದಿದ್ದರೆ, ರೇಷನ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ update ಆಗೋದಿಲ್ಲ. ಇದರಿಂದಾಗಿ ಅಂತಹ ಫಲಾನುಭವಿಗಳ ಖಾತೆಗೆ ದುಡ್ಡು ಕೂಡ ಜಮ ಆಗೋದಿಲ್ಲ. ಎಲ್ಲವೂ ಸರಿಯಾಗಿದ್ದವರಿಗೆ ಮಾತ್ರ ಯಾವುದೇ ರೀತಿಯ ಸಮಸ್ಯೆ ಆಗದೆ ಬ್ಯಾಂಕ್‌ ಖಾತೆಗೆ ಹಣ ಜಮ ಆಗಲಿದೆ ಎಂದು ತಿಳಿದು ಬಂದಿದೆ.

WhatsApp Group Join Now
Telegram Group Join Now