Rabi Crop Insurance: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಎಲ್ಲಾ ಜನತೆಗೆ ತಿಳಿಸುವ ಪ್ರಮುಖವಾದ ವಿಷಯವೇನೆಂದರೆ ಹಿಂಗಾರು ಬೆಳೆವಿಮೆ ಸ್ಟೇಟಸ್ ಅನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಯಾವ ರೀತಿ ಸುಲಭವಾಗಿ ಚೆಕ್ ಮಾಡಿಕೊಳ್ಳಬೇಕು. ಎಂಬುದರ ವಿಷಯವನ್ನು ತಿಳಿಸಿಕೊಟ್ಟಿರುತ್ತೇನೆ ಆದಕಾರಣ ಲೇಖನವನ್ನು ಗಮನದಿಂದ ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿ ನಿಮಗೆ ದೊರಕುತ್ತದೆ.
ಈಗಾಗಲೇ ನಿಮಗೆ ತಿಳಿದಿರುವ ಹಾಗೆ ರಾಜ್ಯದಂತ ಹಲವಾರು ಜನ ರೈತರು ಮುಂಗಾರು ಬೆಳೆಯನ್ನು ಪಾವತಿಸಿರುತ್ತಾರೆ. ನೀವು ಪಾವತಿಸಿರುವ ಬೆಳೆ ವಿಮೆಯ ಮೊತ್ತದ ಸ್ಟೇಟಸ್ ಅನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಯಾವ ರೀತಿ ಸುಲಭವಾಗಿ ಪರಿಶೀಲಿಸಿಕೊಳ್ಳಬೇಕು ಅದಕ್ಕೆ ಅವಕಾಶವಿದೆಯ? ಹೇಗೆ ಪರಿಶೀಲಿಸಿಕೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ.
ಹಿಂಗಾರು ಬೆಳೆವಿಮೆ ಸ್ಟೇಟಸ್ (Rabi Crop Insurance)
ಸ್ನೇಹಿತರೆ ಇದೀಗ ಕರ್ನಾಟಕ ರಾಜ್ಯದಂತ ರೈತರು 2023ರ ಸಾಲಿನಲ್ಲಿ ಹಿಂಗಾರು ಬೆಳೆಗಳಾದಂತ ಜೋಳ ಕಡಲೆ ಉರುಳಿ ಹಾಗೂ ಇನ್ನೂ ಮುಂತಾದ ಬೆಳೆಗಳಿಗೆ ಬೆಳೆವಿಮೆಯನ್ನು ಮಾಡಿಸಿರುತ್ತಾರೆ.ಹಾಗಾದರೆ ನೀವು ಕೂಡ ಈ ಬೆಳೆಗಳಿಗೆ ಮಾಡಿಸಿರುವ ಬೆಳೆ ವಿಮೆ ಸ್ಟೇಟಸ್ ಅನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು ಆಗಿದೆ ಎಂದು ಹೇಳಬಹುದು. ನೀವು ಚೆಕ್ ಮಾಡಿಕೊಳ್ಳಲು ಸುಲಭವಾದ ಕ್ರಮಗಳನ್ನು ಇಲ್ಲಿ ವಿವರಿಸಲಾಗಿದೆ ನೋಡಿ.
ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಹೇಗೆ? (Rabi Crop Insurance)
ಸ್ನೇಹಿತರೆ ನಿಮ್ಮ ಮೊಬೈಲ್ ನಲ್ಲಿ ಹಿಂಗಾರು ಬೆಳೆ ವಿಮೆಯ ಸ್ಟೇಟಸ್ ಅನ್ನು ನೀವು ಚೆಕ್ ಮಾಡಿಕೊಳ್ಳುವುದು ತುಂಬಾ ಸುಲಭವಾದ ವಿಧಾನ ಆಗಿರುತ್ತದೆ. ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿಕೊಳ್ಳುವ ಸಂರಕ್ಷಣೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. ಗೂಗಲ್ ನಲ್ಲಿ “ಸಂರಕ್ಷಣೆ” ಎಂದು ಸರ್ಚ್ ಮಾಡಿದರೆ ಮೊದಲಿಗೆ ಬರುತ್ತದೆ.
ಈ ಜಾಲತಾಣವು ಸರ್ಕಾರದ ಅಧಿಕೃತ ಜಾಲತಾಣವಾಗಿರುತ್ತದೆ ಅಲ್ಲಿ ನೀವು ಋತುವನ್ನು ಆಯ್ಕೆ ಮಾಡಿಕೊಂಡು ಮುಂದುವರಿಯಬೇಕು. ನಂತರ ನೀವು ಮುಂದೆ ಆಧಾರ್ ಕಾರ್ಡ್ ನಂಬರ್ ಹಾಗೂ ಮೊಬೈಲ್ ನಂಬರ್ ಅನ್ನು ಹಾಕಬೇಕು. ನಂತರ ಅಲ್ಲಿ ಕಾಣಿಸುವಂತಹ ಕ್ಯಾಪ್ಚ ಕೋಡ್ ಅನ್ನು ನೀವು ನಮೂದಿಸಬೇಕಾಗುತ್ತದೆ. ಕ್ಯಾಪ್ಚ ಕೂಡನು ನೀವು ನಮೂದಿಸಿದ ನಂತರ ನೀವು “ಗೋ” ಎಂಬ ಬಟನ್ ಮೇಲೆ ಒತ್ತಿದ ತಕ್ಷಣ ಮುಂದುವರೆಯುತ್ತೀರಾ.
ಮೇಲೆ ನೀಡಿರುವ ಸರಳ ಕ್ರಮಗಳನ್ನು ಅನುಸರಿಸಿ ನೀವು ನಿಮ್ಮ ಮೊಬೈಲ್ ನಲ್ಲಿ ಬೆಳೆ ವಿಮೆಯ ಸ್ಟೇಟಸ್ ಅನ್ನು ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ. ನಿಮ್ಮ ಬೆಳೆ ವಿಮೆಯ ಸ್ಥಿತಿಯನ್ನು ಪರಿಶೀಲಿಸಿಕೊಳ್ಳುವ ಸುಲಭವಾದ ವಿಧಾನ ಇದಾಗಿರುತ್ತದೆ. ಇದೇ ರೀತಿ ಮಾಹಿತಿಗಳನ್ನು ದಿನನಿತ್ಯ ಓದಲು ಇಷ್ಟಪಡುತ್ತಿದ್ದರೆ ನಮ್ಮ ಜಾಲತಾಣದ ಚಂದದಾರರಾಗಿರಿ.
ಇದನ್ನು ಓದಿ: Udyogini Loan Scheme: ಯಾವುದೇ ಬಡ್ಡಿ ಇಲ್ಲದೆ ₹3 ಲಕ್ಷ ವರೆಗೆ ಸಾಲ! ಈಗಲೇ ಅರ್ಜಿ ಸಲ್ಲಿಸಿ!