Bharti Airtel Scholarship: ನಮಸ್ಕಾರ ಎಲ್ಲರಿಗೂ ಈ ಲೇಖನದ ಮೂಲಕ ಸಮಸ್ತ ವಿದ್ಯಾರ್ಥಿಗಳಿಗೆ ತಿಳಿಸುವ ವಿಷಯವೇನೆಂದರೆ, ಭಾರತಿ ಏರ್ಟೆಲ್ ಕಾಲರ್ ಶಿಪ್ ಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳನ್ನು ಮತ್ತು ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ? ಅರ್ಜಿ ಸಲ್ಲಿಸಲು ಯಾರು ಅರ್ಹರಾಗಿರುತ್ತಾರೆ ಎಂಬ ಎಲ್ಲ ಮಾಹಿತಿಗಳಿಗೆ ಈ ಲೇಖನದಲ್ಲಿ ಉತ್ತರ ಇರುತ್ತದೆ. ಆದ ಕಾರಣ ಲೇಖನವನ್ನು ಕೊನೆಯವರೆಗೂ ಓದಿ.
Bharti Airtel Scholarship
ಸ್ನೇಹಿತರೆ ಇದೀಗ “ಭಾರತೀ ಏರ್ಟೆಲ್ ಫೌಂಡೇಶನ್” ವತಿಯಿಂದ ಭಾರತೀಯ ಏರ್ಟೆಲ್ ಸ್ಕಾಲರ್ಶಿಪ್ ಅನ್ನು ನೀಡಲಾಗುತ್ತಿದ್ದು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಇನ್ನಷ್ಟು ಉನ್ನತೀಕರಣಗೊಳಿಸಲು ಹಾಗೂ ಉನ್ನತ ಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳಲು, ಈ ಸ್ಕಾಲರ್ಶಿಪ್ ಅನ್ನು ನೀಡಲಾಗುತ್ತಿದ್ದು ಅರ್ಹ ಮತ್ತು ಆಸಕ್ತಿಯುಳ್ಳ ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬಹುದು.
ಸ್ನೇಹಿತರೆ, ಈ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ತಂತ್ರಜ್ಞಾನ ಹಾಗೂ ಇಂಜಿನಿಯರಿಂಗ್ ಪದವಿ ಪೂರ್ವ ಮತ್ತು ಇಂಟಿಗ್ರೇಟೆಡ್ ಕೋರ್ಸ್ ಗಳಿಗೆ ದಾಖಲಾತಿಯನ್ನು ಪಡೆದಿರುವಂತಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಒದಗಿಸುವ ಗುರಿಯನ್ನು ಭಾರತೀಯ ಏರ್ಟೆಲ್ ಫೌಂಡೇಶನ್ ಹೊಂದಿರುತ್ತದೆ ಎಂದು ಹೇಳಬಹುದಾಗಿದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು? {Bharti Airtel Scholarship}
1} ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಯು ಭಾರತೀಯ ನಿವಾಸಿಯಾಗಿರಬೇಕು.
2} ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಯ ಆದಾಯವು ವಾರ್ಷಿಕವಾಗಿ 8.5 ಲಕ್ಷ ಮೀರಿ ಇರಬಾರದು ಎಂದು ತಿಳಿಸಲಾಗಿದೆ.
3} ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಯು ಭಾರತಿ ಏರ್ಟೆಲ್ ಫೌಂಡೇಶನ್ ವತಿಯಿಂದ ಅನುದಾನ ಅಥವಾ ವಿದ್ಯಾರ್ಥಿ ವೇತನ ಈ ಮೊದಲು ಪಡೆದಿರಬಾರದು.
ಈ ಸ್ಕಾಲರ್ ಶಿಪ್ ನಲ್ಲಿ ದೊರಕುವ ಪ್ರಯೋಜನಗಳೇನು? {Airtel Scholarship}
1) ಸ್ನೇಹಿತರೆ ಈ ವಿದ್ಯಾರ್ಥಿ ವೇತನವು ಆಯಾ ಸಂಸ್ಥೆಯ ಕೋರ್ಸುಗಳ ಫೀ ಸ್ಟ್ರಕ್ಚರ್ ಪ್ರಕಾರ 100% ಕಾಲೇಜು ಶುಲ್ಕವನ್ನು ಒಳಗೊಂಡಿರುತ್ತದೆ ಎಂದು ತಿಳಿಸಲಾಗಿದೆ.
2) ಈ ಸ್ಕಾಲರ್ ಶಿಪ್ ನಲ್ಲಿ ಹಾಸ್ಟಲ್ ಶುಲ್ಕವನ್ನು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗೆ ಅರ್ಹತೆ ಪಡೆದಿರುವ ವಿದ್ಯಾರ್ಥಿಗೆ ನೀಡಲಾಗುತ್ತದೆ.
3) ಪಿ.ಜಿ. ಅಥವಾ ಹೊರಗಿನ ಹಾಸ್ಟೆಲ್ ನಲ್ಲಿ ಇರುವ ವಿದ್ಯಾರ್ಥಿಗಳಿಗೆ, ಸಂಸ್ಥೆಯ ಹಾಸ್ಟೆಲ್ ಪ್ರಕಾರ ಹಣವನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು.?
- ಆಧಾರ್ ಕಾರ್ಡ್
- ದ್ವಿತೀಯ ಪಿಯುಸಿ ಅಂಕಪಟ್ಟಿ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್ ವಿವರಗಳು
- ಕಾಲೇಜು ಪ್ರವೇಶ ಪತ್ರ
- ಪಾಸ್ಪೋರ್ಟ್ ಅಳಿತೆಯ ಭಾವಚಿತ್ರ
- ಕಾಲೇಜು ಶುಲ್ಕ ತುಂಬಿದ ರಶೀದಿ
ಈ ಮೇಲಿನ ದಾಖಲೆಗಳು ನಿಮ್ಮ ಹತ್ತಿರ ಇದ್ದರೆ ನೀವು ಭಾರತೀಯ ಏರ್ಟೆಲ್ ಫೌಂಡೇಶನ್ ವತಿಯಿಂದ ಲಭ್ಯವಿರುವ ಭಾರತೀಯ ಏರ್ಟೆಲ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತೀರಾ ಎಂದು ತಿಳಿಸಲಾಗಿರುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದಿನ ತಿಂಗಳು ಅಂದರೆ 31ನೇ ಆಗಸ್ಟ್ 2024 ಆಗಿರುತ್ತದೆ. ಕೊನೆ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿದರೆ ಮಾತ್ರ ಅರ್ಜಿ ಮಾನ್ಯವಾಗಿರುತ್ತದೆ ಎಂದು ತಿಳಿದುಬಂದಿರುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್
ಮೇಲೆ ಕೊಟ್ಟಿರುವ ಜಾಲತಾಣದ ಲಿಂಕನ್ನು ಬಳಸಿಕೊಂಡು ನೀವು ಭಾರತೀಯ ಫೌಂಡೇಶನ್ ವತಿಯಿಂದ ಲಭ್ಯವಿರುವಂತಹ ಏರ್ಟೆಲ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ ಮೇಲೆ ಪಟ್ಟಿ ಮಾಡಿರುವಂತಹ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ.
ಇದನ್ನು ಓದಿ: Post Office Schemes: ಕೇವಲ ರೂ.3000 ಕಟ್ಟಿ 2 ಲಕ್ಷ ಪಡೆದುಕೊಳ್ಳಿ! ಇಂತವರಿಗೆ ಮೊದಲ ಆದ್ಯತೆ!