annabhagya scheme amount check by app: ಕರ್ನಾಟಕದ ಜನತೆಗೆ ನಮಸ್ಕಾರಗಳು, ಈ ಲೆಕ್ಕದ ಮೂಲಕ ತಮಗೆ ತಿಳಿಸಲು ಬಯಸುವ ಮಾಹಿತಿ ಏನೆಂದರೆ, ಅನ್ನಭಾಗ್ಯ ಯೋಜನೆಯ ಹಣವು ನಿಮ್ಮ ಖಾತೆಗಳಿಗೆ ಜಮಾ ಆಗಿರುತ್ತದೆ ಹಾಗೂ ನಿಮ್ಮ ಖಾತೆಯಲ್ಲಿರುವ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿದೆಯಾ ಇಲ್ಲವೋ ಅಂತ ಯಾವ ರೀತಿ ಪರಿಶೀಲಿಸಿಕೊಳ್ಳಬೇಕು ಅನ್ನುವುದನ್ನು ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಟ್ಟಿರುತ್ತೇನೆ. ಕೊನೆವರೆಗೂ ಲೇಖನವನ್ನು ಓದಿ.
ಸ್ನೇಹಿತರೆ ಮೊದಲಿಗೆ ನಿಮ್ಮ ಖಾತೆಗೆ ಹಣ ಬಂದಿದೆ ಇಲ್ಲವಾ ಅಂತ ಚೆಕ್ ಮಾಡಿಸಿಕೊಳ್ಳುವ ಮೊದಲು ನನ್ನ ಬಗ್ಗೆ ಯೋಜನೆಯ ಹಣವನ್ನು ಪರಿಶೀಲಿಸಿಕೊಳ್ಳಲು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ನಿಂದ ಒಂದು ಆಪ್ ಅನ್ನು ಇನ್ಸ್ಟಾಲ್ ಮಾಡಬೇಕಾಗುತ್ತದೆ. ಆ ಒಂದು ಆಪ್ ನ ಹೆಸರು ಡಿಬಿಟಿ ಕರ್ನಾಟಕ.
1) ಮೊದಲಿಗೆ ಪ್ಲೇ ಸ್ಟೋರ್ ನಿಂದ ಡಿ ಬಿ ಟಿ ಕರ್ನಾಟಕ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
2) ಅಪ್ಲಿಕೇಶನ್ ಓಪನ್ ಆದ ತಕ್ಷಣ ಎಂಟರ್ ಆಧಾರ್ ನಂಬರ್ ಎಂದು ಕೇಳುತ್ತದೆ ಅಲ್ಲಿ ಆಧಾರ್ ಕಾರ್ಡ್ ನಂಬರ್ ಅನ್ನು ಹಾಕಿಕೊಳ್ಳಿ.
3) ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಆ ಒಟಿಪಿ ಅನ್ನು ಇಲ್ಲಿ ನಮೂದಿಸಿ.
4) ನಂತರ ಫಲಾನುಭವಿಯ ವಿವರಗಳು ಮತ್ತು ಫಲಾನುಭವಿಯ ಬಗ್ಗೆ ಮಾಹಿತಿ ಡ್ಯಾಶ್ ಬೋರ್ಡ್ ಓಪನ್ ಆಗುತ್ತದೆ.
5) ನಂತರ ನಾಲ್ಕು ಆಪ್ಷನ್ ಗಳು ಮುಂದೆ ಕಾಣಿಸುತ್ತವೆ ಅದರಲ್ಲಿ ಪೇಮೆಂಟ್ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
6) ನಂತರ ಇಲ್ಲಿ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಸ್ಕೀಮ್ ಅಂತ ಎರಡು ಆಪ್ಷನ್ ಗಳು ಇರುತ್ತವೆ, ಅದರಲ್ಲಿ ನೀವು ಗೃಹಲಕ್ಷ್ಮಿ ಹಣ ಮಾಡಿಕೊಳ್ಳಬೇಕಾದರೆ ಮೇಲಿನ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಅನ್ನಭಾಗ್ಯ ಹಣವನ್ನು ಚೆಕ್ ಮಾಡಿಕೊಳ್ಳಿ ಕೆಳಗಿನ ಆಪ್ಷನ್ ಅನ್ನು ಕ್ಲಿಕ್ ಮಾಡಿ.
7) ಅಂತರ ಖಾತೆಯಲ್ಲಿರುವ ಹಣವು ಯಾವ ದಿನಾಂಕದಂದು ನಿಮ್ಮ ಖಾತೆಗೆ ಜಮಾ ಆಗಿರುತ್ತದೆ ಎಂದು ಮಾಹಿತಿ ಇರುತ್ತದೆ.
ಸ್ನೇಹಿತರೆ ಈ ಒಂದು ಮಾಹಿತಿಯು ತಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಮತ್ತು ಯಾರು ಯಾರು ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆ ಯ ಹಣಗಳನ್ನು ತಮ್ಮ ಖಾತೆಗೆ ಬಂದಿದೆಯಾ? ಇಲ್ಲವಾ ಅಂತ ತಿಳಿದುಕೊಳ್ಳಲು ಬಯಸುತ್ತಾರೋ ಅಂತವರಿಗೆ ಈ ಒಂದು ಲೇಖನವನ್ನು ಹಂಚಿಕೊಳ್ಳಿ.
ಸ್ನೇಹಿತರೆ ನಮ್ಮ ಒಂದು ಜಾಲತಾಣದಲ್ಲಿ ಇದೇ ರೀತಿಯ ಉಪಯುಕ್ತವಾದ ವಿಷಯಗಳನ್ನು ಪೋಸ್ಟ್ ಮಾಡುತ್ತಿರುತ್ತೇವೆ ಆದ ಕಾರಣ ನಮ್ಮ ಚಾನಲನ್ನು ಚಂದದಾರರಾಗಿ ಮತ್ತು ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇದೇ ರೀತಿ ಅಪ್ಡೇಟ್ಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ.