Bara parihara amount: ನಮಸ್ಕಾರ ಸ್ನೇಹಿತರೆ,ಕಡೆಗೂ ರಾಜ್ಯ ಸರ್ಕಾರ (State government) ರಾಜ್ಯದಲ್ಲಿ ಬರಪೀಡಿತ ಪ್ರದೇಶ (Drought prone area) ಗಳಲ್ಲಿ ವಾಸಿಸುವ ರೈತರಿಗೆ ತಾತ್ಕಾಲಿಕವಾದ ಬರ ಪರಿಹಾರ(Drought Relief)ವನ್ನು ಬಿಡುಗಡೆ ಮಾಡಿರುವುದಾಗಿ ಘೋಷಣೆ ಮಾಡಿದೆ ಅಂತಾನೆ ಹೇಳಬಹುದು. ಇದಕ್ಕೆ ಸ್ವತಃ ಸಿಎಂ ಸಿದ್ದರಾಮಯ್ಯ (CM Siddaramaiah) ಅವರೇ ತಮ್ಮ ಸೋಶಿಯಲ್ ಮೀಡಿಯಾದ ತಮ್ಮ ಖಾತೆಯಲ್ಲಿ ಮಾಹಿತಿಯಾನ್ನೂ ಇದೀಗ ಹಂಚಿಕೊಂಡಿದ್ದಾರೆ.
ಪ್ರತಿ ವರ್ಷಕ್ಕಿಂತ ಈ ಬಾರಿ ಮುಂಗಾರು ಮಳೆಯ ಬರದೇ ಇರುವುದರಿಂದ ರಾಜ್ಯದ ರೈತರು (farmers ) ಸಂಕಷ್ಟ ಎದುರಿಸುವಂತೆ ಆಗಿದೆ ಎಂದು ಇದೀಗ ಹೇಳಿದರು. ಈಗಾಗಲೇ ರಾಜ್ಯದಲ್ಲಿ 229 ಹೆಚ್ಚಿನ ಸ್ಥಳಗಳನ್ನು ಬರ ಪೀಡಿತ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಿದೆ ಅಂತಾನೆ ಹೇಳಬಹುದು.
ಬರ ಪರಿಹಾರಕ್ಕೆ ಹಣ ಬಿಡುಗಡೆ ಮಾಡಲಾಗಿದೆ!
ಪ್ರಸ್ತುತ ಇದೀಗ ರಾಜ್ಯದಲ್ಲಿ ಬರ ನೀಡಿದ ಪ್ರದೇಶದ ಜನರಿಗೆ ಕುಡಿಯುವ ನೀರು, ಉದ್ಯೋಗ, ಜಾನುವಾರುಗಳಿಗೆ ಮೇವು, ಇದ್ಯಾವುದಕ್ಕೂ ತೊಂದರೆ ಆಗಬಾರದು ಅಂತ ತಿಳಿದು 860 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ತಿಳಿಸಲಾಗಿದೆ.
ಸುಮಾರು ಅಂದ್ರೆ 34 ಲಕ್ಷ ಜನರಿಗೆ ತಲಾ ₹2,000 ರೂಪಾಯಿಗಳನ್ನು ನೀಡುವುದಕ್ಕಾಗಿ 650 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯನವರೂ ತಿಳಿಸಿದರು.
ಕೇಂದ್ರ ಸರ್ಕಾರ (Central government) ಕರ್ನಾಟಕ ರಾಜ್ಯಕ್ಕೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಬಹುವಾಗಿ ಕಾಮೆಂಟ್ ಮಾಡಿದ ಸಿಎಂ ಸಿದ್ದರಾಮಯ್ಯ ಅವರು, ಬಿಜೆಪಿ ನಾಯಕರು ರಾಜ್ಯ ಸರ್ಕಾರಕ್ಕೆ ಅಗತ್ಯ ಇರುವ ಅನುದಾನವನ್ನು ತರಲು ಕೇಂದ್ರ ಸರ್ಕಾರದೊಂದಿಗೆ ಮಾತುಕತೆಯಾನ್ನ ನಡೆಸಬಹುದಿತ್ತು. ಆದರೆ ಈ ಕೆಲಸ ಮಾಡುತ್ತಿಲ್ಲ. ಕೇವಲ ಭಾಷಣ ಮಾಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯನವರು ದೂರಿದರು.