Gruhalakshmi scheme new update: ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ : ಗೃಹಲಕ್ಷ್ಮಿ ಯೋಜನೆ ಖಾತೆಗೆ ಹಣ ಜಮಾ ಆಗದೆಇರುಅವರಿಗೆ ಸಂತಸದ ಸುದ್ದಿ ಮಹಿಳೆಯರೆ ಗೃಹಲಕ್ಷ್ಮಿ ಯೋಜನೆಯಡಿ ನೀವು ಯಾವುದೇ ಪ್ರಯೋಜನ ಪಡೆದಿಲ್ಲವೇ ಹಾಗಿದ್ರೆ ಈ ವಿಷಯವನ್ನು ತಾವು ತಿಳಿಯಲೇಬೇಕು ಆದರಿಂದ ಮಾಹಿತಿಯನ್ನು ತಪ್ಪದೆ ಸಂಪೂರ್ಣವಾಗಿ ಓದಿ.
ಆಗಸ್ಟ್ 31 ರ ದಿಂದ ಗೃಹಲಕ್ಷ್ಮಿ ಯೋಜನೆಯ ಪ್ರತಿ ತಿಂಗಳು ₹2,000 ರೂ ಧನಸಹಾಯ ಮಹಿಳೆಯರ ಖಾತೆಗೆ ನೇರವಾಗಿ ಜಮಯಾಗಲು ಆರಂಭ ಈ ಯೋಜನೆಯು ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ಮತ್ತು ಸ್ವಾವಲಂಬನೆಯತ್ತ ಒಂದು ಮಹತ್ವದ ದಾರಿ. ಗೃಹಲಕ್ಷ್ಮಿ ಯೋಜನೆಯಡಿ ಲಕ್ಷಾಂತರ ಮಹಿಳೆಯರು ಸರ್ಕಾರದಿಂದ ಉಚಿತವಾಗಿ ₹12000/- ರೂಪಾಯಿಗಳನ್ನು ಆರು ಕಂತುಗಳಲ್ಲಿ ಪಡೆಯುತಿದ್ದಾರೆ.
ಗೃಹಲಕ್ಷ್ಮಿ ಯೋಜನೆಯೂ ರಾಜ್ಯ ಸರ್ಕಾರದ ಖಾತರಿ ಯೋಜನೆಗಳಲ್ಲಿ ಉತ್ತಮಸ್ಥಾನದಲ್ಲಿದೆ ಲಕ್ಷಾಂತರ ಕರ್ನಾಟಕದ ಅನೇಕ ಮಹಿಳೆಯರು ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಸರ್ಕಾರದಿಂದ ಉಚಿತ ಹಣ ಪಡೆಯುವ ಅವಕಾಶ ಪಡೆದಿದ್ದಾರೆ ದರೆ ಈ ಯೋಜನೆಯ ಒಂದು ದುಃಖದ ವಿಚಾರ ಎಂದರೆ ಇನ್ನೂ ಕೆಲವು ಅರ್ಹ ಫಲಾನುಭವಿಗಳಿಗೆ ಹಣ ತಲುಪಿಲ್ಲ ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಯಲ್ಲ ಜನರ ಗಮನಕ್ಕೆ ತಂದಿದೆ .
ಗೃಹಲಕ್ಷ್ಮಿ 6 ಕಂತುಗಳ ಹಣ ತಲುಪಿದೆಯೇ :
ತಮಗೆಲ್ಲರಿಗೂ ತಿಳಿದಿರುವ ಹಾಗೆ, ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 6 ಕಂತು ಬಿಡುಗಡೆಯಾಗಿ, ₹12,000 ಸಹಾಯಧನ ಸಿಕ್ಕಿದೆ ಆದರೆ ಈ ಸೌಲಭ್ಯ ಎಲ್ಲಾ ಮಹಿಳೆಯರನ್ನೂ ತಲುಪಿದೆಯೇ
ಈ ವರದಿಯ ಪ್ರಕಾರ 8.2 ಲಕ್ಷ ಹೆಚ್ಚು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲಿಕೆ ಕಾಯುತ್ತಿದ್ದಾರೆ ಕೆಲವರಿಗೆ ಕೇವಲ ಒಂದೆರಡು ತಿಂಗಳ ಕಂತುಗಳು ಮಾತ್ರ ಬಂದಿದೆ ಈ ಸಮಸ್ಯೆಗೆ ತಾಂತ್ರಿಕ ಸಮಸ್ಯೆಗಳು ಕೆವೈಸಿಯ ನವೀಕರಣದ ಕೊರತೆ ರೇಷನ್ ಕಾರ್ಡ್ನಲ್ಲಿನ ತಿದ್ದುಪಡಿ ಮತ್ತು ರೇಷನ್ ಕಾರ್ಡ್ ಹಾಗೂ ಆದಾರ್ ಕಾರ್ಡ್ ಲಿಂಕ್ಗಳ ಸಮಸ್ಯೆ ಸೇರಿದಂತೆ ಮುಂತಾದ ಕಾರಣಗಳಿವೆ .
ವಿಧಾನಸಭೆಯಲ್ಲಿ ಗೃಹ ಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಹಣ ಜಮಾ ಆಗದಿರುವ ವಿಚಾರದ ಬಗ್ಗೆ ಚರ್ಚೆ ನಡೆಸಿದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಈ ಬಗ್ಗೆ ಪ್ರಶ್ನೆ ಮಾಡಲಾಗಿತ್ತು .
ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಬಗ್ಗೆ ಉತ್ತರಿಸುತ್ತಾ ಕೆಲವು ಮಹಿಳೆಯರ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದಿರುವುದರಿಂದ ಅವರಿಗೆ ಹಣ ಜಮಾ ಆಗಿಲ್ಲ ಎಂದು ತಿಳಿಸಿದ್ದಾರೆ ಈ ತಾಂತ್ರಿಕ ದೋಷಗಳನ್ನು ಸದ್ಯದಲ್ಲಿಯೇ ಪರಿಹರಿಸಿ ಫಲಾನುಭವಿಗಳಿಗೆ ಹಣ ಜಮಾ ಮಾಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಪ್ರತಿ ಕಂತಿನ ಹಣ ಬಿಡುಗಡೆ ಪ್ರಕ್ರಿಯೆ ಪ್ರತಿ ತಿಂಗಳು 15ನೇ ತಾರೀಖಿನಿಂದ ಆರಂಭವಾಗಲಿದೆ ಯಾವುದೇ ಮಹಿಳೆಯರ ಖಾತೆಗೆ ಹಣ ಬರದಿದ್ದರೆ ಈ ಕೆಳಗಿನ ಸೂಚನೆಗಳು ಅನುಸರಿಸಬಹುದು.
ಇನ್ನೂ ಹಣ ಬರದೆ ಇದ್ದವರು ಹೀಗೆ ಮಾಡಬೇಕು:
ಖಾತೆಗೆ ಹಣ ಬರದೆ ಇದ್ದರೆ ಅದಕ್ಕೆ ಸಂಬಂಧಪಟ್ಟ ಇಲಾಖೆ ಅಥವಾ ಸಿಡಿಪಿಓ ಕಚೇರಿಗಳಿಗೆ ಭೇಟಿ ನೀಡಿ ನಿಮ್ಮ ಖಾತೆಯಲ್ಲಿ ಯಾವುದಾದರೂ ಸಮಸ್ಯೆಗಳಿದ್ದರೆ ಪರಿಹರಿಸಲಿಕೆ ದೂರನ್ನು ನೀಡಿಬಹುದಾಗಿದೆ.
ಖಾತೆಯ ಸಮಸ್ಯೆಗಳನ್ನು ಪರಿಹರಿಸಿ ಖಾತೆಯ ನಂಬರ್ ಆಧಾರ್ ನಂಬರ್ BPL ಕಾರ್ಡ್ ನಂಬರ್ ಇತ್ಯಾದಿಗಳಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ಸರಿಪಡಿಸಿ ಖಾತೆಯ ಸಮಸ್ಯೆಗಳನ್ನು ಪರಿಹರಿಸಿದ ನಂತರ ಮುಂದಿನ ಕಂತಿನ ಹಣ ಖಾತೆಗೆ ಜಮವಾಗುತ್ತದೆ.
ಗೃಹಲಕ್ಷ್ಮಿ ಯೋಜನೆಯ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಎಲ್ಲಾ ಮಹಿಳೆಯರ ಖಾತೆಗೆ ಹಣ ಜಮವಾಗುತ್ತದೆ ಎಂದು ಭರವಸೆ ನೀಡಿದ್ದಾರೆ ಖಾತೆಗೆ ಹಣ ಬರದಿದ್ದರೆ ಆತಂಕ ಪಡಬೇಕಾಗಿಲ್ಲ ಮುಂದಿನ ಕಂತಿನ ಹಣ ಬಿಡುಗಡೆಯ ನಿರೀಕ್ಷೆಯಲ್ಲಿರುವ ಮಹಿಳೆಯರು ಖಾತೆಯಲ್ಲಿ ಯಾವುದಾದರೂ ಸಮಸ್ಯೆಇದ್ದರೆ ಮೇಲೆ ತಿಳಿಸಿದಂತೆ ಪರಿಹರಿಸಿಕೊಂಡು ನಂತರ ಹಣ ಪಡೆಯಬಹುದು.
ಓದುಗರ ಗಮನಕ್ಕೆ: ನಿಮ್ಮ ಕನಾ೯ಟಕ ಶಿಕ್ಷಣ ತನ್ನ ಓದುಗರರಿಗೆ ಯಾವುದೇ ಸುಳ್ಳು ಸುದ್ದಿಗಳನ್ನು ತಿಳಿಸುವದಿಲ್ಲ ಮತ್ತು ಇಂತಹ ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜನ್ನು ಅನುಸರಿಸಿ.
ಇಲ್ಲಿವರೆಗೆ ಓದಿದ್ದಕ್ಕೆ ಧನ್ಯವಾದಗಳು