adhar and pahani link: ನಮಸ್ಕಾರ ಸ್ನೇಹಿತರೆ ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಆಧಾರ್ ಕಾರ್ಡನ್ನು ಪಹಣಿಯೊಂದಿಗೆ ಲಿಂಕ್ ಮಾಡುವುದು ಹೇಗೆ ಮತ್ತು ಲಿಂಕ್ ಮಾಡದೆ ಇದ್ದಲ್ಲಿ ಯಾವೆಲ್ಲ ನಷ್ಟಗಳನ್ನು ಅನುಭವಿಸುತ್ತೀರಾ ಎಂಬ ಮಾಹಿತಿಯನ್ನು ನೀಡಿರುತ್ತದೆ ಲೇಖನವನ್ನು ಕೊನೆಯವರೆಗೂ ಓದಿ.
ಸ್ನೇಹಿತರೆ,ಇದೀಗ ರಾಜ್ಯದಲ್ಲಿ ಎಲ್ಲಾ ರೈತರಿಗೆ ನಿಗದಿತ ಸಮಯದಲ್ಲಿ ಸರಕಾರದ ಸೌಲಭ್ಯಗಳನ್ನು ಒದಗಿಸಲು ಪಹಣಿ ಅಥವಾ RTCಗೆ ಆಧಾರ್ ಸೀಡಿಂಗ್(Adhar Seeding)ಮಾಡುವುನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
ಸ್ನೇಹಿತರೆ,ಅದರಂತೆ ರೈತರು(Formers)ತಮ್ಮ ಜಮೀನಿನ ಪಹಣಿ(RTC)ಹಾಗೂ ಆಧಾರ್(Adhar)ದಾಖಲಾತಿಗಳೊಂದಿಗೆ ಸ್ವಯಂ ಪ್ರೇರಣೆಯಿಂದ ಇಲಾಖೆಯ https://landrecords.karnataka.gov.in/ service4 ಜಾಲತಾಣದಲ್ಲಿ ಲಾಗಿನ್ ಮಾಡಿಕೊಂಡು ಆಧಾರ್‌ನೊಂದಿಗೆ ನೀವು
ಲಿಂಕ್ ಮಾಡಿಸಲು ಅವಕಾಶವನ್ನು ಸರ್ಕಾರದಿಂದ ಕಲ್ಪಿಸಲಾಗಿದೆ ಎಂದು ಹೇಳಲು ಬಯಸುತ್ತೇನೆ.
ಪಹಣಿ(RTC)ಹಾಗೂ ಆಧಾರ್(Adhar)ದಾಖಲೆಯೊಂದಿಗೆ ಸಂಬಂಧಪಟ್ಟ ಗ್ರಾಮ ಆಡಳಿತಾಧಿಕಾರಿಯನ್ನು ಸಂಪರ್ಕಿಸುವ ಮೂಲಕವೂ ನೀವು ಲಿಂಕ್ ಮಾಡಬಹುದು ಎಂದು ತಿಳಿಸಲಾಗಿದೆ.