Loan Rates: ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಪಡೆಯುವುದು ಹೇಗೆ?

Loan Rates: ನಮಸ್ಕಾರ ಸ್ನೇಹಿತರೆ ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಬ್ಯಾಂಕು (Bank) ಗಳಲ್ಲಿ ಹೆಚ್ಚು ರಿಸ್ಕ್ ಇರುತ್ತದೆ ಎಂಬ ಒಂದೇ ಒಂದು ಕಾರಣದಿಂದ ಪರ್ಸನಲ್ ಲೋನ್ (Personal Loan) ಹೆಚ್ಚು ಬಡ್ಡಿ ದರವನ್ನು ಸಾಲಕ್ಕೆ (Loan) ವಿಧಿಸಲಾಗುತ್ತದೆ ಎಂದು ಹೇಳಬಹುದಾಗಿರುತ್ತದೆ. ಹಾಗೂ ವಿವಿಧ ಬ್ಯಾಂಕುಗಳಲ್ಲಿ ಪರ್ಸನಲ್ ಲೋನ್ ಬಡ್ಡಿದರ ಎಷ್ಟು ಇರುತ್ತದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಸಂಪೂರ್ಣವಾದ ವಿವರಗಳಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.

ಸ್ನೇಹಿತರೆ, ನಿಮಗೆ ತಿಳಿಸುವ ಮುಖ್ಯವಾದ ವಿಷಯವೇನೆಂದರೆ ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಚೆನ್ನಾಗಿದ್ದರೆ ನಿಮಗೆ ಕಡಿಮೆ ಬಡ್ಡಿ (Interest) ದರದಲ್ಲಿ ಸಾಲ ಸಿಗುವ ಸಾಧ್ಯತೆ ಇರುತ್ತದೆ. ಬಹಳ ಬೇಗ ನೀವು ಸಾಲಬೇಕೆಂದರೆ ಜನರಿಗೆ ಇರುವ ಪ್ರಮುಖವಾದ ಆಯ್ಕೆ ಹಾಗೂ ಜನರಿಗೆ ತಟ್ಟನೆ ನೆನಪಾಗುವುದು ಪರ್ಸನಲ್ ಲೋನ್ ಆಗಿರುತ್ತದೆ. 

ಆದಕಾರಣ ಹಣ ಇಡಲು ಚಿನ್ನ ಹಾಗೂ ಯಾವುದೇ ರೀತಿಯ ವಸ್ತುಗಳು ಇಲ್ಲದಿದ್ದಲ್ಲಿ ಪರ್ಸನಲ್ ಲೋನ್ (Personal Loan) ಅನಿವಾರ್ಯ ಆಯ್ಕೆ ಆಗಿರುತ್ತದೆ. ಯಾವ ಬ್ಯಾಂಕುಗಳಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಲು ಕಡಿಮೆ ಬಡ್ಡಿ ದರ ಇರುತ್ತದೆ ಮತ್ತು ಸಾಲಕ್ಕೆ ಯಾವ ದಾಖಲೆಗಳು ಬೇಕಾಗಬಹುದು. ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿವೆ.

ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ನೀಡುವ ಬ್ಯಾಂಕುಗಳ ಪಟ್ಟಿ!

  • ಪಂಜಾಬ್ ನ್ಯಾಷನಲ್ ಬ್ಯಾಂಕ್ : 11.40% ನಿಂದ 12.75%
  • ಎಕ್ಸಿಸ್ ಬ್ಯಾಂಕ್ : 10.65% ನಿಂದ 22%
  • ಕೋಟಕ್ ಮಹೀಂದ್ರಾ ಬ್ಯಾಂಕ್: 10.99%
  • ಐಡಿಬಿಐ ಬ್ಯಾಂಕ್ : 10.50 ನಿಂದ 13.25%
  • ಐಸಿಐಸಿಐ ಬ್ಯಾಂಕ್ : 10.65% ನಿಂದ 16%
  • ಎಸ್ ಬಿ ಐ ಬ್ಯಾಂಕ್ : 11.15% ನಿಂದ 11.90%
  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: 11.35% ನಿಂದ 15.45%
  • ಹೆಚ್ ಡಿ ಎಫ್ ಸಿ ಬ್ಯಾಂಕ್ : 10.75% ನಿಂದ 24% 

ಸ್ನೇಹಿತರೆ, ಈ ಮೇಲೆ ಯಾವ ಬ್ಯಾಂಕಿನಲ್ಲಿ ಎಷ್ಟು ಬಡ್ಡಿ ದರಗಳ ಮೇಲೆ ಪರ್ಸನಲ್ ಲೋನ್ ಅನ್ನು ನೀಡಲಾಗುತ್ತದೆ ಎಂಬ ಮಾಹಿತಿಯನ್ನು ಪಟ್ಟಿ ಮಾಡಲಾಗಿರುತ್ತದೆ ನೀವು ನಿಮ್ಮ ಆಯ್ಕೆಯನ್ನು ಮಾಡಿಕೊಳ್ಳಬಹುದಾಗಿರುತ್ತದೆ. ನೀವೇನಾದರೂ ಪರ್ಸನಲ್ ಲೋನ್ ಪಡೆದುಕೊಳ್ಳಲು ಹುಡುಕಾಡುತ್ತಿದ್ದರೆ ಮೇಲೆ ನೀಡಿರುವ ಬಡ್ಡಿ ದರಗಳನ್ನು ನೀವು ಪರಿಶೀಲಿಸಿಕೊಂಡು ಯಾವ ಬ್ಯಾಂಕ್ ಸೂಕ್ತ ಎಂದು ಆ ಬ್ಯಾಂಕಿಗೆ ಭೇಟಿ ನೀಡಿ ಇನ್ನಷ್ಟು ವಿಚಾರಿಸಬಹುದು.

ಪರ್ಸನಲ್ ಲೋನ್ ಅನ್ನು ಅಡಮಾನರಹಿತ ಸಾಲ ಎಂದು ಪರಿಗಣಿಸಲಾಗುವುದರಿಂದ ಇದರ ಮೇಲೆ ಬಡ್ಡಿ ಹೆಚ್ಚು ಇರುತ್ತದೆ. ಯಾಕೆಂದರೆ ಗ್ರಾಹಕರಿಂದ ಸಾಲವನ್ನು ಮರುಪಾವತಿ ಸಾಧ್ಯ ಕಡಿಮೆ ಎಂಬ ಅಂದಾಜು ಇರುತ್ತದೆ ಆದ್ದರಿಂದ ಇದ್ದಷ್ಟು ಬಡ್ಡಿ ಹೆಚ್ಚು ನಿಗದಿಪಡಿಸಲಾಗಿರುತ್ತದೆ ಎಂದು ತಿಳಿಸಲಾಗಿದೆ.

ಸ್ನೇಹಿತರೆ ನಿಮ್ಮ ಮರುಪಾವತಿ ಶಕ್ತಿ ಯಾವ ಮಟ್ಟಕ್ಕೆ ಇದೆ ಎಂಬ ಅಂಶದ ಮೇಲೆ ನಿಮಗೆ ಸಾಲವನ್ನು ನೀಡಲಾಗುತ್ತದೆ. ಮೊದಲು ನಿಮ್ಮ ಕ್ರೆಡಿಟ್ ಸ್ಕೋರನ್ನು ಪರಿಶೀಲನೆ ಮಾಡಬಹುದು. ಪರ್ಸನಲ್ ಲೋನ್ ಅಥವಾ ಯಾವುದೇ ಲೋನ್ ಅನ್ನು ಪಡೆದುಕೊಳ್ಳಲು ಕ್ರೆಡಿಟ್ ಸ್ಕೋರ್ ಪರಿಶೀಲನೆ ಮಾಡಲಾಗುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ 750ಕ್ಕಿಂತ ಹೆಚ್ಚು ಇದ್ದರೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುವ ಸಾಧ್ಯತೆ ಬಹಳ ಇರುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದಷ್ಟು ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುವುದು ಕಷ್ಟ.

ಓದುಗರ ಗಮನಕ್ಕೆ: ಸ್ನೇಹಿತರೆ ಮೇಲೆ ನಿಮಗೆ ತಿಳಿಸಿರುವ ಹಾಗೆ ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಲು ಇಚ್ಛಿಸುತ್ತಿದ್ದೀರ? ಹಾಗಾದರೆ ಬೇರೆ ನೀಡಿರುವ ಬ್ಯಾಂಕುಗಳಲ್ಲಿ ಯಾವ ಬ್ಯಾಂಕಿನಲ್ಲಿ ಅತ್ಯಂತ ಕಡಿಮೆ ಬಡ್ಡಿದರ ಸಿಗುತ್ತದೆ ಎಂದು ನೋಡಿಕೊಂಡು ನೀವು ಆ ಬ್ಯಾಂಕಿಗೆ ಭೇಟಿ ನೀಡಿ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಇಲ್ಲಿಯವರೆಗೂ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *