Crop Insurance Application: ಬೆಳೆ ವಿಮೆ ನೋಂದಣಿ ಆರಂಭ! ಈ ಜಿಲ್ಲೆಗಳಲ್ಲಿ ಕೊನೆಯ ದಿನಾಂಕ ಪ್ರಕಟಣೆ!

Crop Insurance Application

Crop Insurance Application: ನಮಸ್ಕಾರ, ಎಲ್ಲರಿಗೂ ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ, ನೀವು ರೈತರಾಗಿದ್ದರೆ ನೀವು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದು ಈ ಲೇಖನದಲ್ಲಿ ತಿಳಿದುಕೊಳ್ಳಿ.! ಹಾಗೂ ಬೆಳೆ ವಿಮೆ ಮಾಡಿಸಲು ಯಾವ ರೀತಿ ಅರ್ಜಿ ಸಲ್ಲಿಸಬೇಕು? ಎಂಬುದು ಕೂಡ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಸಂಪೂರ್ಣವಾಗಿ ಓದಿ.

ಹೌದು ಸ್ನೇಹಿತರೆ ಬೆಳೆ ವಿಮೆ ಮಾಡಿಸಲು ಈಗಾಗಲೇ ಆರಂಭವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಕೆಲವೊಂದು ಜಿಲ್ಲೆಗಳಲ್ಲಿ ಕೊನೆಯ ದಿನಾಂಕವನ್ನು ಕೂಡ ನಿಗದಿಪಡಿಸಲಾಗಿರುತ್ತದೆ. ಬೆಳೆವಿಮೆ ಮಾಡಿಸುವುದರ ಮುಖ್ಯ ಉದ್ದೇಶವೆಂದರೆ ಪ್ರಕೃತಿ ವಿಕೋಪ ಹಾಗೂ ಅತಿಯಾದ ಮಳೆ ಮತ್ತು ಬರದಿಂದ ಬೆಳೆ ನಷ್ಟವಾದರೆ ಸರ್ಕಾರದ ಕಡೆಯಿಂದ ಸಹಾಯಧನವನ್ನು ಪಡೆಯಬಹುದಾಗಿರುತ್ತದೆ. ಇದು ಬೆಳೆವಿಮೆ ಮಾಡಿಸುವುದರ ಉಪಯೋಗ.

ಬೆಳೆ ವಿಮೆ (Crop Insurance Application)

ಹೌದು ಸ್ನೇಹಿತರೆ, ರೈತರಿಗೆ ಉಪಯೋಗವಾಗುವಂತೆ ಬೆಳೆ ವಿಮೆಯನ್ನು ಮಾಡಿಸಲಾಗುವುದು. ಪ್ರಕೃತಿ ವಿಕೋಪಗಳಿಂದ ಹಾಗೂ ಅತಿಯಾದ ಮಳೆ ಮತ್ತು ಮಳೆಯ ಕೊರತೆಯಿಂದ ಹಾಗೂ ಹಾನಿಗಳಿಗೆ ಬೆಳೆ ನಷ್ಟ ಉಂಟಾದರೆ ರೈತರಿಗೆ ಪರಿಹಾರದ ಹಣವನ್ನು ಸರ್ಕಾರವು ನೀಡುತ್ತದೆ ಈ ಬೆಳೆ ವಿಮೆಯನ್ನು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿ ಜಾರಿಗೆ ತರಲಾಗಿದೆ. ಪ್ರತಿಯೊಬ್ಬ ರೈತರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು? 

  • ಹೆಸರು 
  • ಹತ್ತಿ 
  • ಭತ್ತ 
  • ಮುಸುಕಿನ ಜೋಳ 
  • ಜೋಳ 
  • ಸಜ್ಜೆ 
  • ನವಣೆ 
  • ತೊಗರಿ

ಮಳೆ ಆಶ್ರಿತ ಮತ್ತು ನೀರಾವರಿ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಕೊನೆಯ ದಿನಾಂಕ ಜುಲೈ 31 ಎಂದು ನಿಗದಿಪಡಿಸಲಾಗಿರುತ್ತದೆ.

ಬೆಳೆ ವಿಮೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು? 

  • ರೈತರ ಜಮೀನಿನ ಪಹಣಿ 
  • ಮೊಬೈಲ್ ನಂಬರ್ 
  • ಬ್ಯಾಂಕ್ ಪಾಸ್ ಬುಕ್ 
  • ಎಫ್ ಐ ಡಿ (FID)
  • ಆಧಾರ್ ಕಾರ್ಡ್

ಈ ಮೇಲೆ ನೀಡಿರುವಂತಹ ದಾಖಲೆಗಳನ್ನು ನೀವು ತೆಗೆದುಕೊಂಡು ನಿಮ್ಮ ಬೆಳೆಗೆ ಸಂಬಂಧಿಸಿದಂತಹ ಬೆಳೆ ವಿಮೆಯನ್ನು ಮಾಡಿಸಿಕೊಳ್ಳಬಹುದಾಗಿರುತ್ತದೆ. 

ಸ್ನೇಹಿತರೆ ನೀವೇನಾದರೂ ರೈತರಾಗಿದ್ದರೆ ಬೆಳೆಗಳನ್ನು ಬೆಳೆಯುತ್ತಿದ್ದರೆ ನೀವು ಬೆಳೆ ವಿಮೆಯನ್ನು ಮಾಡಿಸುವುದು ತುಂಬಾ ಸೂಕ್ತವಾದ ಕೆಲಸವಾಗಿರುತ್ತದೆ. ಯಾಕೆಂದರೆ ಅತಿಯಾದ ಮಳೆ ಮತ್ತು ಬರಗಾಲದಿಂದ ಬೆಳೆ ನಷ್ಟ ಉಂಟಾದರೆ ಹಾಗೂ ಪ್ರಕೃತಿ ವಿಕೋಪದ ಯಾವುದೇ ರೀತಿಯ ಸ್ಥಿತಿಯಲ್ಲಿ ಬೆಳೆನಾಶವಾದರೆ ಬೆಳೆ ವಿಮೆಯ ಹಣವನ್ನು ನಿಮ್ಮ ಖಾತೆಗೆ ಪಡೆಯಬಹುದಾಗಿರುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *