KSRTC New Rules: KSRTC ಯಲ್ಲಿ ಉಚಿತ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ಹೊಸ ನಿಯಮಗಳು!

KSRTC New Rules

KSRTC New Rules: ನಮಸ್ಕಾರ ಎಲ್ಲರಿಗೂ ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಮಹಿಳೆಯರಿಗೆ ತಿಳಿಸುವ ಪ್ರಮುಖವಾದ ವಿಷಯವೇನೆಂದರೆ, ಮಹಿಳೆಯರು ಇಷ್ಟು ದಿನ ಕೆಎಸ್ಆರ್ಟಿಸಿಯಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದೀರಾ, ಆದರೆ ಇದೀಗ ಕೆ ಎಸ್ ಆರ್ ಟಿ ಸಿ ಯಲ್ಲಿ ಉಚಿತ ಪ್ರಯಾಣ ಮಾಡುವಂತಹ ಮಹಿಳೆಯರಿಗೆ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದ್ದು ಇದರ ಬಗ್ಗೆ ಸಂಪೂರ್ಣವಾದ ವಿವರ ಇಲ್ಲಿದೆ ನೋಡಿ. 

KSRTC ಹೊಸ ರೂಲ್ಸ್!

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು, ಇತ್ತೀಚಿಗೆ ಒಂದು ಹೊಸ ಆದೇಶವನ್ನು ಹೊರಡಿಸಿರುತ್ತಾರೆ. ಅದೇನೆಂದರೆ ಉಚಿತ ಟಿಕೆಟ್ ಪಡೆದು ಬಸ್ನಲ್ಲಿ ಪ್ರಯಾಣ ಮಾಡುವ ಮಹಿಳೆಯರಿಗೆ ತಮ್ಮ ಟಿಕೆಟ್ ಅನ್ನು ಏನಾದರೂ ಕಳೆದುಕೊಂಡರೆ ಬಸ್ಸಿನ ನಿರ್ವಾಹಕರ ಮೇಲೆ ದಂಡ ಹಾಕಲಾಗುವುದು ಎಂಬ ಮಾಹಿತಿಗಳು ತಿಳಿದುಬಂದಿದೆ. ಶಕ್ತಿ ಯೋಜನೆಯಡಿ ಮಹಿಳೆಯರು ಕೊಡಲಾಗುವ ಪಿಂಕ್ ಟಿಕೆಟ್ ಗಳನ್ನು ಏನಾದರೂ ಮಹಿಳೆಯರು ಅಕಸ್ಮಾತಾಗಿ ಅವುಗಳನ್ನು ಕಳೆದುಕೊಂಡರೆ ಅದರ ಪ್ರತಿ ಟಿಕೆಟಿಗೂ ಕೂಡ ಹತ್ತು ರೂಪಾಯಿಗಳ ದಂಡಗಳನ್ನು ನಿರ್ವಾಹಕರಾಗಿ ಹಾಕಲಾಗುತ್ತದೆ ಎಂದು ತಿಳಿದುಬಂದಿರುತ್ತದೆ.

ಶಕ್ತಿ ಯೋಜನೆಯಿಂದಾಗಿ ಪ್ರತಿ ಬಸ್ಸಿನಲ್ಲೂ ಕೂಡ ಅತ್ಯಂತ ಒತ್ತಡದಿಂದ ಕೆಲಸವನ್ನು ಮಾಡುತ್ತಿರುವ ನೌಕರರಿಗೆ ಮತ್ತಷ್ಟು ಸಮಸ್ಯೆಯನ್ನು ತರುವ ಅಧಿಸೂಚನೆ ಇದು ಆಗಿರುತ್ತದೆ ಎಂದು ಇದಕ್ಕೆ ತುಂಬಾ ವಿರೋಧ ವ್ಯಕ್ತವಾಗುತ್ತಿದೆ ಎಂಬ ಮಾಹಿತಿಗಳು ಕೇಳಿಬಂದಿವೆ. 

ನಿರ್ವಾಹಕರು ಇಲ್ಲಿ ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಟಿಕೇಟು ವಿತರಣೆಯನ್ನು ಮಾಡುವ ಸಂದರ್ಭದಲ್ಲಿ ಅವರು ಬಳಸುವ ಟಿಕೆಟ್ ವಿತರಣೆಯನ್ನು ಮಾಡುವ ಯಂತ್ರ ಏನಾದರೂ ಹಾಳಾದರೆ ಪ್ರಯಾಣಿಕರಿಗೆ ಟಿಕೆಟ್ ವಿತರಿಸಲು ಟಿಕೆಟ್ ಗಳನ್ನು ಮುಂಗಡವಾಗಿ ಮೊದಲಿಗೆ ಪ್ರಿಂಟ್ ಮಾಡಿ ಇಟ್ಟಿರಲಾಗುತ್ತದೆ. ಆದರೆ ಆ ಟಿಕೆಟ್ಗಳಲ್ಲಿ ಘಟಕ ಮತ್ತು ವಿಭಾಗ ಹಾಗು ಎಲ್ಲಿಂದ ಮತ್ತು ಎಲ್ಲಿಗೆ ಎಂಬ ಆಯ್ಕೆಗಳನ್ನು ನಿರ್ವಾಹಕರು ಭರ್ತಿ ಮಾಡಿ ಸಹಿ ಹಾಕಿ ನೀಡಬೇಕಾಗುತ್ತದೆ. 

ಏನಿದು ಪಿಂಕ್ ಟಿಕೆಟ್? 

ಸ್ನೇಹಿತರೆ ಶಕ್ತಿ ಯೋಜನೆಯಡಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿರುವ ಮಹಿಳೆಯರು ಹೆಚ್ಚಾಗುತ್ತಿದ್ದಾರೆ. ಇಂತಹ ಒತ್ತಡದಲ್ಲಿ ನಿರ್ವಾಹಕರಿಗೆ ಇದನ್ನು ಭರ್ತಿ ಮಾಡುವ ಹಾಗೂ ಭರ್ತಿ ಮಾಡಿ ಟಿಕೆಟ್ ಕೊಡುವ ಕೆಲಸ ಹೆಚ್ಚಿನ ಹೊರೆಯನ್ನು ಉಂಟು ಮಾಡಿದೆ. ಪುರುಷರ ಟಿಕೆಟ್ ನಲ್ಲಿ ಎಲ್ಲಿಂದ ಎಲ್ಲಿಗೆ ಎಂಬ ಮತದ ಹಣದ ಮೂಲಕ ಸೂಚಿಸಿರುವಂತೆ ಮಹಿಳೆಯರಿಗೂ ಕೂಡ ಉಚಿತ ಟಿಕೇಟಿನಲ್ಲಿ ನಮೂದಿಸಲಾಗುವುದಿಲ್ಲ ಹಾಗಾಗಿ ಇದೆಲ್ಲವನ್ನು ಕಂಡಕ್ಟರ್ ಗಳು ಭರ್ತಿ ಮಾಡಿಕೊಡಬೇಕಾಗುತ್ತದೆ ಎಂಬುದು ಸಮಸ್ಯೆಯಾಗಿದೆ. 

ಸ್ನೇಹಿತರೆ ಟಿಕೆಟ್ ಕೊಡುವ ಯಂತ್ರ ಏನಾದರೂ ಕೆಲಸ ಮಾಡದೇ ಇರುವ ಸಂದರ್ಭದಲ್ಲಿ ಬಸ್ಸಿನಲ್ಲಿ ಪ್ರಯಾಣ ಬೆಳೆಸುತ್ತಿರುವ ಪುರುಷರಿಗೆ ಹಾಗೂ ಮಹಿಳೆಯರಿಗೆ ವಿಭಿನ್ನವಾದ ಟಿಕೆಟ್ ಗಳನ್ನು ವಿತರಣೆ ಮಾಡಲಾಗುತ್ತದೆ. ಪುರುಷರ ಟಿಕೇಟಿನಲ್ಲಿ ಎಲ್ಲಿಂದ ಎಲ್ಲಿಗೆ ಎಂಬ ಮಾಹಿತಿಯನ್ನು ಕೂಡ ಮೊತ್ತದ ಮೂಲಕ ತಿಳಿಯಬಹುದಾಗಿರುತ್ತದೆ. ಆದರೆ ಮಹಿಳೆಯರಿಗೆ ಹೊಸದಾಗಿ ನೀಡುವ ಪಿಂಕ ಟಿಕೆಟಿನಲ್ಲಿ ಸ್ವತಹ ನಿರ್ವಾಹಕರೇ ಅಲ್ಲಿ ಎಲ್ಲಿಂದ ಎಲ್ಲಿಗೆ ಎಂಬ ಮಾಹಿತಿಯನ್ನು ಕೂಡ ನಮೂದಿಸಬೇಕಾಗುತ್ತದೆ. 

ಹಾಗಾಗಿ ಇಂಥ ಪರಿಸ್ಥಿತಿಯಲ್ಲಿ ನಿರ್ವಾಹಕರು ಕೊಟ್ಟಿರುವಂತ ಟಿಕೇಟನ್ನು ಮಹಿಳೆಯರು ಏನಾದರೂ ಅಕಸ್ಮಾತಾಗಿ ಕಳೆದುಕೊಂಡರೆ ನಿರ್ವಾಹಕರ ಮೇಲೆ ಪ್ರತಿ ಟಿಕೇಟಿನ ಮೇಲೆ 10 ರೂಪಾಯಿ ತಂಡವನ್ನು ಅಧಿಕಾರಿಗಳು ಹಾಕಲಾಗುತ್ತದೆ. ಹಾಗೂ ಈ ಕಾರಣದಿಂದಾಗಿ ಸರ್ಕಾರದ ವ್ಯವಸ್ಥಾಪಕರ ವಿರುದ್ಧ ಸಾರಿಗೆ ನೌಕರರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *