ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡದೆ ಇದ್ದಲ್ಲಿ ದಂಡ! ಸರ್ಕಾರಕ್ಕೆ ಸಿಕ್ಕ ದಂಡದ ಮೊತ್ತ ಎಷ್ಟು ಗೊತ್ತಾ?

ನಮಸ್ಕಾರ ಸ್ನೇಹಿತರೆ,ಆಧಾರ್ ಹಾಗೂ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡುವುದನ್ನು ಸರ್ಕಾರವು ಈ ಹಿಂದೆಯೇ ಕಡ್ಡಾಯಗೊಳಿಸಿದೆ ಎಂದು ತಿಳಿಸಲಾಗಿದೆ. ಲಿಂಕಿಂಗ್ ಗಡುವು ಮೀರಿದರೆ ದಂಡವನ್ನು ಇದೀಗ ವಿಧಿಸಿದೆ. ಆಧಾರ್‌ನೊಂದಿಗೆ ಪ್ಯಾನ್(Adhar Card and Pan Card Link)ಲಿಂಕ್ ಮಾಡಲು ವಿಳಂಬ ಮಾಡಿದ್ದಕ್ಕಾಗಿ ಸರ್ಕಾರವು ಸುಮಾರು ₹600 ಕೋಟಿ ಹಣವನ್ನು ದಂಡವಾಗಿ ಸಂಗ್ರಹಿಸಿದೆ ಎಂದು ತಿಳಿದು ಬಂದಿದೆ.

ಒಬ್ಬ ಮನುಷ್ಯ ಜೂನ್ 30, 2023 ದಿನಾಂಕದ ಒಳಗೆ ತಮ್ಮ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಲು ವಿಫಲರಾದರೆ(Failure)ಮತ್ತು ನಂತರದ ದಿನಾಂಕದಲ್ಲಿ ಅದನ್ನು ಲಿಂಕ್ ಮಾಡಲು ಬಯಸಿದರೆ, ದಂಡವನ್ನು ಪಾವತಿಸಿದ ನಂತರ ಅವರು ಲಿಂಕ್(link )ಮಾಡಬಹುದಾಗಿದೆ ಎಂದು ತಿಳಿಸಲಾಗಿದೆ.

11.5 ಕೋಟಿ ಪ್ಯಾನ್ ಕಾರ್ಡ್‌ಗಳು ನಿಷ್ಕ್ರೀಯ ಆಗಲು ಕಾರಣ ಏನಿರಬಹುದು?

ದಿನಾಂಕ ಜೂನ್ 30, 2023 ರ ಕೊನೆಯ ದಿನಾಂಕದ ನಂತರ ತಮ್ಮ ಪ್ಯಾನ್(PAN )ಮತ್ತು ಆಧಾರ್ ಅನ್ನು ಲಿಂಕ್ ಮಾಡದ ವ್ಯಕ್ತಿಗಳಿಂದ ₹1,000 ರೂಪಾಯಿಗಳ ತಡವಾದ ದಂಡದ ಮೂಲಕ ಸರ್ಕಾರ ಗಳಿಸಿದ ವಿವರಗಳ ಆ ಒಂದು ಪ್ರಶ್ನೆಗೆ ಚೌಧರಿ ಉತ್ತರವನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಅಂತಹ ಪ್ಯಾನ್‌ಗಳಿಗೆ ಯಾವುದೇ ಮರುಪಾವತಿಯನ್ನು ಮಾಡಲಾಗುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ(Income and tax department)ಹೇಳಿದೆ. ಅಲ್ಲದೆ, ಟಿಡಿಎಸ್(TDS)ಮತ್ತು ಟಿಸಿಎಸ್(TCS)ಅನ್ನು ಹೆಚ್ಚಿನ ದರದಲ್ಲಿ ಕಡಿತಗೊಳಿಸಲಾಗುತ್ತದೆ/ಸಂಗ್ರಹಿಸಲಾಗುತ್ತದೆ ಎಂದು ತಿಳಿಸಲಾಗಿದೆ. ₹1,000 ರೂಪಾಯಿಗಳ ವಿಳಂಬ ಶುಲ್ಕವನ್ನು ಪಾವತಿಸುವ ಮೂಲಕ ಪ್ಯಾನ್(PAN)ಅನ್ನು ಮತ್ತೆ ಬಳಕೆ ಮಾಡಬಹುದು ಆಗಿದೆ.

ಆಧಾರ್- ಪ್ಯಾನ್(Adhar &Pan)ಲಿಂಕ್‌ಗೆ ದಂಡ ಪಾವತಿಸುವುದು ಯಾವ ರೀತಿ ಅಂತ ತಿಳಿದುಕೊಳ್ಳಿ

1: ಆದಾಯ ತೆರಿಗೆ ಇಲಾಖೆಯ e-filing ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

2: ನಿಮ್ಮ ಖಾತೆಗೆ ಲಾಗಿನ್ ಆಗಬೇಕು.

3: Link PAN with Aadhaar ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಿರಿ

4: ಎಲ್ಲ ಅಗತ್ಯವಾದ ಮಾಹಿತಿಗಳನ್ನು ಮೊದಲು ನಮೂದಿಸಿ

5: ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು e-pay ತೆರಿಗೆಯನ್ನು ಬಳಸಬೇಕು.

6: PAN/TAN ವಿಭಾಗದಲ್ಲಿ ಪ್ಯಾನ್ ನಂಬರ್ ನಮೂದಿಸಿದ ಬಳಿಕ ಮೊಬೈಲ್ ನಂಬರ್ ಅನ್ನು ನಮೂದಿಸಬೇಕು ಆಗುತ್ತದೆ

7: PAN/TANನಲ್ಲಿ ನಲ್ಲಿ ಎರಡನೇ ಬಾರಿಗೆ ಪ್ಯಾನ್ ಕಾರ್ಡ ನಂಬರ್ ನಮೂದಿಸಿ Confirm ಕ್ಲಿಕ್ ಮಾಡಿಕೊಳ್ಳಿರಿ

8: ಅದಾದ ಬಳಿಕ ಮುಂದುವರೆಸು (Continue) ಬಟನ್ ಕ್ಲಿಕ್ ಮಾಡಿಕೊಳ್ಳಿ

9: 2023-24 ವರ್ಷವನ್ನು ಆಯ್ಕೆ ಮಾಡಬೇಕು, ಇತರ ರಸೀದಿಗಳನ್ನು ಆಯ್ಕೆ ಮಾಡಿ(ಒಪ್ಪಿಸು) Proceed ಅನ್ನು ಕ್ಲಿಕ್ ಮಾಡಬೇಕು ಆಗಿದೆ.

10: ಇತರೆ ಆಯ್ಕೆಯು ಈಗಾಗಲೇ ತುಂಬಿದ ಮೊತ್ತವನ್ನು ಹೊಂದಿರುತ್ತದೆ. (Continue) ಮುಂದುವರೆಸು ಬಟನ್ ಕ್ಲಿಕ್ ಮಾಡುವ ಮೂಲಕ ಹಣ ಪಾವತಿ ಮಾಡಬೇಕು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *