Post Office Recruitment: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಹತ್ತನೇ ತರಗತಿ ಪಾಸ್ ಆಗಿ ಕುಳಿತಿರುವಂತಹ ಹಾಗೂ ಉದ್ಯೋಗ ಆಕಾಂಕ್ಷಿಗಳಿಗೆ ಒಂದು ಗುಡ್ ನ್ಯೂಸ್ ಎಂದೇ ಹೇಳಬಹುದು. ಯಾಕೆಂದರೆ ಅಂಚೆ ಇಲಾಖೆಯಲ್ಲಿ ಸುಮಾರು 44,228 ಗ್ರಾಮೀಣ ಡಾಕ್ ಸೇವಕ ಹುದ್ದೆಗಳ ನೇಮಕಾತಿ ಆರಂಭವಾಗಿದೆ. ಸಂಪೂರ್ಣವಾದ ವಿವರ ಇಲ್ಲಿದೆ, ಲೇಖನವನ್ನು ಕೊನೆಯವರೆಗೂ ಓದಿ.
ಸ್ನೇಹಿತರೆ, ಗ್ರಾಮೀಣ ಡಾಕ್ ಸೇವಕ ಹುದ್ದೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 5ನೇ ತಾರೀಕು 2024 ಕೊನೆಯ ದಿನಾಂಕ ವಾಗಿರುತ್ತದೆ. ಆದ ಕಾರಣ ಕೊನೆ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿದರೆ ಮಾತ್ರ ಮಾನ್ಯವಾಗಿರುತ್ತದೆ ಎಂದು ಹೇಳಲು ಬಯಸುತ್ತೇನೆ. ಹಾಗಾಗಿ ತಮ್ಮ ಪ್ರದೇಶದಲ್ಲಿಯೇ ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳಬೇಕು ಎಂದು ಭಾವಿಸುವವರಿಗೆ ಇದು ಒಂದು ಗುಡ್ ನ್ಯೂಸ್.
ಅರ್ಜಿ ಸಲ್ಲಿಸಲು ಇರಬೇಕಾದ ವಿದ್ಯಾರ್ಹತೆ! {Post Office Recruitment}
ಸ್ನೇಹಿತರೆ, ಅಂಚೆ ಇಲಾಖೆಯ ಹೊರಡಿಸಿರುವ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಹತ್ತನೇ (SSLC)ತರಗತಿಯನ್ನು ಪಾಸ್ ಆಗಿರಬೇಕು ಎಂದು ತಿಳಿಸಲಾಗಿರುತ್ತದೆ. ಹಾಗಾಗಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು 10ನೇ ತರಗತಿ ಮುಗಿಸಬೇಕು. ಪುರುಷರು, ಮಹಿಳೆಯರು ಮತ್ತು ತೃತೀಯಲಿಂಗಿಯರೂ ಕೂಡ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ವಯೋಮಿತಿ! {Post Office Recruitment}
ಸ್ನೇಹಿತರೆ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು 18 ವರ್ಷ ಮೇಲ್ಪಟ್ಟಿರಬೇಕು ಹಾಗೂ 40 ವರ್ಷವನ್ನು ಮೀರಿರಬಾರದು ಎಂದು ತಿಳಿಸಲಾಗಿರುತ್ತದೆ. ಎಸ್ ಟಿ ಮತ್ತು ಎಸ್ ಸಿ ವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಲಿಕೆ ಕೂಡ ಇರುತ್ತದೆ. ಮುಗಿಸಿ ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಲಿಕೆ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 13 ವರ್ಷಗಳ ವಯೋಮಿತಿ ಸಡಲಿಕೆ ಇರುತ್ತದೆ.
ಅರ್ಜಿ ಸುಲ್ಕ ಎಷ್ಟಿರುತ್ತದೆ?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮತ್ತು ಇತರೆ ವರ್ಗದ ಅಭ್ಯರ್ಥಿಗಳಿಗೆ 100 ರೂಪಾಯಿಯ ಶುಲ್ಕ ವಿಧಿಸಲಾಗಿದ್ದು. ಎಸ್.ಟಿ ಮತ್ತು ಎಸ್.ಸಿ ಅಭ್ಯರ್ಥಿಗಳು ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸಲಾಗುವುದಿಲ್ಲ.
ಈ ಹುದ್ದೆಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ, ಅಂಚೆ ಸೇವಕ ಹಾಗೂ ಬಿಬಿಎಂ ಮತ್ತು ಎಬಿಪಿಎಂ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳು ಇಲಾಖೆಯ ರೆಗ್ಯುಲರ್ ನೌಕರ ಆಗುವುದಿಲ್ಲ. ಇಲ್ಲಿ ಮಾಸಿಕ ನಿಗದಿತವಾದ ಸಂಬಳವು ಮಾತ್ರ ದೊರಕುತ್ತದೆ.
ಈ {Post Office Recruitment} ಹುದ್ದೆಗಳಿಗೆ ಆಯ್ಕೆ ಆದರೆ ಸಂಬಳ ಎಷ್ಟು ಇರುತ್ತದೆ?
ಸ್ನೇಹಿತರೆ ಬಿಪಿಎಂ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 12,000 ದಿಂದ 29,380 ರೂಪಾಯಿಗಳವರೆಗೆ ಇರುತ್ತದೆ. ಏ ವಿ ಪಿ ಎಮ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 10,000 ದಿಂದ 24,470 ಮಾಸಿಕ ವೇತನ ಸಿಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಸ್ನೇಹಿತರೆ ಅರ್ಜಿ ಸಲ್ಲಿಸಲು ನೀವು ಕೆಳಗೆ ನೀಡಿರುವ ಜಾಲತಾಣವನ್ನು ಬಳಸಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಹಾಗಾಗಿ ಕೆಳಗೆ ಕೊಟ್ಟಿರುವ ಅಧಿಕೃತ ಜಾಲತಾಣವನ್ನು ಭೇಟಿ ನೀಡಿ ಅಲ್ಲಿ ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್
ಸ್ನೇಹಿತರೆ, ಮೇಲೆ ನೀಡಿರುವ ಜಾಲತಾಣದ ಲಿಂಕನ್ನು ಬಳಸಿಕೊಂಡು ನೀವು ಅಂಚೆ ಇಲಾಖೆಯ ಹೊರಡಿಸಿರುವ ಗ್ರಾಮೀಣ ಡಾಕ್ ಸೇವಕ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಇಲ್ಲಿಯವರೆಗೂ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು.