BEL Recruitments: ತಿಂಗಳಿಗೆ ₹55,000 ವರೆಗೆ ಸಂಬಳ ಸಿಗುವ ಕೆಲಸ! ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಉದ್ಯೋಗವಕಾಶ!

BEL Recruitments

BEL Recruitments: ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರಗಳು.! ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಈಗಲೇ ಅರ್ಜಿ ಸಲ್ಲಿಸಿ ಕೆಲಸ ಪಡೆದುಕೊಳ್ಳಿ..

ವಿದ್ಯಾರ್ಹತೆ:

ಬಿ ಇ ಎಲ್(BEL)ಕಂಪನಿಯಲ್ಲಿ ಉದ್ಯೋಗವನ್ನು ಪಡೆದುಕೊಳ್ಳಬೇಕೆಂದರೆ ವಿದ್ಯಾರ್ಥಿ B.Sc.,B.E or B.Tech in Electronics ಮತ್ತುComputer Science ಮುಗಿಸಿದವರು ಅರ್ಜಿ ಸಲ್ಲಿಸಲು ಅರ್ಹಾಗಿರುತ್ತಾರೆ ಎಂದು ತಿಳಿಸಲಾಗಿದೆ.

ಆಸಕ್ತಿ ಉಳ್ಳವರು ಕೇಂದ್ರ ಸರ್ಕಾರದ BEL ಕಂಪೆನಿಯಲ್ಲಿ ಹೀಗೆ ಅರ್ಜಿ ಸಲ್ಲಿಸಬೇಕು. ಎಂದು ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಕೆಳಗೆ ವಿವರವಾದ ಮಾಹಿತಿಯನ್ನು ನೀಡಿರುತ್ತೇವೆ ಕೊನೆವರೆಗೂ ಗಮನದಿಂದ ಎಚ್ಚರದಿಂದ ಓದಿಕೊಳ್ಳಿ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)ನಲ್ಲಿ ಒಟ್ಟು 55 ಟ್ರೈನಿ ಎಂಜಿನಿಯರ್-I ಹುದ್ದೆಗಳು, ಪ್ರಾಜೆಕ್ಟ್ ಎಂಜಿನಿಯರ್-I ಹುದ್ದೆಗಳು ಕೂಡ ಖಾಲಿ ಇವೆ. ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ತಮ್ಮ ಅರ್ಜಿಯನ್ನ ಸಲ್ಲಿಸಬೇಕು ಎಂದು ಬಿಇಎಲ್(BEL)ಸಂಸ್ಥೆ ಅಧಿಸೂಚನೆಯಲ್ಲಿ ಕೂಡ ತಿಳಿಸಿದೆ.

ವಯೋಮಿತಿ

ಟ್ರೈನಿ ಎಂಜಿನಿಯರ್(Trainy Engineer)ಹುದ್ದೆ ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷ ಹಾಗೂ ಪ್ರಾಜೆಕ್ಟ್ ಎಂಜಿನಿಯರ್ (Project Engineer) ಅಭ್ಯರ್ಥಿಗಳಿಗೆ ಗರಿಷ್ಠ 32 ವರ್ಷ ಆಗಿರಬೇಕು ಎಂದು ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಮಾಹಿತಿಯನ್ನ ತಿಳಿಸಿದೆ.

ಅರ್ಜಿ ಶುಲ್ಕ

  • SC/ST/PwBD ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇಲ್ಲ ಇರುವುದಿಲ್ಲ ಎಂದು ತಿಳಿಸಲಾಗಿದೆ.
  • ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ ₹150/- ರೂಪಾಯಿ ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ ಎಂದು ತಿಳಿಸಲಾಗಿದೆ.
  • ಪ್ರಾಜೆಕ್ಟ್ ಎಂಜಿನಿಯರ್(Project Engineer)ಹುದ್ದೆಗಳಿಗೆ ಅರ್ಜಿ ಸಲ್ಲಿಸುವವ ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ ಒಟ್ಟು ₹400 ರೂಪಾಯಿ ನಿಗದಿ ಆಗಿದೆ. ಈ ಹಣವನ್ನು ನೀವು ಆನ್‌ಲೈನ್ ಮೂಲಕವೇ ಪಾವತಿಸಬೇಕಿದೆ ಎಂದು ತಿಳಿಸಲಾಗಿದೆ.

ನೇಮಕಾತಿ ಬಗ್ಗೆ ಇನ್ನಷ್ಟು ಮಾಹಿತಿ:

  • ಸಂಸ್ಥೆ : ಬಿಇಎಲ್(BEL), ಬೆಂಗಳೂರು
  • ಹುದ್ದೆ : ಟ್ರೈನಿ ಎಂಜಿನಿಯರ್ ಮತ್ತು ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆ
  • ಟ್ರೈನಿ ಎಂಜಿನಿಯರ್: 33 ಹುದ್ದೆಗಳು
  • ಪ್ರಾಜೆಕ್ಟ್ ಎಂಜಿನಿಯರ್ : 22 ಹುದ್ದೆಗಳು
  • ಒಟ್ಟು ಖಾಲಿ ಹುದ್ದೆ: 55 ಹುದ್ದೆಗಳು
  • ಅರ್ಜಿ ಸಲ್ಲಿಕೆ ಕೊನೆ ದಿನ: ಫೆಬ್ರವರಿ 14/2024 ಆಗಿರುತ್ತದೆ.

ಆಯ್ಕೆ ವಿಧಾನ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕಂಪನಿಯು ಮೊದಲು ಲಿಖಿತ ಪರೀಕ್ಷೆ(Exam)ನಡೆಸಲಿದೆ ಎಂದು ತಿಳಿಸಲಾಗಿದೆ. ನಂತರ ಸಂದರ್ಶನ(Interview)ನಡೆಸಿ ಆಯ್ಕೆ ಮಾಡಲಿದೆ ಎಂದು ತಿಳಿಸಲಾಗಿದೆ. ಇಲ್ಲಿ ಆಯ್ಕೆ ಆಗುವವರಿಗೆ ರಾಜಧಾನಿ ಬೆಂಗಳೂರಿನಲ್ಲಿಯೇ ಪೋಸ್ಟಿಂಗ್ ನೀಡಲಾಗುವುದು ಎಂದು ಬಿಇಎಲ್(BEL)ತಿಳಿಸಿದೆ.

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳ ಸಹಿತ ಈ ಕೆಳಗೆ ಇರುವ ವಿಳಾಸಕ್ಕೆ ಕಳುಹಿಸಿ

ವ್ಯವಸ್ಥಾಪಕರು (HR),
ಉತ್ಪನ್ನ ಅಭಿವೃದ್ಧಿ ಮತ್ತು ನಾವೀನ್ಯತೆ ಕೇಂದ್ರ (PDIC),
Bharat Electronics Limited,
ಪ್ರೊ. U R ರಾವ್ ರಸ್ತೆ, ನಾಗಾಲ್ಯಾಂಡ್ ವೃತ್ತದ ಹತ್ತಿರ,
ಜಾಲಹಳ್ಳಿ ಪೋಸ್ಟ್, Bangalore – 560013, India

WhatsApp Group Join Now
Telegram Group Join Now

Leave a Reply

Your email address will not be published. Required fields are marked *