Crop Insurance: ನಮಸ್ಕಾರ ಸ್ನೇಹಿತರೆ ನಿಮಗೆಲ್ಲ ಗೊತ್ತಿರುವ ಹಾಗೆ ಮುಂಗಾರು ಬೆಳೆ ವಿಮೆ(Crop Insurance)ಯ ಅರ್ಜಿ ಸಲ್ಲಿಕೆಯು ಆರಂಭವಾಗಿದ್ದು, ಮೊದಲ ಹಂತದಲ್ಲಿ ಈ ಜಿಲ್ಲೆಯವರು ವಿಮೆ(Insurance) ತುಂಬಬಹುದು ಎಂದು ತಿಳಿಸಲಾಗಿದೆ. ಇಲ್ಲಿ ನಿಮ್ಮ ಜಿಲ್ಲೆಯ ಹೆಸರು ಕೂಡ ಇದೆಯಾ ಎಂದು ತಿಳಿದುಕೊಳ್ಳಿ. ಅದಕ್ಕಾಗಿ ಲೇಖನವನ್ನು ಕೊನೆಯವರೆಗೂ ಓದಿ.
ಸ್ನೇಹಿತರೆ, 2024-25 ನೇ ಸಾಲಿನ ಮುಂಗಾರು ಬೆಳೆಗಳ ಬೆಳೆ ವಿಮೆ(Crop Insurance)ಯನ್ನು ಮಾಡಲು ಜಿಲ್ಲಾವಾರು ಕೊನೆ ದಿನಾಂಕದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಲ್ಲಿ ನಿಮಗೆ ಬೇಕಾದ ಸಂಪೂರ್ಣ ಮಾಹಿತಿ ನೀಡಲಾಗಿರುತ್ತದೆ ಆದ ಕಾರಣ ಲೇಖನವನ್ನು ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿ ದೊರಕುತ್ತದೆ.
Crop Insurance Application
ಸ್ನೇಹಿತರೆ, ಫಸಲ್ ಬಿಮಾ ಯೋಜನೆ (fasal Bima Yojana) ಅಡಿ ರೈತರಿಗೆ ಬೆಳೆವಿಮೆ(Crop Insurance)ಯನ್ನು ಮಾಡಿಸಲು ಕೊನೆಯ ದಿನಾಂಕದ ಜಿಲ್ಲಾವಾರು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಫಸಲ್ ಬಿಮಾ ಯೋಜನೆ ಅಡಿ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿ ಅಥವಾ ಬೆಳೆ ನಷ್ಟ ಆದಲ್ಲಿ ರೈತರಿಗೆ ಆರ್ಥಿಕ(Financial)ವಾದ ನೆರವು ಮತ್ತು ಭದ್ರತೆಯನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.
ಪ್ರಕೃತಿ ವಿಕೋಪಗಳಿಂದ ರೈತರ ಬೆಳೆಗಳು ನಷ್ಟವಾದಲ್ಲಿ ರೈತರಿಗೆ ಪ್ರತಿ ಹೆಕ್ಟರ್ ಭೂಮಿಗೆ ₹29,000 ದಿಂದ ₹86,000 ದವರೆಗಿನ ಆರ್ಥಿಕವಾದ ನೆರವನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಆದ್ದರಿಂದ ರೈತರು ಪ್ರತಿ ವರ್ಷವೂ ಕೂಡ ಬೆಳೆ ವಿಮೆ(Crop Insurance) ಯನ್ನು ಮಾಡಿಸಿಕೊಳ್ಳುವುದು ಅತ್ಯಗತ್ಯ ಎಂದು ಹೇಳಬಹುದು.
ಬೆಳೆ ವಿಮೆಯ ಹಣ (Crop Insurance Money) ಹೇಗೆ ದೊರಕುತ್ತದೆ?
ಪ್ರಕೃತಿ ವಿಕೋಪಗಳಿಂದ ಅಂದರೆ, ಅತಿಯಾದ ಮಳೆ, ಮತ್ತು ಬರಗಾಲ ಸೇರಿದಂತೆ ಹಲವಾರು ಪ್ರಕೃತಿ ವಿಕೋಪಗಳಿಂದ ರೈತರ ಬೆಳೆಗಳು ನಷ್ಟವಾದಲ್ಲಿ ಬೆಳೆ ವಿಮೆಯ ಹಣ(Crop Insurance Money)ವನ್ನು ಫಸಲ್ ಬಿಮಾ ಯೋಜನೆ(Fasal Bima Yojana)ಅಡಿ ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.
ಬೆಳವಿಮೆಗೆ ಅರ್ಜಿ ಸಲ್ಲಿಸಲು ಕೆಲವು ಜಿಲ್ಲೆಗಳಲ್ಲಿ ಕೊನೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಅಂತವರು ಕರ್ನಾಟಕ ಸರ್ಕಾರದ ಅಧಿಕೃತ ಜಾಲತಾಣವಾದ ಸಂರಕ್ಷಣೆ ಜಾಲತಣಕ್ಕೆ ಭೇಟಿ ನೀಡಿ ತಿಳಿದುಕೊಳ್ಳಬಹುದು. ನಂತರ ಕೊನೆಯ ದಿನಾಂಕದ ಒಳಗಾಗಿ ಫಸಲ್ ಬಿಮಾ ಯೋಜನೆ ಅಡಿ ಮುಂಗಾರು ಬೆಳೆ ವಿಮೆಯನ್ನು ರೈತರು ಮಾಡಿಸಿಕೊಳ್ಳಬಹುದು.