Airtel: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಏರ್ಟೆಲ್ ಬಳಕೆದಾರರಿಗೆ ತಿಳಿಸುವ ಪ್ರಮುಖವಾದ ವಿಷಯವೇನೆಂದರೆ ಏರ್ಟೆಲ್ ಕಡೆಯಿಂದ ಏರ್ಟೆಲ್ ಬಳಕೆದಾರರಿಗೆ ಗುಡ್ ನ್ಯೂಸ್ ಅನ್ನು ನೀಡಲಾಗಿರುತ್ತದೆ. ಅದೇ ಎಂಬುದನ್ನು ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿ ದೊರಕುತ್ತದೆ. ಇಂತಹದ್ದೇ ಹೆಚ್ಚಿನ ವಿವರಗಳಿಗಾಗಿ ನಮ್ಮ ಜಾಲತಾಣದ ಚಂದದಾರರಾಗಿರಿ.
ಸ್ನೇಹಿತರೆ, ಈ ತಿಂಗಳ ಮೂರನೇ ತಾರೀಖಿನಿಂದ ಅಂದರೆ, ಜುಲೈ ತಿಂಗಳ 3ನೇ ತಾರೀಕಿನಿಂದ ಏರ್ಟೆಲ್ ರಿಚಾರ್ಜ್ ಪ್ಲಾನ್ ಗಳ ಮೇಲೆ ಬೆಲೆಯನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಶಾಕ್ ಅನ್ನು ನೀಡಿದ್ದು ನಿಮಗೆಲ್ಲ ಗೊತ್ತೇ ಇದೆ. ಇದೀಗ ಗ್ರಾಹಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಹೊಸ ರಿಚಾರ್ಜ್ ಪ್ಲಾನನ್ನು ಏರ್ಟೆಲ್ ಬಿಡುಗಡೆ ಮಾಡಿರುತ್ತದೆ. ಹೊಸ ರಿಚಾರ್ಜ್ ಪ್ಲಾನ್ ನಲ್ಲಿ ಯಾವೆಲ್ಲ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ.
ಸ್ನೇಹಿತರೆ ಏರ್ಟೆಲ್ ಗ್ರಾಹಕರು ರಿಚಾರ್ಜ್ ಮಾಡಲು ಹೆಚ್ಚಿನ ಮೊತ್ತವನ್ನು ಪಾವತಿಸಿದರೆ ಬೇರೆ ನೆಟ್ವರ್ಕ್ಗಳಿಗೆ ಬದಲಾಯಿಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡ ಏರ್ಟೆಲ್ ಭರ್ಜರಿ ಪ್ಲಾನ್ ಅನ್ನು ಪರಿಚಯಿಸಿದೆ. ಏರ್ಟೆಲ್ ಹಗ್ಗದ ರಿಚಾರ್ಜ್ ಯೋಜನೆಯನ್ನು ಇದೀಗ ಪ್ರಾರಂಭಿಸಿರುತ್ತದೆ. ಭಾರತದಲ್ಲಿ ಪ್ರಸ್ತುತ 38 ಕೋಟಿ ಬಳಕೆದಾರರು ಈ ರಿಚಾರ್ಜ್ ಯೋಜನೆಗಳ ಪ್ರಯೋಜನನ್ನು ಪಡೆಯಬಹುದಾಗಿರುತ್ತದೆ.
ಏರ್ಟೆಲ್ (Airtel) ಅಗ್ಗದ ಯೋಜನೆಗಳು!
ಸ್ನೇಹಿತರೆ ಏರ್ಟೆಲ್ ಕಂಪನಿಯೂ ನೀಡುವ ಯೋಜನೆಗಳಲ್ಲಿ ಹಗ್ಗದ ಪ್ಲಾನ್ ಕೇವಲ 51 ಆಗಿರುತ್ತದೆ. ಈ ಪಟ್ಟಿಯಲ್ಲಿ ಉಳಿದಿರುವ ಎರಡು ಪ್ಲಾನ್ ಗಳು ಕ್ರಮವಾಗಿ 101 ಹಾಗೂ 151 ರೂಪಾಯಿ ಯೋಜನೆ ಆಗಿರುತ್ತದೆ. ಈ ಮೂರು ಯೋಜನೆಗಳು ಏರ್ಟೆಲ್ ಬಳಕೆದಾರರಿಗೆ ಮನೆಯಮಿತವಾಗಿ 5G ಡೇಟಾದ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಸ್ನೇಹಿತರೆ ನೀವು ಏರ್ಟೆಲ್ ಗಳನ್ನು ತೆಗೆದುಕೊಳ್ಳಲು ಬಯಸಿದರೆ ಎಲ್ಲಾ ಯೋಜನೆಗಳು ಡೇಟಾ ಬೂಸ್ಟರ್ ಯೋಜನೆಗಳಾಗಿರುತ್ತವೆ, ನಿಮಗೆ ಹೆಚ್ಚಿನ ಡೇಟ ಬೇಕಾದರೆ ನೀವು ಈ ಯೋಜನೆಗಳ ಬಳಕೆ ಮಾಡಿಕೊಳ್ಳಬಹುದಾಗಿರುತ್ತದೆ.
ಸ್ನೇಹಿತರೆ, ಈ ರಿಚಾರ್ಜ್ ಪ್ಲಾನ್ ಗಳನ್ನು ನೀವು ಬಳಸುವುದರಿಂದ 3GB ಡೇಟಾವನ್ನು ನೀಡಲಾಗುತ್ತದೆ ಅಂದರೆ 51 ರಿಚಾರ್ಜ್ ಪ್ಲಾನ್ ನಲ್ಲಿ 3GB ಡೇಟಾವನ್ನು ನೀಡಲಾಗುತ್ತದೆ ಹಾಗೂ 101ರ ಪ್ಲಾನ್ ಗ್ರಾಹಕರಿಗೆ ಒಟ್ಟು 6 ಜಿಬಿ ಡೇಟಾವನ್ನು ಒದಗಿಸುತ್ತದೆ. ಮತ್ತು 151 ರೂಪಾಯಿ ರಿಚಾರ್ಜ್ ನೊಂದಿಗೆ ಗ್ರಾಹಕರು 9 ಜಿಬಿ ಡೇಟಾವನ್ನು ಅನುಭವಿಸಬಹುದು. ಸ್ನೇಹಿತರೆ ಬಳಕೆದಾರರು ತಮ್ಮ ಅಸ್ತಿತ್ವದಲ್ಲಿರುವ ಡೇಟಾ ಪ್ಯಾಕ್ಗಳೊಂದಿಗೆ ಏರ್ಟೆಲ್ ಹೊಸ ಡೇಟಾ ಪ್ಯಾಕ್ಗಳನ್ನು ಬಳಸಿಕೊಳ್ಳಬಹುದಾಗಿರುತ್ತದೆ.
ಸ್ನೇಹಿತರೆ ಇಲ್ಲಿ ವಿಶೇಷ ಏನೆಂದರೆ 4G ಡೇಟಾ ಪಡೆದರೂ ಕೂಡ ನೀವು ಅನಿಯಮಿತವಾಗಿ 5G ಡೇಟಾ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿರುತ್ತದೆ. ಏರ್ಟೆಲ್ ಅಗ್ಗದ 5g ಪ್ರಯೋಜನಗಳನ್ನು ರೂಪಾಯಿ 249 ಪ್ರಾರಂಭವಾಗುತ್ತದೆ ಎಂದು ತಿಳಿಸಲಾಗಿರುತ್ತದೆ.