Gas Cylinder Subsidy Amount : ಇವತ್ತಿನ ದಿನ ಬಹುತೇಕ ಪ್ರತಿಯೊಬ್ಬರ ಮನೆಯಲ್ಲಿಯೂ ಗ್ಯಾಸ್ ಸಿಲೆಂಡರ್ ಅನ್ನು (LPG gas cylinder) ಬಳಸಲಾಗುತ್ತದೆ. ಮುಂಚಿನಂತೆ ಒಲೆ ಹೊತ್ತಿಸಿ ಅಡುಗೆ ಮಾಡುವ ಕಷ್ಟ ಹೆಣ್ಣು ಮಕ್ಕಳಿಗೆ ಇದೀಗ ಇಲ್ಲ.
ಸಾಮಾನ್ಯರಿಗೆ ಹಣದುಬ್ಬರದ ಹಿನ್ನೆಲೆಯಲ್ಲಿ ಗ್ಯಾಸ್ ಸಿಲಿಂಡರ್ ನ ದರವು ಜಾಸ್ತಿ ಇರುವ ಸಮಯದಲ್ಲಿ ಸಾಕಷ್ಟು ತೊಂದರೆಗಳು ಕೂಡ ಆಗುತ್ತಿತ್ತು. ಈಗ ಸರ್ಕಾರದಿಂದ 200 ರ ರೂಪಾಯಿಗಳಷ್ಟು ಸಬ್ಸಿಡಿಯು ಸಿಗುತ್ತಿದೆ. ಹಾಗಾಗಿ 900 ರ ಆಸುಪಾಸಿನಲ್ಲಿ ಗ್ಯಾಸ್ ಸಿಲಿಂಡರ್ ಖರೀದಿ ಮಾಡಲು ಇದು ಈಗ ಸಾಧ್ಯವಿದೆ.
ಉಜ್ವಲಾ ಯೋಜನೆ ಅಡಿಯಲ್ಲಿ ಸಬ್ಸಿಡಿ ಸಿಗ್ತಾ ಇದೇ! (Pradhanmantri Ujjwala Yojana)
ಭಾರತದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಗ್ಯಾಸ್ ಸಿಲೆಂಡರ್ ಮೂಲಕವೇ ಅಡುಗೆ ಮಾಡುವಂತೆ ಆಗಬೇಕು. ಮಹಿಳೆಯರಿಗೆ ಅಡುಗೆ ಮಾಡುವಷ್ಟು ಸಮಯ ಹೊರತುಪಡಿಸಿ ಇನ್ನಷ್ಟು ಸಮಯ ಸಿಕ್ಕು, ಆಕೆ ಅದನ್ನು ತನ್ನ ಸ್ವಾವಲಂಬನೆ (independent life) ಯ ಜೀವನ ನಡೆಸಲು ಬಳಸಿಕೊಳ್ಳಬೇಕು ಅನ್ನುವ ಕಾರಣಕ್ಕೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ (free gas connection) ಸರ್ಕಾರ ನೀಡುತ್ತಿದೆ ಅಂತಾನೆ ಹೇಳಬಹುದು.
ಹಲವಾರು ಮಹಿಳೆಯರು ಉಜ್ವಲ 2.0 ಯೋಜನೆಯ ಅಡಿಯಲ್ಲಿ ಇಂದು ಉಚಿತವಾಗಿ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ 100 ರೂಪಾಯಿಗಳ ಸಬ್ಸಿಡಿ )subsidy) ಕೂಡ ನೀಡಲಾಗುತ್ತದೆ. ಗ್ಯಾಸ್ ಸಿಲೆಂಡರ್ ಖರೀದಿ ಮಾಡುವಾಗ ಸಂಪೂರ್ಣ ಹಣವನ್ನು ಪಾವತಿ ಮಾಡಬೇಕು ನಂತರ ಸಬ್ಸಿಡಿ ಹಣವನ್ನು ಫಲಾನುಭವಿಗಳ ಖಾತೆಗೆ (Bank Account) ಜಮಾವನ್ನ ಮಾಡಲಾಗುವುದು ಅಂತ ತಿಳಿಸಲಾಗಿದೆ.
ಸಬ್ಸಿಡಿ ಹಣ ಬಂದಿದ್ಯೋ ಇಲ್ವೋ ಅಂತ ನೀವು ಚೆಕ್ ಮಾಡುವುದು ಹೇಗೆ? (How to check subsidy status)
ಕಳೆದ ತಿಂಗಳಿನ ಸಬ್ಸಿಡಿ ಹಣ ಕೆಲವರ ಖಾತೆಗೆ ಜಮಾ ಆಗಿತ್ತು ಹಾಗೂ ಕೆಲವರ ಖಾತೆಗೆ ಜಮಾ ಆಗಿರಲಿಲ್ಲ ಇನ್ನೂ ಪೆಂಡಿಂಗ್ ಇರುವ ಹಣವನ್ನು ಸದ್ಯದಲ್ಲಿಯೇ ಸರ್ಕಾರ ಬಿಡುಗಡೆ ಮಾಡಬಹುದು ಎಂದೂ ತಿಳಿಸಲಾಗಿದೆ.
ಹಾಗಾದ್ರೆ ನಿಮ್ಮ ಖಾತೆಗೆ ಹಣ ಜಮಾ ಆಗಿದ್ಯೋ ಇಲ್ಲವೋ ಎಂಬುದನ್ನು ನೀವು ಕೂಡ ತಿಳಿದುಕೊಳ್ಳಲು https://www.mylpg.in ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಈಗ ಭಾರತ್, ಎಚ್ ಪಿ, ಇಂಡಿಯನ್ ಮೂರು ಗ್ಯಾಸ್ ಕಂಪನಿಗಳ ಹೆಸರುಗಳನ್ನು ನಿಮ್ಮ ಮುಂದೆ ತೋರಿಸಲಾಗುತ್ತದೆ.
ಇವುಗಳಲ್ಲಿ ನೀವು ಯಾವ ಕಂಪನಿಯ ಗ್ಯಾಸ್ ಕನೆಕ್ಷನ್ (gas connection) ತೆಗೆದುಕೊಂಡಿದ್ದೀರಾ ಆ ಕಂಪನಿಯ ಬಾಕ್ಸ್ ಮೇಲೆ ನೀವು ಕ್ಲಿಕ್ ಮಾಡಿ. ಈಗ ನೇರವಾಗಿ ಅದೇ ಕಂಪನಿಯ ಜಾಲತಾಣ ತೆರೆದುಕೊಳ್ಳುತ್ತದೆ. ಇಲ್ಲಿ ನೀವು ಗ್ಯಾಸ್ ಕನೆಕ್ಷನ್ ಐಡಿ ನಮೂದಿಸುವುದರ ಮೂಲಕ ನಿಮ್ಮ ಖಾತೆಗೆ ಹಣ ಜಮಾ ಆಗಿದ್ಯೋ ಇಲ್ವೋ ಎಂಬುದನ್ನು ಕೂಡ ತಿಳಿದುಕೊಳ್ಳಬಹುದು ಆಗಿದೆ.