ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಹೊಸ ಅಕ್ಕಿ ಬ್ರಾಂಡ್ ಅಂದರೆ ಭಾರತ್ ಅಕ್ಕಿ ಎಂಬ ಹೊಸ ಅಕ್ಕಿಯ ಬ್ರಾಂಡ್ ಕೇಂದ್ರ ಸರ್ಕಾರವು ಜಾರಿಗೆ ತಂದಿದೆ ಇದು ಅತ್ಯಂತ ಕಡಿಮೆ ದರದಲ್ಲಿ ಒಳ್ಳೆಯ ಗುಣಮಟ್ಟದ ಹಕ್ಕಿಗಳನ್ನು ಜನರಿಗೆ ತಲುಪಿಸಲು ಸಹಾಯಕವಾಗಿದೆ.
ಸ್ನೇಹಿತರೆ ಇತ್ತೀಚಿನ ಬೆಲೆ ಏರಿಕೆಯ ದಿನದಲ್ಲಿ ದಿನನಿತ್ಯದ ವಸ್ತುಗಳನ್ನು ಖರೀದಿಸಿಕೊಳ್ಳುವುದು ತುಂಬಾ ಕಷ್ಟಕರವಾಗುತ್ತಿದೆ ಅಂತದರಲ್ಲಿ ಇನ್ನೂ ಆಹಾರ ಸಾಮಗ್ರಿಗಳಲ್ಲಿ ಮುಖ್ಯವಾದ ಪಾತ್ರ ವಹಿಸುವುದು ಅಕ್ಕಿ ಅದರ ಬೆಲೆಯನ್ನು ಜಾಸ್ತಿ ಮಾಡುತ್ತಿದ್ದಾರೆ ಅದಕ್ಕಾಗಿ ಕೇಂದ್ರ ಸರ್ಕಾರವು ಕೇವಲ ₹29 ರೂ ಗಳಲ್ಲಿ ಹೊಸ ಅಕ್ಕಿ ಬ್ರಾಂಡನ್ನು ಪರಿಚಯಿಸಿದೆ.
ಹಾಗೂ ಈ ಯೋಜನೆಯಲ್ಲಿ ಕೇವಲ 60 ರೂಪಾಯಿಗೆ ಒಂದು ಕೆಜಿ ಬೆಳೆಯು ಕೂಡ ಸಿಗುತ್ತದೆ. ಹಾಗೂ ದಿನನಿತ್ಯ ಬಳಸುವ ವಸ್ತುಗಳು ಅತ್ಯಂತ ಕಡಿಮೆ ದರದಲ್ಲಿ ದೊರಕುತ್ತವೆ ಎಂದು ಹೇಳಬಹುದು.
ಈ ಯೋಜನೆಯ ಉದ್ದೇಶವೇನು?
ಇತ್ತೀಚಿನ ಬೆಲೆ ಏರಿಕೆಯ ಮಧ್ಯೆ ದಿನ ಬಳಕೆಯ ವಸ್ತುಗಳನ್ನು ಖರೀದಿಸುವುದು ತುಂಬಾ ಕಷ್ಟವಾಗುತ್ತಿದೆ ದಿನಬಳಕೆಯ ವಸ್ತುಗಳು ಮತ್ತು ಆಹಾರ ಧಾನ್ಯಗಳನ್ನು ಖರೀದಿಸಲು ಮತ್ತು ಬೆಲೆ ನಿಯಂತ್ರಣ ಮಾಡಲು ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ ಮತ್ತು ಈ ಧಾನ್ಯಗಳ ಹೊಸ ಬ್ರಾಂಡನ್ನು ಪರಿಚಯಿಸಿದೆ.
ಅರ್ಹತೆ
ಈ ಯೋಜನೆಯ ಲಾಭಗಳನ್ನು ಪಡೆದುಕೊಳ್ಳಲು ನೀವು ಯಾವುದೇ ರೀತಿಯ ರೇಷನ್ ಕಾರ್ಡನ್ನು ಹೊಂದಿರಬಹುದು ಅಥವಾ ಎಪಿಎಲ್ ಬಿಪಿಎಲ್ ಹಾಗೂ ಅಂತ್ಯದಯ ಕಾರ್ಡ್ ಯಾವುದೇ ರೀತಿಯ ಕಾರ್ಡನ್ನು ಹೊಂದಿದರು ಕೂಡ ನಿಮಗೆ ಅರ್ಹರಾಗಿರುತ್ತೀರಿ.
ಹೇಗೆ ಪಡೆದುಕೊಳ್ಳಬೇಕು?
ಸ್ನೇಹಿತರೆ ಈ ಒಂದು ಅಕ್ಕಿ ಬೇಳೆ ಹಾಗೂ ಇನ್ನಿತರ ಗೃಹ ಬಳಕೆ ವಸ್ತುಗಳನ್ನು ಅತ್ಯಂತ ಕಡಿಮೆ ದರದಲ್ಲಿ ನೀವು ಫ್ಲಿಪ್ಕಾರ್ಟ್ ಅಮೆಜಾನ್ ಬ್ಲಿಂ ಕಿಟ್ ಹಾಗೂ ಇನ್ನಿತರ ಈ ಕಾಮರ್ಸ್ ವೆಬ್ಸೈಟ್ಗಳ ಮೂಲಕ ನೀವು ಆರ್ಡರ್ ಮಾಡಿಕೊಂಡು ತರಿಸಬಹುದಾಗಿದೆ.
ಸ್ನೇಹಿತರೆ ಈ ಯೋಜನೆಯ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದು ಕೆಲವು ಮುಖ್ಯ ಸಿಟಿಗಳಲ್ಲಿ ಮಾತ್ರ ಲಭ್ಯವಿರುತ್ತದೆ ಇನ್ನೂ ಇದು ಹಳ್ಳಿ ಹಳ್ಳಿಗಳಿಗೂ ತಲುಪಬೇಕಾದರೆ ಕೆಲವು ದಿನಗಳ ಸಮಯವನ್ನು ತೆಗೆದುಕೊಳ್ಳಬಹುದು ಈ ಮಾಹಿತಿಯನ್ನು ನಿಮಗೆ ತಿಳಿಸಲು ಈ ಒಂದು ಲೇಖನವನ್ನು ಪ್ರಚಾರ ಮಾಡಲಾಗಿರುತ್ತದೆ