ಕಾರ್ಮಿಕರಿಗೆ ಗುಡ್ ನ್ಯೂಸ್ ! E-Shram ಕಾರ್ಡ್ ಹೊಂದಿದ್ರೆ ನಿಮ್ಗೂ ಕೂಡ 3000 ಸಹಾಯಧನ ಹಾಗೂ 2 ಲಕ್ಷ ವಿಮೆ ಕೂಡ ಸಿಗುತ್ತೆ.

ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ಈ ಶ್ರಮ್ ಕಾರ್ಡ್ ಹೊಂದಿರುವವರಿಗೆ ಎಷ್ಟೆಲ್ಲಾ ಪ್ರಯೋಜನಗಳು ಸರ್ಕಾರದಿಂದ ಸಿಗುತ್ತದೆ ಹಾಗೂ ಯಾವೆಲ್ಲ ಸೌಲಭ್ಯವನ್ನು ಸರ್ಕಾರ ಒದಗಿಸುತ್ತದೆ ಎಂಬುದರ ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದ ಮುಖಾಂತರ ಎಲ್ಲಾ ಕಾರ್ಮಿಕರಿಗೂ ಕೂಡ ತಿಳಿಸಲಾಗುತ್ತಿದೆ. ನೀವು ಕೂಡ ಕಾರ್ಮಿಕರೇ ? ಆಗಿದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ. ಯಾವೆಲ್ಲ ಪ್ರಯೋಜನಗಳು ನಿಮಗೂ ಕೂಡ ದೊರೆಯುತ್ತದೆ ಎಂದು, ಈ ಶ್ರಮ್ ಕಾರ್ಡುಗಳನ್ನು ಉಚಿತವಾಗಿಯೇ ಅಸಂಘಟಿತ ವಲಯದ ಕಾರ್ಮಿಕರಿಗೆ ನೀಡಲಾಗುತ್ತದೆ.

ಈ ಶ್ರಮ್ ಕಾರ್ಡ್ಗಳನ್ನು ಸರ್ಕಾರವೇ ಉಚಿತವಾಗಿ ನೀಡುವುದರಿಂದ 3000 ಹಣವನ್ನು ಕೂಡ ಸಹಾಯಧನವಾಗಿ ಕಾರ್ಮಿಕರ ಖಾತೆಗೆ ಜಮಾ ಮಾಡುತ್ತದೆ. ಹಾಗೂ ಎರಡು ಲಕ್ಷದ ವಿಮೆಯನ್ನು ಕೂಡ ನೀಡುತ್ತದೆ, ಇನ್ನಿತರ ಸರ್ಕಾರಿ ಪ್ರಯೋಜನಗಳನ್ನು ಕೂಡ ಈ ಅಸಂಘಟಿತ ವಲಯದ ಕಾರ್ಮಿಕರು ಪಡೆಯಬಹುದು. ಈ ಶ್ರಮ್ ಕಾರ್ಡ್ ಇದ್ರೆ ಸಾಕು ಅವರಿಗೆ ಸಾಕಷ್ಟು ಸೌಲಭ್ಯಗಳು ಕೂಡ ದೊರೆಯುತ್ತದೆ.

ಕಾರ್ಮಿಕರಿಗೆ ಈ ಶ್ರಮ ಕಾರ್ಡ್ ಮುಖಾಂತರ ಆಗುವಂತಹ ಪ್ರಯೋಜನಗಳು ಯಾವುವು ?

ಸಾಮಾಜಿಕ ಭದ್ರತೆಯನ್ನು ಒಳಗೊಂಡಿರುತ್ತದೆ :- ಸಾಮಾಜಿಕ ಭದ್ರತೆ ಎಂದರೆ ಅಸಂಘಟಿತ ಒಲೆಯದ ಕಾರ್ಮಿಕರು ಅನಾರೋಗ್ಯದಿಂದ ಬಳಲುತ್ತಿದ್ದರೆ, ಈ ಒಂದು ಕಾರ್ಡಿನಿಂದ ಅವರಿಗೆ ಉಚಿತವಾಗಿಯೇ ತಪಾಸಣೆ ಕೂಡ ಸಿಗುತ್ತದೆ. ಹಾಗೂ ದುರ್ಘಟನೆಗಳು ಅವರಿಗೆ ಸಂಭವಿಸಿದ್ದಲ್ಲಿ, ಆ ದುರ್ಘಟನೆಯ ಹಣವು ಕೂಡ ಅವರ ಖಾತೆಗೆ ಜಮಾ ಆಗುತ್ತದೆ. ಮತ್ತು ಮರಣ ಹೊಂದಿದ್ದಲ್ಲಿ ವೀಮೆ ಪಾಲಿಸಿಯು ಕೂಡ ಇರುತ್ತದೆ.

ಇದು ಯಾವುದೇ ರೀತಿಯ ಹಣವನ್ನು ನೀಡಿ ಈ ರೀತಿಯ ಸೌಲಭ್ಯಗಳನ್ನು ಪಡೆಯುವಂತಿಲ್ಲ. ಉಚಿತವಾಗಿಯೇ ಸರ್ಕಾರವೇ ನಿಮಗೆ ಒದಗಿಸುತ್ತದೆ. ನೀವು ಕಾರ್ಡುಗಳನ್ನು ಮಾಡಿಸಿದ್ರೆ ಸಾಕು ಸರ್ಕಾರವೇ ನಿಮಗೆ ಹಲವಾರು ರೀತಿಯ ಸೌಲಭ್ಯವನ್ನು ನೀಡುತ್ತದೆ.

 

ಕೌಶಲ್ಯ ಅಭಿವೃದ್ಧಿಯನ್ನು ಕೂಡ ನೀಡುತ್ತದೆ :- ಉದ್ಯೋಗವಕಾಶವನ್ನು ಕೂಡ ಹೆಚ್ಚಿಸುವ ಸಲುವಾಗಿ ಅಸಂಘಟಿತ ವಲಯದ ಕಾರ್ಮಿಕರಿಗೆ ಉದ್ಯೋಗವನ್ನು ಕೂಡ ನೀಡಲಾಗುತ್ತದೆ. ನೀವು ಈ ಕಾರ್ಡ್ಗಳನ್ನು ಸರ್ಕಾರಿ ಕೆಲಸಗಳಿಗೆ ನೀಡುವ ಮುಖಾಂತರ ಸರ್ಕಾರಿ ನೌಕರಿಯನ್ನು ಕೂಡ ಪಡೆಯಬಹುದು. ಇದು ಸರ್ಕಾರಿ ಯೋಜನೆಯಾದ ಕಾರಣದಿಂದ ನಿಮಗೂ ಕೂಡ ಸರ್ಕಾರಿ ನೌಕರಿಯನ್ನು ಸರ್ಕಾರ ನೀಡುತ್ತದೆ.

ಈ ಯೋಜನೆ ಮುಖಾಂತರ ಸ್ವಂತ ಮನೆಗಳನ್ನು ಪಡೆಯಬಹುದು :- ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ನಾನಾ ರೀತಿಯ ವಿವಿಧ ದಾಖಲಾತಿಗಳನ್ನು ಕೂಡ ಸಲ್ಲಿಕೆ ಮಾಡಬೇಕು. ನೀವು ಈ ದಾಖಲಾತಿಗಳನ್ನು ಎಲ್ಲಾ ದಾಖಲಾತಿಗಳ ಜೊತೆಗೆ ಸಲಿಕೆ ಮಾಡುವ ಮುಖಾಂತರ ಉಚಿತವಾಗಿ ಮನೆಗಳನ್ನು ಕೂಡ ಪಡೆಯಬಹುದು. ಇನ್ನಿತರ ನಾನಾ ರೀತಿಯ ಮನೆ ಯೋಜನೆಗಳನ್ನು ಕೂಡ ಇದೇ ರೀತಿಯಾಗಿ ದಾಖಲಾತಿಗಳನ್ನು ಸಲ್ಲಿಕೆ ಮಾಡುವ ಮುಖಾಂತರ ಈ ಕಾರ್ಡ್ಗಳನ್ನು ನೀಡಿ ಉಚಿತವಾದ ಮನೆಗಳನ್ನು ಕೂಡ ಪಡೆಯಬಹುದಾಗಿದೆ.

ಬಹು ಮುಖ್ಯವಾಗಿ ದೊರೆಯುವಂತಹ ಸೌಲಭ್ಯಗಳಿವು !

ಈ ಒಂದು ಕಾಡುಗಳನ್ನು ನೀವು ಕಡ್ಡಾಯವಾಗಿ ಹೊಂದಿದ್ದೀರಿ ಎಂದರೆ, ನಿಮಗೆ ಎರಡು ಲಕ್ಷ ವಿಮಾ ಪಾಲಿಸಿಯನ್ನು ಕೂಡ ನೀಡಲಾಗುತ್ತದೆ. ನೀವೇನಾದರೂ ಮರಣವನ್ನು ಹೊಂದಿದ್ರೆ ನಿಮ್ಮ ಕುಟುಂಬಸ್ಥರಿಗೆ ಈ ಒಂದು ಹಣ ಕೂಡ ಮಂಜೂರಾಗಲಿದೆ. ಆ ಒಂದು ಹಣದಿಂದ ನಿಮ್ಮ ಕುಟುಂಬಸ್ಥರು ಮುಂದಿನ ಜೀವನವನ್ನು ಕೂಡ ಸಾಗಿಸಬಹುದು. ಕಾರ್ಮಿಕ ಕಾರ್ಡ್ ಹೊಂದಿದ ಅಭ್ಯರ್ಥಿ ಮರಣ ಹೊಂದಿದ್ದಲ್ಲಿ ಕುಟುಂಬಸ್ಥರಿಗೆ 3000 ಹಣ ಕೂಡ ಜಮಾ ಆಗುತ್ತದೆ.

ಇನ್ನು ಪ್ರಸ್ತುತವಾಗಿ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಅಭ್ಯರ್ಥಿಗೆ ಕಡಿಮೆ ವಯೋಮಿತಿ ಆಗಿದ್ರೆ ಅವರಿಗೆ ಮುಂದಿನ 60 ವರ್ಷ ಆದ ನಂತರ ಪ್ರತಿ ತಿಂಗಳು ಕೂಡ 3000 ಹಣ ಪಿಂಚಣಿಯಾಗಿ ದೊರೆಯುತ್ತದೆ. ಮತ್ತು ವಿದ್ಯಾರ್ಥಿಗಳಿಗೂ ಕೂಡ ಈ ಒಂದು ಕಾರ್ಡ್ ಮುಖಾಂತರ ವಿದ್ಯಾರ್ಥಿ ವೇತನ ಕೂಡ ದೊರೆಯುತ್ತದೆ. ಯಾವ ರೀತಿ ಎಂದರೆ ತಮ್ಮ ಪೋಷಕರು ಕಾರ್ಮಿಕ ಕಾರ್ಡ್ಗಳನ್ನು ಹೊಂದಿದ್ದಾರೆ ಎಂದರೆ ತಮ್ಮ ಮಕ್ಕಳ ಹೆಸರಿನಲ್ಲೂ ಕೂಡ ಅರ್ಜಿ ಸಲ್ಲಿಕೆ ಮಾಡಿ ಹಣವನ್ನು ಕೂಡ ಪ್ರತಿ ವರ್ಷ ಪಡೆಯಬಹುದು.

ಈ ಕಾರ್ಡ್ ಪಡೆಯಲು ಈ ರೀತಿ ಅರ್ಜಿ ಸಲ್ಲಿಕೆ ಮಾಡಿ.

ಯಾರೆಲ್ಲ ಈ ಕಾರ್ಡ್ಗಳನ್ನು ಪಡೆಯಬೇಕು ಎಂದರೆ ಆಟೋರಿಕ್ಷವನ್ನು ಚಾಲನೆ ಮಾಡುವಂತಹ ಅಭ್ಯರ್ಥಿಗಳು ಹಾಗೂ ಕಟ್ಟಡ ಕಾರ್ಮಿಕರು ಕೂಡ ಇದೇ ರೀತಿಯ ಒಂದು ಅಸಂಘಟಿತ ವಲಯಕ್ಕೆ ಸೇರುತ್ತಾರೆ. ಹಾಗೂ ಇನ್ನಿತರ ಬೀದಿ ವ್ಯಾಪಾರಿಗಳು ಕೂಡ ಅಸಂಘಟಿತ ವಲಯಕ್ಕೆ ಬರುತ್ತಾರೆ. ಇದೇ ರೀತಿಯ ಕೃಷಿ ವ್ಯಾಪಾರಸ್ಥರು ಕೂಡ ಈ ಕಾರ್ಡ್ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಅಂತಹ ಅಭ್ಯರ್ಥಿಗಳೆಲ್ಲರೂ ಕೂಡ ಈ ಕಾರ್ಡ್ಗಳನ್ನು ಆಫ್ಲೈನ್ ಮುಖಾಂತರ ಮಾಡಿಸಬಹುದು. ಅಥವಾ ಆನ್ಲೈನ್ ಮುಖಾಂತರವೂ ಅರ್ಜಿ ಸಲ್ಲಿಕೆ ಮಾಡಿ ಕಾರ್ಡ್ಗಳನ್ನು ಕೂಡ ಪಡೆಯಬಹುದಾಗಿದೆ.

ಯಾರೆಲ್ಲ ಈ ಕಾರ್ಡ್ಗಳಿಗೆ ಅರ್ಜಿ ಸಲ್ಲಿಕೆ ಮಾಡುತ್ತಾರೆ ಅಂಥವರಿಗೆ ಈ ಮೇಲ್ಕಂಡ ಎಲ್ಲಾ ಸೌಲಭ್ಯಗಳು ಕೂಡ ದೊರೆಯುತ್ತವೆ. ಆದ್ದರಿಂದ ನೀವು ಈ ಕೂಡಲೇ ಸಿಎಸ್ಸಿ ಕೇಂದ್ರಗಳಿಗೆ ಭೇಟಿ ನೀಡುವ ಮುಖಾಂತರ ನಿಮ್ಮ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡುವ ಮುಖಾಂತರ ಈ ಈ ಶ್ರಮ್ ಕಾರ್ಡ್ಗಳನ್ನು ಪಡೆಯಲು ಮುಂದಾಗಿರಿ. ನಿಮಗೆ ಮುಂದಿನ ದಿನಗಳಲ್ಲಿ ಕೂಡ ವಿತರಣೆ ಆಗುತ್ತದೆ. ಆ ಕಾರ್ಡ್ ಗಳ ಮುಖಾಂತರ ಈ ಎಲ್ಲಾ ರೀತಿಯ ಪ್ರಯೋಜನಗಳನ್ನು ಪಡೆಯಬಹುದು.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….

WhatsApp Group Join Now
Telegram Group Join Now

Leave a Reply

Your email address will not be published. Required fields are marked *