Gruhalakshmi Update : ಗೃಹಲಕ್ಷ್ಮಿ ಯೋಜನೆಯ 11 & 12ನೇ ಕಂತಿನ ಒಟ್ಟು ₹4000 ರೂ. ಹಣವೂ ಈ ದಿನ ಖಾತೆಗೆ ಜಮಾ.!

Gruhalakshmi Update.

Gruhalakshmi Update : ಗೃಹಲಕ್ಷ್ಮಿ ಯೋಜನೆಯು ಕರ್ನಾಟಕದಲ್ಲಿ ಮಹಿಳೆಯರಿಗೆ ಆರ್ಥಿಕ ಬೆಂಬಲದ ಮೂಲಾಧಾರವಾಗಿದೆ ಮತ್ತು ರಾಜ್ಯಾದ್ಯಂತ ಕುಟುಂಬಗಳಿಗೆ ಮಹತ್ವದ ನೆರವು ನೀಡುತ್ತದೆ. ಮಹಿಳೆಯರಲ್ಲಿ ಬಹಳ ಜನಪ್ರಿಯವಾಗಿರುವ ಈ ಯೋಜನೆಯು ಇಲ್ಲಿಯವರೆಗೆ ಅರ್ಹವಾದ ನೇರ ಲಾಭ ವರ್ಗಾವಣೆ (ಡಿಬಿಟಿ) ಪ್ರಯೋಜನಗಳಿಗೆ ಪ್ರತಿ ಕಂತಿಗೆ ರೂ 2,000 ರಂತೆ ಹತ್ತು ಕಂತುಗಳನ್ನು ಯಶಸ್ವಿಯಾಗಿ ವಿತರಿಸಿದೆ, ಒಟ್ಟು ರೂ 2,000 ಪ್ರತಿ ಕಂತಿಗೆ. 2,000 ನೇರವಾಗಿ ಸ್ವೀಕರಿಸುವವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಮತ್ತು 11 ಮತ್ತು 12 ನೇ ಕಂತುಗಳ ಒಟ್ಟು ನಾಲ್ಕು ಸಾವಿರ (₹4,000) ರೂಪಾಯಿಗಳ ಜಮಾ ಆಗುವ ಬಗ್ಗೆ ಹೊಸ ಅಪ್ಡೇಟ್ ಬಗ್ಗೆ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

ಗೃಹಲಕ್ಷ್ಮಿ ಯೋಜನೆಯ 11 & 12ನೇ ಕಂತಿನ ₹4,000 ಮಹಿಳೆಯರ ಖಾತೆಗೆ ಜಮಾ!

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷಿತ ಮತ್ತು ಜನಪ್ರಿಯ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯು ಲೋಕಸಭೆ ಚುನಾವಣೆಯ ಸಮಯದಲ್ಲಿ ಹಣವನ್ನು ಸರಿಯಾಗಿ ಎಲ್ಲಾ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿತ್ತು. ಆದರೆ, ಕಾರಣಾಂತರಗಳಿಂದ ಕಳೆದ ಎರಡು ತಿಂಗಳಿಂದ ಈ ಯೋಜನೆಯ ಹಣ ಮಹಿಳಾ ಫಲಾನುಭವಿಗಳಿಗೆ ತಲುಪಿಲ್ಲ. ಈ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಘೋಷಿಸಿದರು. ಮೇ ತಿಂಗಳ ಕಂತಿನ ವರೆಗೆ ಗೃಹಲಕ್ಷ್ಮಿ ಹಣವು ಸರಿಯಾಗಿ ಪಾವತಿ ಆಗಿದೆ. ಆದರೆ ಕಾರಣಾಂತರಗಳಿಂದ ಜೂನ್ ಮತ್ತು ಜುಲೈ ತಿಂಗಳ ಹಣ ಪಾವತಿಯಾಗಿಲ್ಲ. ಸಾಧ್ಯವಿರುವ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿ ಆಗಸ್ಟ್ ಮೊದಲ ವಾರದೊಳಗೆ ಈ ಹಣವನ್ನು ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

ಇದನ್ನೂ ಓದಿ: New Ration Card: ಹೊಸ ರೇಷನ್ ಕಾರ್ಡ್ ಹಾಗೂ ತಿದ್ದುಪಡಿ ಮಾಡಿಸಿಕೊಳ್ಳಲು ಇನ್ನು 2 ದಿನ ಮಾತ್ರ ಕಾಲಾವಕಾಶ!

ಸಿಎಂ ಸಿದ್ದರಾಮಯ್ಯ ಅವರಿಂದ ಭರವಸೆ.!

ಮಡಿಕೇರಿಯಲ್ಲಿ ನೆರೆ ಪರಿಸ್ಥಿತಿ ಪರಿಶೀಲಿಸಿದ ಬಳಿಕ ಸುದ್ದಿ ವಾಹಿನಿಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೇ ತಿಂಗಳ ತನಕ ಎಲ್ಲರ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆಯಾಗಿದೆ. ಜೂನ್ ಮತ್ತು ಜುಲೈ ಎರಡು ತಿಂಗಳು ಹಣವು ಪಾವತಿ ಆಗುವುದು ಇನ್ನೂ ಬಾಕಿ ಇದೆ ಎಂದು ಅವರು ಹೇಳಿದರು. ಜೂನ್ ತಿಂಗಳ ಗೃಹಲಕ್ಷ್ಮಿ ಹಣವನ್ನು ಫಲಾನುಭಿಗಳ ಖಾತೆಗೆ ಜಮಾ ಮಾಡಲು ಸೂಚಿಸಲಾಗಿದೆ ಎಂದರು.

ಇದನ್ನೂ ಓದಿ: Life’s Good Scholarship: ವಿದ್ಯಾರ್ಥಿಗಳಿಗೆ ₹1 ಲಕ್ಷದವರೆಗೆ ಸ್ಕಾಲರ್ಶಿಪ್ ಸಿಗಲಿದೆ! ಈಗಲೇ ಅರ್ಜಿ ಸಲ್ಲಿಸಿ!

WhatsApp Group Join Now
Telegram Group Join Now

Leave a Reply

Your email address will not be published. Required fields are marked *