Annabhagya Money Status: ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿದೆಯಾ? ಈಗಲೇ ಚೆಕ್ ಮಾಡಿಕೊಳ್ಳಿ!

Annabhagya Money Status: ನಮಸ್ಕಾರ ಸ್ನೇಹಿತರೆ ನಿಮಗೆಲ್ಲ ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುವ ಮೊದಲು ಐದು ಗ್ಯಾರಂಟಿಗಳನ್ನು ನೀಡಿತ್ತು. ಅದರಲ್ಲಿ ಅನ್ನ ಭಾಗ್ಯ ಯೋಜನೆಯು ಒಂದು ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬಗಳಿಗೆ 10 ಕೆಜಿ ಅಕ್ಕಿ ನೀಡುತ್ತಿತ್ತು. ಆದರೆ 5 ಕೆಜಿ ಅಕ್ಕಿ ಹಾಗೂ ಉಳಿದ 5 ಕೆಜಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.

ಅನ್ನ ಭಾಗ್ಯ ಯೋಜನೆಯ ಹಣವು ನಿಮ್ಮ ಖಾತೆಗೆ ಜಮಾ ಆಗಿದೆಯಾ ಇಲ್ಲವಾ ಎಂಬುದನ್ನು ನೀವು ಯಾವ ರೀತಿ ತಿಳಿದುಕೊಳ್ಳಬೇಕು? ಹಾಗೂ ನಿಮ್ಮ ಖಾತೆಗೆ ಹಣ ಯಾವಾಗ ಜಮಾ ಆಗಿದೆ? ಅಥವಾ ಜಮಾ ಆಗಿಲ್ಲವಾ! ಎಂಬ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.

ಸ್ನೇಹಿತರೆ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದಾಗಿನಿಂದ 5 ಗ್ಯಾರಂಟಿಗಳನ್ನು ಘೋಷಿಸಿದ್ದು, ಅವುಗಳಲ್ಲಿ ಒಂದಾಗಿರುವ ಅನ್ನ ಭಾಗ್ಯ ಯೋಜನೆಯು ಪ್ರತೀ ತಿಂಗಳು ಕೂಡ ಬಡ ಜನರಿಗೆ 5 ಕೆಜಿ ಅಕ್ಕಿ ಹಾಗೂ ಐದು ಕೆಜಿ ಅಕ್ಕಿಯ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡುವ ಮುಖ್ಯ ಗುರಿಯನ್ನು ಈ ಯೋಜನೆಯ ಮೂಲಕ ಮಹಿಳೆಯರ ಬ್ಯಾಂಕ್ ಖಾತೆಗೆ ಹಣವನ್ನು ನೇರ ವರ್ಗಾವಣೆ ಮಾಡುವ ಉದ್ದೇಶವನ್ನು ಹೊಂದಿತ್ತು.

ಅನ್ನಭಾಗ್ಯ ಯೋಜನೆಯ ಹಣ ಚೆಕ್ ಮಾಡುವುದು ಹೇಗೆ? 

1). ಸ್ನೇಹಿತರೆ, ಅನ್ನಭಾಗ್ಯ ಯೋಜನೆಯ ಹಣ ಪರಿಶೀಲಿಸಿಕೊಳ್ಳಲು ಮೊದಲು ನೀವು ಪ್ಲೇ ಸ್ಟೋರ್ ನಿಂದ “ಡಿಬಿಟಿ” ಕರ್ನಾಟಕ ಎಂಬ ಅಪ್ಲಿಕೇಶನ್ ಅನ್ನು ತೆಗೆದುಕೊಳ್ಳಬೇಕು.

2). ನಂತರ ಅದರಲ್ಲಿ ಮಹಿಳೆಯ ಆಧಾರ್ ಕಾರ್ಡ್ ನಂಬರ್ ಹಾಕುವ ಮೂಲಕ “ಓಟಿಪಿ”ಯನ್ನು ಪಡೆದು ಅಲ್ಲಿ ಓಟಿಪಿಯನ್ನು ನಮೂದಿಸಿ ಮುಂದುವರೆಯಿರಿ.

3). ಅದಾದ ನಂತರ ನಿಮಗೆ ಫಲಾನುಭವಿಯ ಸಂಪೂರ್ಣವಾದ ವಿವರವನ್ನು ಅಲ್ಲಿ ಕೆಳಗೆ ನೀಡಲಾಗುತ್ತದೆ, ಅದು ಸರಿ ಇದೆ ಎಂದು ನೀವು ಮುಂದುವರೆಯಿರಿ. 

4). ನಂತರದಲ್ಲಿ ನಿಮಗೆ “ಪೇಮೆಂಟ್ ಟ್ರಾನ್ಸ್ಯಾಕ್ಷನ್” ಎಂಬ ಒಂದು ಆಪ್ಷನ್ ಕಾಣಿಸುತ್ತಿದೆ ನಂತರ ನೀವು ಆಪ್ಷನ್ ನಲ್ಲಿ ಮುಂದುವರೆಯಿರಿ.

5). ಅದಾದ ನಂತರ ನೀವು ಅಲ್ಲಿ “ಅನ್ನ ಭಾಗ್ಯ” ಹಾಗೂ ಗೃಹಲಕ್ಷ್ಮಿ ಎಂಬ ಎರಡು ಆಯ್ಕೆಗಳನ್ನು ನೀವು ಕಾಣಬಹುದಾಗಿರುತ್ತದೆ.

6). ನೀವೇನಾದರೂ ಅನ್ನ ಭಾಗ್ಯ ಹಣವನ್ನು ಪರಿಶೀಲಿಸಿಕೊಳ್ಳಲು ಬಯಸಿದರೆ ಅನ್ನ ಭಾಗ್ಯ ಯೋಜನೆ ಮೇಲೆ ಒತ್ತಬೇಕು. ಅಥವಾ ನೀವೇನಾದರೂ ಗೃಹಲಕ್ಷ್ಮಿ ಯೋಜನೆಯ ಹಣಪರಿಶೀಲಿಸಿಕೊಳ್ಳಲು ಗೃಹಲಕ್ಷ್ಮಿ ಯೋಜನೆಯ ಆಯ್ಕೆಯನ್ನು ಮಾಡಿ. 

ಸ್ನೇಹಿತರೆ, ಮೇಲೆ ನೀಡಿರುವ ಹಂತಗಳನ್ನು ನೀವು ಪಾಲಿಸಿ, ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣವನ್ನು ನಿಮ್ಮ ಮೊಬೈಲ್ ನಲ್ಲಿ ಸುಲಭವಾಗಿ ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ. ಹಾಗಾಗಿ ಅನ್ನ ಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೀವು ಪರಿಶೀಲಿಸಿಕೊಳ್ಳಬೇಕು ಎಂದು ಬಯಸಿದರೆ, ಇದು ಸುಲಭವಾದ ವಿಧಾನ!

WhatsApp Group Join Now
Telegram Group Join Now

Leave a Reply

Your email address will not be published. Required fields are marked *