ನಮಸ್ಕಾರ ಸ್ನೇಹಿತರೇ…. ಎಲ್ಲಾ ಕರ್ನಾಟಕದ ಜನತೆಯು ಕೂಡ ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ. ಒಂದೊಂದು ಯೋಜನೆಗಳಲ್ಲೂ ಕೂಡ ಒಂದೊಂದು ರೀತಿಯ ವಿವಿಧ ಸೌಲಭ್ಯಗಳು ಕೂಡ ಇದ್ದೇ ಇರುತ್ತದೆ. ಒಂದು ಹಣದ ಸೌಕರ್ಯವಾದರೆ ಇನ್ನೊಂದು ಉಚಿತ ಸೌಲಭ್ಯ ಇದ್ದೇ ಇರುತ್ತದೆ. ಈ ರೀತಿಯ ಯೋಜನೆಗಳಲ್ಲಿ ಧಾನ್ಯಗಳನ್ನು ಕೂಡ ವಿತರಣೆ ಮಾಡಲಾಗುತ್ತದೆ. ಅಂದರೆ ಅನ್ನಭಾಗ್ಯ ಯೋಜನೆ ಮುಖಾಂತರ ಎಲ್ಲಾ ಫಲಾನುಭವಿಗಳಿಗೂ ಕೂಡ 5 ಕೆಜಿ ಅಕ್ಕಿಯನ್ನು ವಿತರಣೆ ಮಾಡುತ್ತದೆ ಸರ್ಕಾರ.
ಆಹಾರ ಇಲಾಖೆಯು 5 ಕೆಜಿ ಅಕ್ಕಿಯನ್ನು ಮಾತ್ರ ಎಲ್ಲಾ ಫಲಾನುಭವಿಗಳಿಗೆ ವಿತರಣೆ ಮಾಡುತ್ತಲೇ ಬಂದಿದೆ. ಈವರೆಗೂ ಕೂಡ 5 ಕೆಜಿ ಅಕ್ಕಿಯನ್ನು ವಿತರಣೆ ಮಾಡುತ್ತಿದೆ. ಇನ್ನು ಉಳಿದ ಐದು ಕೆಜಿ ಅಕ್ಕಿಗೆ ಸರ್ಕಾರದಿಂದ ಹಣ ಕೂಡ ಎಲ್ಲರಿಗೂ ಜಮಾ ಆಗುತ್ತದೆ. ಇದುವರೆಗೂ ಎಂಟು ಕಂತಿನ ಹಣ ಜಮಾ ಆಗಿದೆ. ಎಂಟು ತಿಂಗಳಿನಿಂದಲೂ ಕೂಡ ಈ ಒಂದು ಯೋಜನೆ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಈ ತಿಂಗಳಿನಲ್ಲಿ ಬರಬೇಕಾದಂತಹ ಹಣವು ಕೂಡ ಜಮಾ ಆಗಿದೆ. ಯಾವ ರೀತಿ ಹಣವನ್ನು ಚೆಕ್ ಮಾಡಿಕೊಳ್ಳಬಹುದು ಎಂಬುದನ್ನು ಈ ಒಂದು ಲೇಖನದ ಮುಖಾಂತರ ತಿಳಿದುಕೊಳ್ಳಿರಿ.
ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿದೆ.
ಸ್ನೇಹಿತರೆ ಅನ್ನಭಾಗ್ಯ ಯೋಜನೆ ಮುಖಾಂತರ ಸಾಕಷ್ಟು ಲಕ್ಷಾಂತರ ಫಲಾನುಭವಿಗಳು ಕೂಡ ಈವರೆಗೂ ಪಡಿತರ ಧಾನ್ಯಗಳನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವೊಂದಿಷ್ಟು ಜನರು ಮಾತ್ರ ರೇಷನ್ ಕಾರ್ಡ್ ಅವರಿಗೆ ಅನ್ವಯವಾಗುವುದಿಲ್ಲ. ಆದರೂ ಕೂಡ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದು ಪ್ರತಿ ತಿಂಗಳು ಕೂಡ ಅಕ್ಕಿ ಹಣವನ್ನು ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮತ್ತು ಪಡಿತರ ಧಾನ್ಯಗಳನ್ನು ಕೂಡ ಉಚಿತವಾಗಿಯೇ ಪಡೆದುಕೊಳ್ಳುತ್ತಿದ್ದಾರೆ. ಇಂಥವರು ಅನರ್ಹರಾಗಿ ಸರ್ಕಾರಕ್ಕೆ ಕಂಡುಬರುತ್ತಾರೆ.
ಸರ್ಕಾರವು ಇತ್ತೀಚಿನ ದಿನಗಳಲ್ಲಿ ಎಲ್ಲಾ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಕೂಡ ರದ್ದು ಮಾಡಲು ಮುಂದಾಗಿದೆ. ಯಾರೆಲ್ಲಾ ಅನರ್ಹರಾಗಿ, ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಮಾತ್ರ ಸ್ವೀಕರಿಸಲು ಅರ್ಹರಾಗಿರುವುದಿಲ್ಲ ಎಂದರು ಕೂಡ ಬಿಪಿಎಲ್ ರೇಷನ್ ಕಾರ್ಡ್ಗಳನ್ನು ಪಡೆದಿರುತ್ತಾರೆ. ಅಂತವರ ರೇಷನ್ ಕಾರ್ಡ್ ಗಳು ಕೂಡ ಈಗಾಗಲೇ ರದ್ದಾಗಿದೆ. ಅಂತವರಿಗೆ ಯಾವುದೇ ರೀತಿಯ ಹಣವು ಕೂಡ ಇನ್ಮುಂದೆ ಜಮಾ ಆಗೋದಿಲ್ಲ.
ನಮಗೂ ಕೂಡ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತೆ ಎಂಬ ಕನಸನ್ನು ಇಟ್ಟುಕೊಳ್ಳಬೇಡಿ, ಸರ್ಕಾರದ ನಿರ್ಧಾರವು ಯಾವುದೇ ಕಾರಣಕ್ಕೂ ಕೂಡ ಬದಲಾವಣೆ ಆಗುವುದಿಲ್ಲ. ಒಂದು ಸಲ ರೇಷನ್ ಕಾರ್ಡ್ ಗಳು ರದ್ದಾದರೆ, ನೀವು ಮತ್ತೊಮ್ಮೆ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಅಷ್ಟೇ, ಕೆಲವೊಂದು ರೇಷನ್ ಕಾರ್ಡ್ ಗಳು ಏನು ತಪ್ಪಿಲ್ಲದಿದ್ದರೂ ಕೂಡ ರದ್ದಾಗಿದೆ. ಅಂತವರು ಮತ್ತೊಮ್ಮೆ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಕಳೆದ ತಿಂಗಳಿನಲ್ಲಿ ಏಪ್ರಿಲ್ 20ನೇ ದಿನಾಂಕದ ಒಳಗೆ ಎಲ್ಲಾ ಅನ್ನಭಾಗ್ಯ ಫಲಾನುಭವಿಗಳಿಗೂ ಕೂಡ ಎಂಟನೇ ಕಂತಿನ ಹಣ ಕೂಡ ಜಮಾ ಆಗಿದೆ. ಇನ್ನು ಈ ತಿಂಗಳಿನಲ್ಲಿ ಒಂಬತ್ತನೇ ಕಂತಿನ ಹಣ ಕೂಡ ಜಮಾ ಆಗುತ್ತದೆ. 20ನೇ ತಾರೀಖಿನ ಒಳಗೆ ಕಾದು ನೋಡಬೇಕಿದೆ ಅಷ್ಟೇ, ಕೆಲವರ ಖಾತೆಗೆ ಹಣ ಬಂದರೂ ಬರಬಹುದು. ಏಕೆಂದರೆ ಇದು ಚುನಾವಣೆಯ ಸಂದರ್ಭ ಅಲ್ಲವೇ, ಆದ್ದರಿಂದ ಚುನಾವಣೆ ಫಲಿತಾಂಶದ ಮುಂಚಿತ ದಿನಗಳಲ್ಲಿಯೇ ಈ ರೀತಿಯ ಹಣ ಕೂಡ ಜಮಾ ಆದರೂ ಆಗಬಹುದು. ಕಳೆದ ತಿಂಗಳಿನಲ್ಲಿ ಜಮಾ ಆಗಿರುವಂತಹ ಹಣವನ್ನು ಈ ರೀತಿ ಚೆಕ್ ಮಾಡಿಕೊಳ್ಳಿ.
ಅನ್ನಭಾಗ್ಯ ಯೋಜನೆಯ ಹಣವನ್ನು ಚೆಕ್ ಮಾಡಲು ಎರಡು ವಿಧಾನಗಳಿವೆ, ಮೊದಲನೇ ವಿಧಾನದ ಹೆಸರು ಡಿಬಿಟಿ ಕರ್ನಾಟಕ ಆ್ಯಪ್ ಮುಖಾಂತರವಾದರೂ ಅನಭಾಗ್ಯ ಯೋಜನೆಯ ಹಣವನ್ನು ಚೆಕ್ ಮಾಡಿಕೊಳ್ಳಬಹುದು. ಅಥವಾ ನೀವೇನಾದರೂ ಆ್ಯಪ್ ಗಳನ್ನು ಡೌನ್ಲೋಡ್ ಮಾಡುವುದಿಲ್ಲ,
ಆದರೆ ನಾನು ಹಣವನ್ನು ಚೆಕ್ ಮಾಡಿಕೊಳ್ಳಬೇಕು ಎಂಬುವವರು ಕೂಡ ಗೂಗಲ್ನಲ್ಲಿ ಸರ್ಚ್ ಮಾಡುವ ಮುಖಾಂತರ ಆಹಾರ ಇಲಾಖೆ ವೆಬ್ಸೈಟ್ ಮುಖಾಂತರ ಎಷ್ಟು ಹಣ ಜಮಾ ಆಗಿದೆ ಎಂಬುದನ್ನು ಕೂಡ ತಿಳಿದುಕೊಳ್ಳಬಹುದು. ಇನ್ನೊಂದು ಸುಲಭ ವಿಧಾನವೆಂದರೆ ಅದುವೇ ನಿಮ್ಮ ಪಾಸ್ ಬುಕ್ ಅನ್ನು ಎಂಟ್ರಿ ಮಾಡಿಸುವುದು, ಈ ರೀತಿ ಎಂಟ್ರಿ ಮಾಡಿಸುವುದರಿಂದಲೂ ಕೂಡ ಹಣ ಜಮಾ ಆಗಿದೆಯೋ ಇಲ್ಲವೋ ಎಂಬುದು ಕೂಡ ತಿಳಿಯುತ್ತದೆ.
DBT ಕರ್ನಾಟಕ ಅಪ್ಲಿಕೇಶನ್ ಮುಖಾಂತರ ಹಣವನ್ನು ಈ ರೀತಿ ಚೆಕ್ ಮಾಡಿಕೊಳ್ಳಿ.
- DBT Karnataka ಎಂಬ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.
- ಇನ್ಸ್ಟಾಲ್ ಮಾಡಿಕೊಂಡ ಬಳಿಕ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು.
- ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿದ ಬಳಿಕ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ರವಾನೆ ಆಗುತ್ತದೆ.
- ಬಳಿಕ ಓ ಟಿ ಪಿ ಯನ್ನು ನಮೂದಿಸಿ 4 ಸಂಖ್ಯೆಯ ಪಾಸ್ವರ್ಡ್ ಅನ್ನು ಕೂಡ ನೀವು ಕ್ರಿಯೇಟ್ ಮಾಡಿಕೊಳ್ಳಬೇಕು.
- ಸುಲಭ ಸಂಖ್ಯೆಯ ನಾಲ್ಕು ಅಂಕೆಯ ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಳ್ಳಿ.
- ಏಕೆಂದರೆ ಹಣವನ್ನು ನೋಡುವ ಸಂದರ್ಭದಲ್ಲಿ ಈ ಪಾಸ್ವರ್ಡ್ ಅನ್ನು ಹಾಕುವ ಮುಖಾಂತರ ನೀವು ಈ ಒಂದು ಆ್ಯಪ್ ಗೆ ಲಾಗಿನ್ ಆಗ ತಕ್ಕದ್ದು.
- ಪಾಸ್ವರ್ಡ್ ಎಲ್ಲ ಕ್ರಿಯೇಟ್ ಮಾಡಿಕೊಂಡು ಲಾಗಿನ್ ಆದ ಬಳಿಕ ಪಾವತಿ ಸ್ಥಿತಿ ಎಂಬುದು ಕಾಣುತ್ತದೆ ಅದನ್ನು ಕ್ಲಿಕ್ಕಿಸಿರಿ.
- ಈಗ ನೀವು ಎಷ್ಟು ಹಣ ಜಮಾ ಆಗಿದೆ, ಎಂಬುದನ್ನು ಕೂಡ ನೋಡಬಹುದು. ಹಾಗೂ ಯಾವ ಯಾವ ತಿಂಗಳಿನಲ್ಲಿ ಯಾವ ಕಂತಿನ ಹಣ ಬಂದಿದೆ ಎಂಬುದನ್ನು ಕೂಡ ನೋಡಬಹುದು.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….