Apply for New APL and BPL Ration Card: ನಮಸ್ಕಾರ ಸ್ನೇಹಿತರೆ… ಯಾರೆಲ್ಲಾ ಹೊಸ ರೇಷನ್ ಕಾರ್ಡ್ಗಳನ್ನು ಪಡೆಯಲು ಅರ್ಜಿ ಸಲ್ಲಿಸಲು ಮುಂದಾಗಿದ್ದೀರೋ ಅಂತವರು ಯಾವೆಲ್ಲ ದಾಖಲಾತಿಗಳೊಂದಿಗೆ ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಬಹುದು ಎಂಬುದನ್ನು ಕೂಡ ಈ ಒಂದು ಲೇಖನದ ಮುಖಾಂತರ ತಿಳಿದುಕೊಳ್ಳಬಹುದು. ಹಾಗೂ ಯಾವ ರೀತಿ ಅರ್ಜಿಯನ್ನು ಸಲ್ಲಿಕೆ ಮಾಡಬಹುದು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಕೂಡ ಈ ಲೇಖನದಲ್ಲಿ ತಿಳಿಯಬಹುದಾಗಿದೆ. ಆದ್ದರಿಂದ ನೀವು ಲೇಖನವನ್ನು ಕೊನೆವರೆಗೂ ಓದಿರಿ.
ಜೂನ್ ಮೊದಲನೇ ವಾರದಂದು ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆಗೆ ಅವಕಾಶ.
ಹೌದು ಸ್ನೇಹಿತರೆ ಜೂನ್ ಮೊದಲನೇ ವಾರದಂದು ನೀವು ಕೂಡ ಹೊಸ ಎಪಿಎಲ್ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆಯಲು ಅರ್ಜಿಯನ್ನು ಕೂಡ ಆನ್ಲೈನ್ ಮುಖಾಂತರ ಸಲ್ಲಿಕೆ ಮಾಡಬಹುದಾಗಿದೆ. ಯಾವುದೇ ರೀತಿಯ ಶುಲ್ಕವನ್ನು ಕೂಡ ನೀವು ಅರ್ಜಿ ಸಲ್ಲಿಸುವಂತಹ ಸಂದರ್ಭದಲ್ಲಿ ನೀಡುವ ಹಾಗಿಲ್ಲ, ಉಚಿತವಾಗಿಯೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಜೂನ್ ತಿಂಗಳಿನಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಲು ಅವಕಾಶವನ್ನು ಕಲ್ಪಿಸಿಕೊಟ್ಟಿದೆ.
ಇನ್ನೂ ಕೂಡ ಜೂನ್ ತಿಂಗಳು ಬರಲು ಒಂದು ತಿಂಗಳು ಮಾತ್ರ ಬಾಕಿ ಇದೆ, ಆ ಒಂದು ತಿಂಗಳ ಮುಂಚಿತವಾಗಿಯೇ ನೀವು ಯಾವೆಲ್ಲ ದಾಖಲಾತಿಗಳನ್ನು ನಿಮ್ಮ ಹತ್ತಿರ ಇದೆಯ ಎಂದು ಕೂಡ ನೀವು ಖಚಿತಪಡಿಸಿಕೊಳ್ಳಿ. ಇಲ್ಲದಿರುವಂತಹ ದಾಖಲಾತಿಗಳನ್ನು ಕೂಡ ಮಾಡಿಸಲು ಮುಂದಾಗಿರಿ. ಈ ಒಂದು ಸಂದರ್ಭದಲ್ಲಿ ಮಾಡಿಸಿದರೆ ನಿಮಗೆ ಮುಂದಿನ ತಿಂಗಳಿನಲ್ಲಿ ಉಪಯೋಗವಾಗುತ್ತದೆ. ಏಕೆಂದರೆ ರೇಷನ್ ಕಾರ್ಡ್ಗಗಳಿಗೆ ಅರ್ಜಿ ಸಲ್ಲಿಕೆ ಮಾಡಲು, ಈ ಬಾರಿಯೂ ಕೂಡ ಲಕ್ಷಾಂತರ ಜನರು ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸುವುದರಿಂದ ನಿಮ್ಮ ರೇಷನ್ ಕಾರ್ಡ್ ಗಳು ಕೂಡ ರದ್ದಾದರೂ ಆಗಬಹುದು.
ಆದ್ದರಿಂದ ನೀವು ಒಂದು ಬಾರಿಯಾದರೂ ಅರ್ಜಿ ಸಲ್ಲಿಸುವಂತಹ ಸಂದರ್ಭದಲ್ಲಿ ಎಲ್ಲಾ ದಾಖಲಾತಿಗಳು ಸರಿ ಇದೆಯಾ, ನಾವು ಈ ಒಂದು ರೇಷನ್ ಕಾರ್ಡ್ ಗಳನ್ನು ಪಡೆಯಲು ಅರ್ಹರಾಗಿದ್ದೇವ ಎಂಬುದನ್ನು ಕೂಡ ನೋಡಿಕೊಳ್ಳಿ. ನಿಮಗೆ ಎಪಿಎಲ್ ರೇಷನ್ ಕಾರ್ಡ್ ದೊರೆಯುತ್ತದೆಯೊ, ಅಥವಾ ಬಿಪಿಎಲ್ ರೇಷನ್ ಕಾರ್ಡ್ ದೊರೆಯುತ್ತದೆಯೊ ಎಂಬುದನ್ನು ಕೂಡ ನೀವು ಮುಂಚಿತ ದಿನಗಳಲ್ಲಿಯೇ ನೋಡಬಹುದು. ಯಾವ ರೀತಿ ಎಂದರೆ, ಈ ಕೆಳಕಂಡ ಅರ್ಹತೆಯನ್ನು ಪಾಲಿಸಿ ಆನಂತರ ನೀವು ಖಚಿತಪಡಿಸಿಕೊಳ್ಳಿರಿ.
ಈ ಅರ್ಹತಾ ಮಾನದಂಡಗಳು ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಕಡ್ಡಾಯ.
- ಕರ್ನಾಟಕದಲ್ಲಿಯೇ ಈವರೆಗೂ ವಾಸ ಮಾಡಿರಬೇಕಾಗುತ್ತದೆ.
- ಮೊದಲನೇ ಬಾರಿಗೆ ಹೊಸ ಅರ್ಜಿಯನ್ನು ಸಲ್ಲಿಕೆ ಮಾಡಿರಬೇಕು.
- ಇದುವರೆಗೂ ಕೂಡ ಯಾವ ರೀತಿಯ ರೇಷನ್ ಕಾರ್ಡ್ ಗಳನ್ನು ಈ ಅಭ್ಯರ್ಥಿಗಳ ಕುಟುಂಬ ಪಡೆದಿರಬಾರದು.
- ಹೊಸದಾಗಿ ಮದುವೆಯಾದಂತಹ ಅಭ್ಯರ್ಥಿಗಳು ಕೂಡ ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಬಹುದು.
- ವಾರ್ಷಿಕ ಆದಾಯದ ಆಧಾರದ ಮೇಲೆ ನಿಮಗೆ ಎಪಿಎಲ್ ರೇಷನ್ ಕಾರ್ಡ್ ದೊರೆಯಬೇಕೋ ಬಿಪಿಎಲ್ ರೇಷನ್ ಕಾರ್ಡ್ ದೊರೆಯಬೇಕೊ ಎಂಬುದನ್ನು ಕೂಡ ಸರ್ಕಾರ ನಿರ್ಧಾರ ಮಾಡುತ್ತದೆ.
ಆದರೂ ಕೂಡ ನೀವು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಿಮಗೆ ಯಾವ ರೀತಿಯ ರೇಷನ್ ಕಾರ್ಡ್ ಗಳು ಬೇಕು ಎಂಬುದನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು.
ಕಡ್ಡಾಯವಾಗಿ ದಾಖಲಾತಿಗಳನ್ನು ಕೂಡ ಹೊಂದಿರಬೇಕು.
ಈ ದಾಖಲಾತಿ ಹೊಂದಿದವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ಗಳು ದೊರೆಯುವುದು.
- ಅಭ್ಯರ್ಥಿಗಳ ಆಧಾರ್ ಕಾರ್ಡ್
- ವೋಟರ್ ಐಡಿ
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಆದಾಯ ಪ್ರಮಾಣ ಪತ್ರ
- ಖಾಯಂ ವಿಳಾಸದ ಪ್ರಮಾಣ ಪತ್ರ
- ಪ್ರಸ್ತುತ ಇರುವಂತಹ ಮೊಬೈಲ್ ಸಂಖ್ಯೆ
- ಆಧಾರ್ ನಲ್ಲಿರುವಂತಹ ಮೊಬೈಲ್ ಸಂಖ್ಯೆ
ಸುಲಭ ವಿಧಾನದಲ್ಲಿ ಆನ್ಲೈನ್ ಮುಖಾಂತರ ಈ ರೀತಿ ಅರ್ಜಿ ಸಲ್ಲಿಕೆ ಮಾಡಿ.
- ಮೊದಲಿಗೆ ಎಲ್ಲಾ ಅಭ್ಯರ್ಥಿಗಳು ಕೂಡ ಹೊಸ ರೇಷನ್ ಕಾರ್ಡ್ಗಳನ್ನು ಪಡೆಯಲು ಈ ಒಂದು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡತಕ್ಕದ್ದು. ಈ ವೆಬ್ಸೈಟ್ ಮುಖಾಂತರ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ಭೇಟಿ ನೀಡಿದ ಬಳಿಕ ಈ ಪಡಿತರ ಚೀಟಿ ಎಂಬುದು ಕಾಣುತ್ತದೆ.
- ಅದರ ಮೇಲೆ ಕ್ಲಿಕ್ಕಿಸಿ. ನಂತರ ಈ ಪಡಿತರ ಚೀಟಿ ಕೆಳಗೆ ಸ್ಕ್ರೋಲ್ ಡೌನ್ ಮಾಡಿ. ಪ್ರಸ್ತುತ ಕೆಳಕಂಡ ಪುಟದಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವಂತಹ ಲಿಂಕ್ ಕೂಡ ಇರುತ್ತದೆ. ಅದರ ಮೇಲೆ ಕ್ಲಿಕ್ಕಿಸಿ.
- ನಂತರ ನೀವು ಬಯಸುವಂತಹ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ.
- ಕೇಳುವಂತಹ ಎಲ್ಲಾ ಮಾಹಿತಿಯನ್ನು ಕೂಡ ತುಂಬಿರಿ.
- ಹಾಗೂ ದಾಖಲಾತಿಗಳನ್ನು ಕೂಡ ಈ ಒಂದು ಪುಟದಲ್ಲಿ ಸಲ್ಲಿಕೆ ಮಾಡಬೇಕಾಗುತ್ತದೆ.
ಎಪಿಎಲ್ ರೇಷನ್ ಕಾರ್ಡ್ ಗಳನ್ನು ಬಯಸುತ್ತಿರೋ ಅಥವಾ ಬಿಪಿಎಲ್ ರೇಷನ್ ಕಾರ್ಡ್ಗಳನ್ನು ಬಯಸುತ್ತಿರೋ ಎಂಬುದನ್ನು ಕೂಡ ಆಯ್ಕೆ ಮಾಡಿಕೊಳ್ಳಿ.
ಅರ್ಜಿ ಸಲ್ಲಿಕೆಯ ಸಂದರ್ಭದಲ್ಲಿ ದಾಖಲಾತಿಗಳ ಸಾಫ್ಟ್ ಕಾಪಿಯನ್ನು ಕೂಡ ಅಪ್ಲೋಡ್ ಮಾಡತಕ್ಕದ್ದು.
ಈ ಎಲ್ಲಾ ದಾಖಲಾತಿಗಳ ಮಾಹಿತಿಯನ್ನು ಸಲ್ಲಿಸುವ ಮುಖಾಂತರ ಹೊಸ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬಹುದಾಗಿದೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…