Jio New Plans: ನಮಸ್ಕಾರ ಸ್ನೇಹಿತರೆ, ರಿಲಯನ್ಸ್ ಜಿಯೋ ಭಾರತದಲ್ಲಿ ಇದೀಗ ಹೆಚ್ಚು ಬಳಕೆದಾರರನ್ನು ಹೊಂದಿರುವ ಟೆಲಿಕಾಂ ಕಂಪನಿ ಎಂದು ಹೇಳಬಹುದಾಗಿದೆ. ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಪ್ಲಾನ್ ಗಳನ್ನು ದೊರಕುವಲ್ಲಿ ಎಷ್ಟು ದಿನ ಯಶಸ್ವಿಯಾಗಿ ಕಾರ್ಯನಿರ್ವಹಿಸಿತ್ತು. ಆದರೆ ಜುಲೈ 3ನೇ ತಾರೀಖಿನಿಂದ ಜಿಯೋ ರಿಚಾರ್ಜ್ ಪ್ಲಾನ್ ಗಳ ಮೇಲೆ ಹೆಚ್ಚಿನ ದರಗಳನ್ನು ವಿಧಿಸಲಾಗಿದೆ. ಜಿಯೋ ಮಾತ್ರವಲ್ಲದೆ ಉಳಿದ ಟೆಲಿಕಾಂ ಕಂಪನಿಗಳ ಮೇಲೆಯೂ ಕೂಡ ರಿಚಾರ್ಜ್ ದರಗಳನ್ನು ಹೆಚ್ಚಿಸಲಾಗಿದೆ. ಈ ಲೇಖನದಲ್ಲಿ ಜೀವ ವತಿಯಿಂದ ಲಭ್ಯವಿರುವ ಅತ್ಯುತ್ತಮವಾದ ಪ್ಲಾನ್ ಗಳ ಬಗ್ಗೆ ತಿಳಿಸಿಕೊಡಲಿದ್ದೇನೆ. ಲೇಖನವನ್ನು ಕೊನೆಯವರೆಗೂ ಓದಿ.
ಸ್ನೇಹಿತರೆ, ಈ ಹಿಂದೆ ಜಿಯೋ ಟೆಲಿಕಾಂ ಕಂಪನಿಯು ಜುಲೈ 3ನೇ ತಾರೀಕಿನಂದು ತನ್ನ ರಿಚಾರ್ಜ್ ದರಗಳ ಮೇಲೆ 25% ನಷ್ಟು ಹೆಚ್ಚಳ ಮಾಡಿರುವುದು ನಿಮಗೆಲ್ಲ ಗೊತ್ತೇ ಇದೆ. ಇದೀಗ ಗ್ರಾಹಕರಿಗೆ ಉಪಯುಕ್ತವಾಗಲೆಂದು ಹೊಸ ಪ್ಲಾನ್ ಗಳನ್ನು ಪರಿಚಯಿಸಿದೆ ಎಂದು ಹೇಳಬಹುದು. ಆ ಪ್ಲಾನ್ ಗಳು ಏನೆಂಬುದನ್ನು ಈ ಕೆಳಗೆ ನೀಡಿರುತ್ತೇನೆ ನೋಡಿ.
ಮೂರು ಹೊಸ ರೀಚಾರ್ಜ್ ಪ್ಲಾನ್ ಗಳು!
1} 51 ರೂಪಾಯಿ ಪ್ಲಾನ್: ಈ ಪ್ಲಾನ್ ರಿಚಾರ್ಜ್ ಮಾಡಿಕೊಳ್ಳುವುದರಿಂದ ಅನಿಯಮಿತವಾಗಿ 5G ಡೇಟಾ ಹಾಗೂ 3GB 4G ಡೇಟಾವನ್ನು ಹೆಚ್ಚುವರಿ ಆಗಿ ಪಡೆಯುತ್ತೀರಾ.
2} 101 ರೂಪಾಯಿ ಪ್ಲಾನ್: ಈ ಪ್ಲಾನ್ ನ ಮೂಲಕ ನೀವು ಅನಿಯಮಿತವಾಗಿ 5G ಡೇಟಾ ಹಾಗೂ 6GB 4G ಡೇಟಾವನ್ನು ಪಡೆಯುತ್ತೀರಾ.
3} 151 ರೂಪಾಯಿ ಪ್ಲಾನ್: ಸ್ನೇಹಿತರೆ ಈ ಪ್ಲಾನ್ ನ ಮೂಲಕ ನೀವು ಅನ್ಲಿಮಿಟೆಡ್ ಆಗಿ 5G ಡೇಟಾ ಹಾಗೂ 9GB 4G ಡೇಟಾವನ್ನು ಹೆಚ್ಚುವರಿ ಆಗಿ ಪಡೆದುಕೊಳ್ಳುತ್ತೀರಾ.
ಈ ಪ್ಲಾನ್ಗಳ ಜೊತೆಗೆ ನೀವು ರಿಚಾರ್ಜ್ ಮಾಡಿಕೊಂಡರೆ ಅನಿಯಮಿತವಾಗಿ 5G ಡೇಟಾವನ್ನು ಬಳಸುತ್ತೀರಾ. ಕೇವಲ ನೀವು 5G ಫೋನ್ ನಲ್ಲಿ ಮಾತ್ರ ಬಳಸಬಹುದಾಗಿರುತ್ತದೆ. ಈ ಪ್ಲಾನ್ ಗಳನ್ನು ನೀವು ಡೇಟಾ ಬೂಸ್ಟರ್ ಪ್ಲಾನ್ ಗಳಾಗಿ ಬಳಕೆ ಮಾಡಿಕೊಳ್ಳಬಹುದಾಗಿರುತ್ತದೆ.
ಜಿಯೋ ಸಿಮ್ ಆರಂಭವಾದಾಗ ಗ್ರಾಹಕರಿಗೆ ತನ್ನ ಆಕರ್ಷಕ ಕೊಡುಗೆಗಳನ್ನು ನೀಡುವ ಮೂಲಕ ಹೆಚ್ಚಿನ ಮಟ್ಟದಲ್ಲಿ ಗ್ರಾಹಕರನ್ನು ಸಂಪಾದಿಸಿದೆ ಎಂದು ಹೇಳಿದರೆ ತಪ್ಪಾಗಲಾರದು. ಹಾಗೂ ಜಿಯೋ ಸಿಮ್ ಆರಂಭವಾದಾಗ ಜಿಯೋ ಸಿಮ್ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿತ್ತು. ಹಾಗೂ ಅತ್ಯಾಕಾಶಕ ಆಫರ್ ಗಳನ್ನು ಕೂಡ ನೀಡಲಾಗುತ್ತಿತ್ತು. ಆದರೆ ಇದೀಗ ಎಲ್ಲಾ ಟೆಲಿಕಾಂ ಕಂಪನಿಗಳೊಂದಿಗೆ ಜಿಯೋ ಕಂಪನಿಯೂ ಕೂಡ ತನ್ನ ರಿಚಾರ್ಜ್ ದರಗಳನ್ನು ಹೆಚ್ಚಳ ಮಾಡಿರುತ್ತದೆ.
ಆದರೆ ನೀವು ಮೇಲೆ ನೀಡಿರುವ ಪ್ಲಾನ್ ಗಳನ್ನು ಬಳಸುವ ಮೂಲಕ ಡೇಟಾ ಪ್ರಿಯರಿಗೆ ಉಪಯೋಗವಾಗಲಿದೆ ಎಂದು ಭಾವಿಸುತ್ತೇನೆ. ಯಾಕೆಂದರೆ ಅನಿಯಮಿತವಾಗಿ 5G ಡೇಟಾವನ್ನು ನೀವು ಮೇಲೆ ನೀಡುವ ಪ್ಲಾನ್ ಗಳ ರಿಚಾರ್ಜ್ ಮಾಡಿಕೊಳ್ಳುವ ಮೂಲಕ ಬಳಸಬಹುದಾಗಿರುತ್ತದೆ.