ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ಹೊಸ ಪಡಿತರ ಚೀಟಿಗೆ ಯಾವ ರೀತಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಎಂಬುದರ ಎಲ್ಲಾ ಸಂಪೂರ್ಣವಾದ ವಿವರ ಈ ಲೇಖನದಲ್ಲಿದೆ, ಕೊನೆವರೆಗೂ ಲೇಖನವನ್ನು ಓದುವ ಮುಖಾಂತರ ನೀವು ಕೂಡ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನು ಆನ್ಲೈನ್ ಮುಖಾಂತರವೇ ಸಲ್ಲಿಸಬಹುದಾಗಿದೆ. ಎಲ್ಲಾ ಸರ್ಕಾರಿ ಯೋಜನೆಗಳಿಗೆ ಹಾಗೂ ವೈದ್ಯಕೀಯ ಕೆಲಸಗಳಿಗೆ ಮತ್ತು ಉದ್ಯೋಗಗಳಿಗೂ ಕೂಡ ರೇಷನ್ ಕಾರ್ಡ್ ಬೇಕೇ ಬೇಕು. ಹೊಸ ರೇಷನ್ ಕಾರ್ಡ್ಗಳನ್ನು ಪಡೆಯಲು ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಎಂಬುದರ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
2024 ನೇ ಸಾಲಿನ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ.
ಹೌದು ಸ್ನೇಹಿತರೆ ಏಪ್ರಿಲ್ ಒಂದನೇ ದಿನಾಂಕದಿಂದ ಎಲ್ಲಾ ಲಕ್ಷಾಂತರ ಕುಟುಂಬದ ಸದಸ್ಯರು ಕೂಡ ಬಿಪಿಎಲ್ ರೇಷನ್ ಕಾರ್ಡ್ಗಳಿಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ. ನೀವು ಕೂಡ ಅವರಂತೆ ಅರ್ಜಿಯನ್ನು ಸಲ್ಲಿಕೆ ಮಾಡಿ ಹೊಸ ಪಡಿತರ ಚೀಟಿಗಳನ್ನು ಪಡೆಯಲು ಬಯಸುವಿರಿ ಎಂದರೆ, ನೀವು ಕೂಡ ಮೊದಲಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು. ಕೆಲವು ದಾಖಲಾತಿಗಳು ಮತ್ತು ಪ್ರಮುಖ ಅರ್ಹತೆಗಳನ್ನು ಈ ಅಭ್ಯರ್ಥಿಗಳು ಹೊಂದಿರಬೇಕಾಗುತ್ತದೆ. ಆ ಅರ್ಹತಾ ಮಾನದಂಡಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿರಿ…
ಉದ್ಯೋಗ ಪಡೆಯಲು ಏಕೆ ಈ ಒಂದು ರೇಷನ್ ಕಾರ್ಡ್ ಬೇಕು ಎಂದರೆ, ಕೆಲವೊಂದು ಸರ್ಕಾರಿ ಕೆಲಸಗಳಿಗೆ ಪಡಿತರ ಚೀಟಿ ಇದ್ದರೆ ಮಾತ್ರ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಏಕೆಂದರೆ ಈ ಕಾರ್ಡ್ ಮುಖಾಂತರ ವಯೋಮಿತಿ ಸಡಿಲಿಕೆ ದೊರೆಯುತ್ತದೆ. ಆ ಒಂದು ವಯೋಮಿತಿ ಸಡಿಲಿಕೆಯನ್ನು ಕೂಡ ನೀವು ಪಡೆದು ಸರ್ಕಾರಿ ನೌಕರಿಯನ್ನು ಕೂಡ ತೆಗೆದುಕೊಳ್ಳಬಹುದು. ಮತ್ತು ವೈದ್ಯಕೀಯ ತಪಾಸಣೆಗೂ ಕೂಡ ಈ ಒಂದು ರೇಷನ್ ಕಾರ್ಡ್ ಕಡ್ಡಾಯ.
ಇತ್ತೀಚಿನ ದಿನಗಳಲ್ಲಿ ಆಯುಷ್ಮಾನ್ ಕಾರ್ಡ್ ಗಳನ್ನು ಬಳಕೆ ಮಾಡುವ ಮುಖಾಂತರ 5 ಲಕ್ಷದವರೆಗೆ ಉಚಿತ ಪ್ರಯೋಜನಗಳನ್ನು ಎಲ್ಲಾ ಅಭ್ಯರ್ಥಿಗಳು ಕೂಡ ಪಡೆಯುತ್ತಿದ್ದಾರೆ. ಅಂದರೆ ಉಚಿತವಾಗಿ ಚಿಕಿತ್ಸೆ 5 ಲಕ್ಷದವರೆಗೂ ಕೂಡ ದೊರೆಯುತ್ತದೆ. ರೇಷನ್ ಕಾರ್ಡ್ ಇದ್ದವರು ಮಾತ್ರ ಈ ರೀತಿಯ ಒಂದು ಆಯುಷ್ಮಾನ್ ಕಾರ್ಡ್ ಗಳನ್ನು ಪಡೆಯಲು ಸಾಧ್ಯ ಹಾಗೂ ಅಂತಹ ಅಭ್ಯರ್ಥಿಗಳಿಗೆ ಮಾತ್ರ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಕೂಡ ಸರ್ಕಾರದಿಂದ ದೊರೆಯುತ್ತದೆ.
ಇದನ್ನು ಓದಿ :- BPL ರೇಷನ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್ ! ಉಚಿತವಾದ 3 ಗ್ಯಾಸ್ ಜೊತೆಗೆ ಸ್ಟವ್ ಕೂಡ ಸಿಗುತ್ತೆ ಕೂಡಲೇ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಕೆಗೆ ಬೇಕಾದ ಪ್ರಮುಖ ದಾಖಲಾತಿಗಳು.
- ಕುಟುಂಬದ ಸದಸ್ಯರ ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ನಿವಾಸ ಪ್ರಮಾಣ ಪತ್ರ
- ಕರೆಂಟ್ ಬಿಲ್
- ಬ್ಯಾಂಕ್ ಖಾತೆ ಮಾಹಿತಿ
- ವೋಟರ್ ಐಡಿ
- ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
- ಪ್ರಸ್ತುತ ಮೊಬೈಲ್ ಸಂಖ್ಯೆ
ಅರ್ಜಿದಾರರಿಗೆ ಇರಬೇಕಾದಂತಹ ಅರ್ಹತೆಗಳಿಗೂ.
- ಬಡ ಕುಟುಂಬದ ಅಭ್ಯರ್ಥಿಗಳು ಮಾತ್ರ ಈ ಒಂದು ರೇಷನ್ ಕಾರ್ಡ್ ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
- ವಾರ್ಷಿಕವಾಗಿ ಒಂದು ಲಕ್ಷಕ್ಕಿಂತ ಕಡಿಮೆ ಆದಾಯವನ್ನು ಈ ಅಭ್ಯರ್ಥಿಗಳ ಕುಟುಂಬ ಹೊಂದಿರತಕ್ಕದ್ದು.
- 18 ವರ್ಷ ಮೇಲ್ಪಟ್ಟ ವಯೋಮಿತಿಯನ್ನು ಹೊಂದಿದಂತಹ ಎಲ್ಲಾ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದು.
- ಇದುವರೆಗೂ ರೇಷನ್ ಕಾರ್ಡ್ಗಳನ್ನು ಹೊಂದಿರಬಾರದು.
- ಭಾರತದಲ್ಲಿಯೇ ಈವರೆಗೂ ವಾಸ ಮಾಡಿರಬೇಕಾಗುತ್ತದೆ. ಅಂದರೆ ಭಾರತೀಯರಾಗಿರಬೇಕು.
- ಅಭ್ಯರ್ಥಿಯ ಕುಟುಂಬದ ಯಾವುದೇ ಸದಸ್ಯರು ಕೂಡ ಸರ್ಕಾರಿ ಕೆಲಸವನ್ನು ಪಡೆದಿರಬಾರದು.
- ಸರ್ಕಾರಿ ಕೆಲಸ ಹೊಂದಿದಂತಹ ಅಭ್ಯರ್ಥಿಗಳಿಗೆ ಎಪಿಎಲ್ ರೇಷನ್ ಕಾರ್ಡ್ ಗಳು ಮಾತ್ರ ದೊರೆಯುತ್ತವೆ.
- ಅಭ್ಯರ್ಥಿಯ ಹೆಸರಿನಲ್ಲಿ 5 ಎಕರೆ ಗಿಂತ ಜಮೀನು ಅಥವಾ ಇನ್ನಿತರ ಆಸ್ತಿ ಕೂಡ ಇರಬಾರದು. ಅಂತವರಿಗೆ ಈ ಒಂದು ಬಿಪಿಎಲ್ ಕಾರ್ಡ್ ಕೂಡ ವಿತರಣೆ ಆಗುವುದಿಲ್ಲ.
- ಆನ್ಲೈನ್ ಮುಖಾಂತರ ಈ ರೀತಿ ಅರ್ಜಿ ಸಲ್ಲಿಕೆ ಮಾಡಿ.
- ಹೊಸ ರೇಷನ್ ಕಾರ್ಡ್ ಗಳ ಅರ್ಜಿ ಸಲ್ಲಿಕೆಯನ್ನು ತೆಗೆದುಕೊಳ್ಳುವಂತಹ ವೆಬ್ಸೈಟ್ಗೆ ಭೇಟಿ ನೀಡಬೇಕು. ಭೇಟಿ ನೀಡಲು ಗೂಗಲ್ ನಲ್ಲಿ ಸರ್ಚ್ ಮಾಡಿರಿ.
- ಭೇಟಿ ನೀಡಿದ ಬಳಿಕ ಹೊಸ ಅರ್ಜಿ ಸಲ್ಲಿಕೆ ಎಂಬುದು ಕಾಣುತ್ತದೆ ಅದರ ಮೇಲೆ ಕ್ಲಿಕಿಸಿ.
- ಆನಂತರ ನಿಮ್ಮ ದಾಖಲಾತಿಗಳನ್ನು ಸಲ್ಲಿಕೆ ಮಾಡಿ.
- ಫೋಟೋ ಜೊತೆಗೆ ಸಲ್ಲಿಕೆ ಮಾಡುವಂತಹ ದಾಖಲಾತಿಗಳನ್ನು ಕೂಡ ನೀವು ಇಲ್ಲಿ ಒದಗಿಸಬೇಕು.
- ಈ ಮೇಲ್ಕಂಡ ಮಾಹಿತಿಯಲ್ಲಿ ತಿಳಿಸಿರುವಂತಹ ಎಲ್ಲಾ ದಾಖಲಾತಿಗಳನ್ನು ಒದಗಿಸಿದ ನಂತರ ಒಂದೊಮ್ಮೆ ಎಲ್ಲಾ ಸರಿಯಾಗಿ ಇದೆಯಾ ಎಂಬುದನ್ನು ಪರಿಶೀಲನೆ ಮಾಡಿದೆ.
- ಆನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ಕಿಸುವ ಮುಖಾಂತರ ನಿಮ್ಮ ಅರ್ಜಿ ಸಲ್ಲಿಕೆಯನ್ನು ಕೂಡ ಮುಕ್ತಾಯಗೊಳಿಸಿರಿ.
- ಕೆಲವೇ ದಿನಗಳಲ್ಲಿ ನಿಮಗೆ ಹೊಸ ರೇಷನ್ ಕಾರ್ಡ್ ಗಳು ಕೂಡ ಈ ಒಂದು ಸರ್ಕಾರಿ ವೆಬ್ಸೈಟ್ನ ಮುಖಾಂತರ ವಿತರಣೆ ಆಗುತ್ತದೆ. ಆ ರೇಷನ್ ಕಾರ್ಡ್ ಗಳನ್ನು ನೀವು ನಿಮ್ಮ ಹತ್ತಿರದ ಆಹಾರ ಇಲಾಖೆ ಕಚೇರಿಗಳಿಗೆ ಭೇಟಿ ನೀಡುವ ಮೂಲಕ ರೇಷನ್ ಕಾರ್ಡ್ ಗಳನ್ನು ಕೂಡ ಪಡೆಯಬಹುದು.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….