ನಮಸ್ಕಾರ ಸ್ನೇಹಿತರೆ… ಈ ಲೇಖನದಲ್ಲಿ ತಿಳಿಸುತ್ತಿರುವಂತಹ ಮಾಹಿತಿ ಏನೆಂದರೆ ಆಧಾರ್ ಕಾರ್ಡ್ ಅಪ್ಡೇಟ್ ಗೆ ಸರ್ಕಾರವು ಡೆಡ್ ಲೈನ್ ನೀಡಿದೆ. ಆ ದಿನಾಂಕ ಯಾವುದು ಯಾವ ರೀತಿಯಾಗಿ ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ಆನ್ಲೈನ್ ಮುಖಾಂತರ ಮಾಡಬೇಕು ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಈ ಲೇಖನದಲ್ಲಿ ತಿಳಿಸಲಾಗಿದೆ ನೀವು ಕೂಡ ಉಚಿತವಾಗಿ ಆಧಾರ್ ಕಾರ್ಡ್ಗಳನ್ನು ಅಪ್ಡೇಟ್ ಮಾಡಿಸಬೇಕು ಎಂದರೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ ಉಪಯುಕ್ತವಾದಂತಹ ಮಾಹಿತಿಯನ್ನು ಕೂಡ ಪಡೆದುಕೊಳ್ಳಿರಿ.
ಸ್ನೇಹಿತರೆ ಆಧಾರ್ ಕಾರ್ಡ್ ಎಂಬುದು ಎಲ್ಲರಿಗೂ ಕೂಡ ಮುಖ್ಯವಾದಂತಹ ದಾಖಲೆ ವೋಟರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಯಾವ ರೀತಿಯಾಗಿ ಒಬ್ಬ ವ್ಯಕ್ತಿಗೆ ಮುಖ್ಯವಾದ ಅಂತಹ ದಾಖಲೆಯು ಅದೇ ರೀತಿಯಾಗಿ ಆಧಾರ್ ಕಾರ್ಡ್ ಕೂಡ ಮುಖ್ಯವಾದಂತಹ ದಾಖಲೆ. ಈ ಆಧಾರ್ ಕಾರ್ಡ್ ಅನ್ನು ಹತ್ತು ವರ್ಷಕ್ಕೊಮ್ಮೆ ಅಪ್ಡೇಟ್ ಮಾಡಿಸಿಕೊಳ್ಳಬೇಕು ಇಲ್ಲದಿದ್ದರೆ ಸರ್ಕಾರವು ಅಂತಹ ಆಧಾರ್ ಕಾರ್ಡುಗಳನ್ನು ರದ್ದುಗೊಳಿಸುತ್ತದೆ. ಆದ್ದರಿಂದ ಯಾರ ಆಧಾರ್ ಕಾರ್ಡ್ ಗಳು 10 ವರ್ಷ ಮೇಲ್ಪಟ್ಟಿವೆ ಅಂತಹ ಆಧಾರ್ ಕಾರ್ಡುಗಳನ್ನು ಅಪ್ಡೇಟ್ ಮಾಡಿಸಿಕೊಳ್ಳಿ.
ಸರ್ಕಾರದಿಂದ ಉಚಿತವಾಗಿ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಕೊಡಲಾಗುತ್ತಿದೆ, ಸರ್ಕಾರ ಉಚಿತವಾಗಿ ಅಪ್ಡೇಟ್ ಮಾಡಲು ಇನ್ನೇನು ಕೆಲವೇ ದಿನಗಳಲ್ಲಿ ಕೊನೆಯ ದಿನಾಂಕವಾಗಿ ಮುಕ್ತಾಯಗೊಳಿಸಲಿದೆ. ಆದ್ದರಿಂದ ಆ ದಿನಾಂಕದ ಒಳಗೆ ನಿಮ್ಮ ಆಧಾರ್ ಕಾರ್ಡ್ ಏನಾದರೂ ಅಪ್ಡೇಟ್ ಮಾಡಬೇಕು ಎಂದರೆ ಆ ದಿನಾಂಕದ ಒಳಗೆ ಮಾಡಿಸಿಕೊಳ್ಳಿ, ನೀವು ಕೇಳಬಹುದು ಆಧಾರ್ ಕಾರ್ಡ್ ಡೆಡ್ ಲೈನ್ ಆದ ದಿನಾಂಕದ ಬಳಿಕವೂ ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು ಎಂದು, ಇಲ್ಲ ಸ್ನೇಹಿತರೆ ಸರ್ಕಾರವು ಆಧಾರ್ ಕಾರ್ಡನ್ನು ನಿಗದಿ ದಿನಾಂಕದ ನಂತರ ಯಾವುದೇ ಕಾರಣಕ್ಕೂ ಮಾಡಿಕೊಡುವುದಿಲ್ಲ.
ಉಚಿತವಾಗಿ ಅಪ್ಡೇಟ್ ಅನ್ನು ನೀವು ಆಗ ಅಪ್ಡೇಟ್ ಅನ್ನು ಮಾಡಿಸಬೇಕು ಎಂದರೆ ಶುಲ್ಕವನ್ನು ಪಾವತಿಸಿ ಅಪ್ಡೇಟ್ ಮಾಡಿಸಿಕೊಳ್ಳಬೇಕಾಗುತ್ತದೆ, ಸರ್ಕಾರವು ನಿಗದಿ ಮಾಡಿರುವಂತಹ ದಿನಾಂಕದ ಒಳಗೆ ನೀವೇನಾದರೂ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಿಕೊಂಡರೆ ಯಾವುದೇ ರೀತಿಯಾದಂತಹ ಶುಲ್ಕವನ್ನು ಪಾವತಿಸುವಂತಹ ಅವಕಾಶ ಇರುವುದಿಲ್ಲ. ಉಚಿತವಾಗಿ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗುತ್ತದೆ.
ನೀವು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಗಳನ್ನು ಬಳಸಿಕೊಂಡು ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ಉಚಿತವಾಗಿಯೇ ಮನೆಯಲ್ಲಿಯೇ ಕುಳಿತು ಮಾಡಿಕೊಳ್ಳಬಹುದು. ಯಾವ ರೀತಿಯಾಗಿ ಆನ್ಲೈನ್ ಮುಖಾಂತರ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ.
ಆನ್ಲೈನ್ ಮುಖಾಂತರ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡುವುದು ಯಾವ ರೀತಿಯಾಗಿ ಎಂದರೆ :-
- ಮೊದಲಿಗೆ ನೀವು ಆಧಾರ್ ಕಾರ್ಡ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ. ಅಧಿಕೃತ ವೆಬ್ಸೈಟ್ ಲಿಂಕ್ ಇದೇ ನೋಡಿ. http://uidai.gov.inಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಒಂದು ಹೋಂಪೇಜ್ ಓಪನ್ ಆಗುತ್ತದೆ. ಅದರಲ್ಲಿ ಮೈ ಆಧಾರ್ ಟ್ಯಬ್ ಅಡಿಯಲ್ಲಿ ಅಪ್ಡೇಟ್ ಡೆಮಾಗ್ರಾಫಿಕ್ಸ್ ಸ್ಟೇಟಸ್ ಮತ್ತು ಸ್ಟೇಟಸ್ ಅನ್ನು ಕ್ಲಿಕ್ ಮಾಡಿ,
- ನಂತರ ಲಾಗಿನ್ ಎಂಬ ಪುಟ ಓಪನ್ ಆಗುತ್ತದೆ. ಅದರಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡನ್ನು ನಮೂದಿಸಿ. ಮತ್ತು ಲಾಗಿನ್ ಆಗಲು ಓಟಿಪಿಯನ್ನು ಆಯ್ಕೆಯನ್ನು ಆರಿಸಿ.
- ಇದೆಲ್ಲಾ ಆದ ನಂತರ ಅಪ್ಡೇಟ್ ಆಧಾರ್ ಆನ್ಲೈನ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ಕೇಳುವಂತಹ ಎಲ್ಲ ಮಾಹಿತಿಗಳನ್ನು ಒದಗಿಸಿ ಮತ್ತು ಅಗತ್ಯವಿರುವಂತ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಈ ಪ್ರಕ್ರಿಯೆ ಎಲ್ಲಾ ಆದ ನಂತರ ಸಬ್ಮಿಟ್ ಮಾಡಿ.
- ಇದೆಲ್ಲಾ ಆದ ನಂತರ ನಿಮ್ಮ ಆಧಾರ್ ಕಾರ್ಡ್ ನವೀಕರಣವಾಗಿರುತ್ತದೆ.
- ಜೂನ್ 14 ಉಚಿತವಾಗಿ ಅಪ್ಡೇಟ್ ಮಾಡಲು ಕೊನೆಯ ದಿನಾಂಕ.
ನೋಡಿದ್ರಲ್ಲ ಸ್ನೇಹಿತರೆ ಉಚಿತವಾಗಿ ಆಧಾರ್ ಕಾರ್ಡ್ಗಳನ್ನು ಯಾವ ರೀತಿ ಅಪ್ಡೇಟ್ ಮಾಡಿಸಬೇಕು ಎಂದು ಇನ್ನೇಕೆ ತಡ ಮಾಡುವಿರಿ ಈ ಒಂದು ಮೇಲ್ಕಂಡ ವಿಧಾನದಲ್ಲಿಯೇ ನೀವು ಕೂಡ ಉಚಿತವಾಗಿ ನಿಮ್ಮ ಆಧಾರ್ ಕಾರ್ಡ್ ಗಳನ್ನು ಕೂಡ ಅಪ್ಡೇಟ್ ಮಾಡಿಸಿರಿ. ನಿಮ್ಮ ಫೋಟೋ ವಿಳಾಸ ಇನ್ನಿತರ ದಿನಾಂಕ ಎಲ್ಲಾ ಮಾಹಿತಿಯನ್ನು ಕೂಡ ಈ ಸಂದರ್ಭದಲ್ಲಿ ಬದಲಾವಣೆ ಮಾಡಿಸಬಹುದಾಗಿದೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…