Income Tax Department Recruitment 2023: ನಮಸ್ಕಾರ ಸ್ನೇಹಿತರೇ ಕರ್ನಾಟಕದ ಸಮಸ್ತ ಜನರಿಗೆ ನಮಸ್ಕಾರಗಳು, ಆದಾಯ ಮತ್ತು ತೆರಿಗೆ ಇಲಾಖೆಯಲ್ಲಿ ಖಾಲಿ ಹುದ್ದೆಗಳಿದ್ದು 10ನೇ ತರಗತಿ ಮತ್ತು 12ನೇ ತರಗತಿ ಪಾಸಾದ ಯುವಕ ಯುವತಿಯರಿಗೆ ಒಂದು ಒಳ್ಳೆಯ ಅವಕಾಶ ಎಂದು ಹೇಳಬಹುದು ಯಾರೆಲ್ಲಾ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ನಲ್ಲಿ ಉದ್ಯೋಗವನ್ನು ಮಾಡಲು ಇಷ್ಟಪಡುತ್ತಾರೋ ಅವರು 10ನೇ ತರಗತಿ ಮತ್ತು 12ನೇ ತರಗತಿ ಅಂದರೆ ಪಿಯುಸಿ ಪಾಸಾದರು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಹಾಗಾದರೆ ಇನ್ಯಾಕೆ ತಡ ಈ ಉದ್ಯೋಗದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ ಮತ್ತು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮುನ್ನ ಅದರಲ್ಲಿನ ಸಂಬಳ ಮತ್ತು ವಯೋಮಿತಿ ಹಾಗೂ ಅರ್ಹತೆಗಳನ್ನು ತಿಳಿದುಕೊಂಡು ಯಾವ ದಿನಾಂಕದಂದು ಅರ್ಜಿ ಸಲ್ಲಿಸಬೇಕು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು, ಎಂಬ ಪೂರ್ತಿ ಮಾಹಿತಿಯನ್ನು ಪಡೆದುಕೊಳ್ಳಿ.
ಸ್ನೇಹಿತರೆ ಆದಾಯ ತೆರಿಗೆ ಇಲಾಖೆಯಲ್ಲಿ ಬಂಪರ್ ಉದ್ಯೋಗವಕಾಶವಿದ್ದು, ಆಸಕ್ತರು ಈ ಕೂಡಲೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 55 ಮಲ್ಟಿ ಟಾಸ್ಕಿನ್ ಸ್ಟಾಪ್, ಟ್ಯಾಕ್ಸ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜನ್ನು ಹಾಕಬಹುದು.
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಮುಂದಿನ ವರ್ಷ ಅಂದರೆ 2024ರಲ್ಲಿ ಮೊದಲ ತಿಂಗಳು ಜನವರಿ 16ನೇ ತಾರೀಕಿನಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ ಮತ್ತು ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ ಡಿಸೆಂಬರ್ 12 2023 ಆಗಿರುತ್ತದೆ. ಕೊನೆ ದಿನಾಂಕದೊಳಗೆ ಅರ್ಜಿ ಸಲ್ಲಿಸಿದರೆ ಬಹಳ ಒಳ್ಳೆಯದು.
ಕೇಂದ್ರ ಸರ್ಕಾರದಿಂದ ಉದ್ಯೋಗ ಬೇಕು ಎಂದು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಒಂದು ಒಳ್ಳೆಯ ಅವಕಾಶ ಎಂದು ಹೇಳಬಹುದು ಆದ ಕಾರಣ ಅಭ್ಯರ್ಥಿಗಳು ಆಸಕ್ತಿ ಇದ್ದಲ್ಲಿ ಮತ್ತು ಅರ್ಹತೆಯುಳ್ಳಲ್ಲಿ ಆನ್ಲೈನ್ ನಲ್ಲಿ ಸರಿಯಾದ ದಾಖಲೆಗಳನ್ನು ಒದಗಿಸುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬುದರ ಪೂರ್ಣವಾದ ಮಾಹಿತಿ ಇಲ್ಲಿದೆ.
ಯಾವ ಹುದ್ದೆಗಳು ಖಾಲಿ ಇವೆ ಎಂಬುದರ ವಿವರ:
- ಮಲ್ಟಿ ಟಾಸ್ಕಿಂಗ್ ಸ್ಟಾಪ್ (MTS) – 26
- ಸ್ಟೆನೋಗ್ರಾಫರ್ ಗ್ರೇಡ್ II- 2
- ಇನ್ಸ್ಪೆಕ್ಟರ್ ಆಫ್ ಇನ್ಕಮ್ ಟ್ಯಾಕ್ಸ್- 2
- ಟ್ಯಾಕ್ಸ್ ಅಸಿಸ್ಟೆಂಟ್- 25
ಅರ್ಜಿ ಸಲ್ಲಿಸಲು ಬೇಕಾಗುವ ವಿದ್ಯಾರ್ಹತೆ:
- ಇನ್ಸ್ಪೆಕ್ಟರ್ ಆಫ್ ಇನ್ಕಮ್ ಟ್ಯಾಕ್ಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಪದವಿಯನ್ನು ಓದಿರಬೇಕು ಅಥವಾ ಪದವಿಯನ್ನು ಪಡೆದಿರಬೇಕು.
- ಸ್ಟೆನೋಗ್ರಾಫರ್ ಗ್ರೇಡ್ ಹುದ್ದೆಯನ್ನು ಪಡೆದುಕೊಳ್ಳಲು ಅಭ್ಯರ್ಥಿಯು 12ನೇ ತರಗತಿ ಅಂದರೆ ದ್ವಿತೀಯ ಪಿಯುಸಿ ಮುಗಿಸಿರಬೇಕು.
- ಮಲ್ಟಿ ಟಾಸ್ಕಿಂಗ್ ಸ್ಟಾಪ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಯು ಹತ್ತನೇ ತರಗತಿ ಓದಿದರೆ ಸಾಕು ಅಂದರೆ ಎಸ್ ಎಸ್ ಎಲ್ ಸಿ ಓದಿದ್ದರೆ ಸಾಕು ಅಭ್ಯರ್ಥಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ವಯೋಮಿತಿ:
- ಇನ್ಸ್ಪೆಕ್ಟರ್ ಆಫ್ ಇನ್ಕಮ್ ಟ್ಯಾಕ್ಸ್ ಜೊತೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ ವಯೋಮಿತಿ 30 ವರ್ಷ ಆಗಿರುತ್ತದೆ.
- ಟ್ಯಾಕ್ಸ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ ವಯೋಮಿತಿ 27 ವರ್ಷದವರೆಗೆ ಆಗಿರುತ್ತದೆ.
- ಮಲ್ಟಿ ಟಾಸ್ಕಿಂಗ್ ಸ್ಟಾಪ್ ಉದ್ದಗ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ವಯೋಮಿತಿಯಲ್ಲಿ 18 ವರ್ಷದಿಂದ ಅಂದರೆ ಕನಿಷ್ಠ 18 ವರ್ಷದ ಮೇಲ್ಪಟ್ಟ ಇರಬೇಕು ಮತ್ತು ಗರಿಷ್ಠವಾಗಿ 25 ವರ್ಷ ದಾಟಿರಬಾರದು. ಅಂದಾಗ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ವರ್ಗದ ಅನುಸಾರವಾಗಿ ವಯೋಮಿತಿ ಸಡಲಿಕ್ಕೆ ಇರುತ್ತದೆ ಹಾಗಾದರೆ ಯಾವ ಅಭ್ಯರ್ಥಿಗಳಿಗೆ ಎಷ್ಟು ವ್ಯಯಕ್ತಿಸಲಿಕೆ ಎಂಬುದನ್ನು ತಿಳಿದುಕೊಳ್ಳಿ ಓಬಿಸಿ ಮತ್ತು ಇತರೆ ಅಭ್ಯರ್ಥಿಗಳಿಗೆ ಐದು ವರ್ಷ ಇರುತ್ತದೆ ಮತ್ತು ಎಸ್ ಟಿ ಮತ್ತು ಎಸ್ ಟಿ ವರ್ಗದ ಅಭ್ಯರ್ಥಿಗಳಿಗೆ ಸಡಲಿಕ್ಕೆ ಹತ್ತು ವರ್ಷ. ಹಾಗೂ ಉದ್ಯೋಗದ ಸ್ಥಳವು ರಾಜಸ್ಥಾನದ ಜೈಪುರ್ ಆಗಿರುತ್ತದೆ.
ಸಂಬಳದ ಮಾಹಿತಿ:
- ಇನ್ಸ್ಪೆಕ್ಟರ್ ಆಫ್ ಇನ್ಕಮ್ ಟ್ಯಾಕ್ಸ್ ಹುದ್ದೆಗೆ ಆಯ್ಕೆಯಾದರೆ ಪ್ರತಿ ತಿಂಗಳಿಗೆ ಸಂಬಳವೂ ₹ 44,900-1,42,400 ಆಗಿರುತ್ತದೆ.
- ಮಲ್ಟಿ ಟಾಸ್ಕಿಂಗ್ ಸ್ಟಾಪ್ ಹುದ್ದೆಗೆ ಆಯ್ಕೆಯಾದರೆ ಪ್ರತಿ ತಿಂಗಳಿಗೆ ವೇತನವು ₹ 18,000-56,900 ಆಗಿರುತ್ತದೆ.
- ಟ್ಯಾಕ್ಸ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆಯಾದರೆ ಪ್ರತಿ ತಿಂಗಳಿಗೆ ಸಂಬಳವೂ ₹ 25,500- 81,100 ಆಗಿರುತ್ತದೆ.
- ಸ್ಟೆನೋಗ್ರಾಫರ್ ಗ್ರೇಡ್ 2 ಹುದ್ದೆಗೆ ಆಯ್ಕೆಯಾದರೆ ಪ್ರತಿ ತಿಂಗಳಿಗೆ ಸಂಬಳವೂ ₹ 25,500-81,100 ಆಗಿರುತ್ತದೆ ಎಂದು ತಿಳಿಸಲಾಗಿದೆ.
ಅಭ್ಯರ್ಥಿಗಳು ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿರುವುದಿಲ್ಲ ಅರ್ಜಿ ಸಲ್ಲಿಸುವುದು ಉಚಿತವಾಗಿರುತ್ತದೆ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸುವ ಮೂಲಕ ಆದಾಯ ಮತ್ತು ತೆರಿಗೆ ಇಲಾಖೆಯಲ್ಲಿ ಉದ್ಯೋಗವನ್ನು ಪಡೆದುಕೊಳ್ಳಿ.
ಆಯ್ಕೆಯ ಪ್ರಕ್ರಿಯೆ ಯಾವರೀತಿಯದಾಗಿರುತ್ತದೆ?
- ಸ್ಪೋರ್ಟ್ಸ್ ಟ್ರಯಲ್ಸ್
- ಮೆರಿಟ್ ಲಿಸ್ಟ್
- ಸರ್ಟಿಫಿಕೇಟ್ ಎವಾಲ್ಯುಯೇಷನ್
- ಸ್ಟೆನೋಗ್ರಫಿ ಟೆಸ್ಟ್
- ಮೆಡಿಕಲ್ ಪರೀಕ್ಷೆ
- ಕ್ಯಾರೆಕ್ಟರ್ ಅಂಡ್ ಅಂಟುಸಿಡೆಂಟ್ಸ್
- ದಾಖಲಾತಿ ಪರಿಶೀಲನೆ
- ಡೇಟಾ ಎಂಟ್ರಿ ಸ್ಕಿಲ್ ಟೆಸ್ಟ್
- ವೆರಿಫಿಕೇಷನ್
ಆಸಕ್ತ ಅಭ್ಯರ್ಥಿಗಳ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಆನ್ಲೈನ್ನಲ್ಲಿ ಹೇಗೆ ಅನ್ನೋದನ್ನ ತಿಳಿಸಿ ಕೊಡುತ್ತೇನೆ. ಈ ಕೆಳಗೆ ಕೊಟ್ಟಿರುವ ಲಿಂಕ್ ಮೂಲಕ ನೀವು ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಸಲ್ಲಿಸುವಲು ಬೇಕಾಗುವ ಲಿಂಕ್ ಈ ಕೆಳಗೆ ನೀಡಿರುತ್ತೇನೆ.
ಅರ್ಜಿ ಸಲ್ಲಿಸುವ ಜಾಲತಾಣ
https://sso.rajasthan.gov.in/signin
ಮೇಲೆ ಕೊಟ್ಟಿರುವ ವೆಬ್ ಸೈಟ್ ಲಿಂಕ್ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ ಡಿಸೆಂಬರ್ 12ನೇ ತಾರೀಕು 2023 ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2024ರಲ್ಲಿ ಜನವರಿ 16ನೇ ತಾರೀಕು ಆಗಿರುತ್ತದೆ ಇದರ ಒಳಗೆ ಅರ್ಜಿಯನ್ನು ಸಲ್ಲಿಸಿದರೆ ಮಾನ್ಯವಾಗಿರುತ್ತದೆ.
ಸ್ನೇಹಿತರೆ ಈ ಮೇಲ್ಕಂಡ ಮಾಹಿತಿ ತಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಉದ್ಯೋಗ ಹುಡುಕುತ್ತಿರುವ ಗೆಳೆಯರಿಗೆ ಹಂಚಿಕೊಳ್ಳಿ. ನಿಮ್ಮ ಸ್ನೇಹಿತರು ಸುತ್ತಮುತ್ತ ಕೇಂದ್ರ ಸರ್ಕಾರದ ಹುದ್ದೆಗಳನ್ನು ಹುಡುಕುತ್ತಿದ್ದರೆ ಈ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಳ್ಳಿ ಮತ್ತು ನಿಮ್ಮ ಕುಟುಂಬದವರಿಗೂ ಕೂಡ ಹಂಚಿಕೊಳ್ಳಿ ಎಲ್ಲರಿಗೂ ಉಪಯುಕ್ತವಾಗಲಿ ಎಂಬ ಆಶಯವಾಗಿದೆ. ಈ ಲೇಖನವನ್ನು ನಿಮಗೆ ಉಪಯೋಗವಾಗಲಿ ಎಂದು ಹಾಕಲಾಗಿರುತ್ತದೆ.