BMTC Jobs Recruitments: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಬಿಎಂಟಿಸಿ ಇಲಾಖೆಯಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿರುತ್ತೇನೆ. ಲೇಖನವನ್ನು ಕೊನೆಯವರೆಗೂ ಓದಿ.
ಇದೇ ತರಹದ ಹೆಚ್ಚಿನ ಸುದ್ದಿಗಳನ್ನು ದಿನನಿತ್ಯ ಓದಲು ಇಷ್ಟಪಡುತ್ತಿದ್ದಾರೆ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ದೊರಕುತ್ತದೆ ಹಾಗೂ ಎಲ್ಲಾ ರೀತಿಯ ಉದ್ಯೋಗದ ಮಾಹಿತಿಗಳ ಜೊತೆಗೆ ಇತ್ತೀಚಿನ ಕರ್ನಾಟಕ ಸರ್ಕಾರದ ಯೋಜನೆಗಳ ಬಗ್ಗೆ ಕೂಡ ಮಾಹಿತಿ ದೊರಕುತ್ತದೆ.
ಖಾಲಿ ಇರುವ ಹುದ್ದೆಗಳ ಮಾಹಿತಿ!
ಬಿಎಂಟಿಸಿ ಇಲಾಖೆಯಲ್ಲಿ ಸುಮಾರು 2500 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು? ಮತ್ತು ಮಾಸಿಕ ವೇತನ ಎಷ್ಟಿರುತ್ತದೆ? ಎಲ್ಲಾ ಪ್ರಶ್ನೆಗಳಿಗೆ ಈ ಕೆಳಗೆ ಉತ್ತರ ನೀಡಿರುತ್ತೇನೆ ನೋಡಿ.
ವಿದ್ಯಾರ್ಹತೆ ಏನರಬೇಕು?
ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯು ಯಾವುದೇ ಒಂದು ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ ಅಂದರೆ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು ಎಂದು ತಿಳಿಸಲಾಗಿದೆ. ಹಾಗೂ ಮೂರು ವರ್ಷದ ಡಿಪ್ಲೋಮೋ ಮುಗಿಸಿರಬೇಕು ಎಂದು ತಿಳಿಸಲಾಗಿದೆ.
ವಯೋಮಿತಿ ಎಷ್ಟಿರಬೇಕು?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಮತ್ತು 35 ವರ್ಷಕ್ಕಿಂತ ಕಡಿಮೆ ಇರಬೇಕು ಎಂದು ತಿಳಿಸಲಾಗಿದೆ.
ಅರ್ಜಿ ಶುಲ್ಕ ಎಷ್ಟಿರುತ್ತದೆ?
ಆಸಕ್ತಿ ಇವಳ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗೆ ನೀಡಿರುವ ಹಾಗೆ ಅರ್ಜಿ ಶುಲ್ಕವನ್ನು ತೆಗೆದುಕೊಳ್ಳಲಾಗುತ್ತದೆ ಈ ಕೆಳಗಿನ ಅರ್ಜಿ ಶುಲ್ಕಗಳನ್ನು ಗಮನವಿಟ್ಟು ಓದಿ.
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ₹750
- 2a,2b,3a,3b ಅಭ್ಯರ್ಥಿಗಳಿಗೆ – ₹750
- ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ ಒಂದು ಅಭ್ಯರ್ಥಿಗಳಿಗೆ – ₹500
ಸಂಬಳ ಎಷ್ಟು ಇರುತ್ತದೆ?
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯು ನಿಗದಿಪಡಿಸಿರುವ ಹಾಗೆ ಪ್ರತಿ ತಿಂಗಳು ₹18,660 ಇಂದ ₹25,300 ವರೆಗೆ ಸಂಬಳ ಇರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜಾಲತಾಣಕ್ಕೆ ಹೋಗಿ ಅದು ನಿಮ್ಮ ಫೋನ್ ನಂಬರ್ ಅನ್ನು ಬಳಸಿಕೊಂಡು ರೆಜಿಸ್ಟರ್ ಆಗಿ ನಂತರ ನಿಮ್ಮ ಶೈಕ್ಷಣಿಕ ದಾಖಲಾತಿಗಳನ್ನು ಭರ್ತಿ ಮಾಡಿ ಕೊನೆಗೆ ಅರ್ಜಿ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು ನೀವು ಸಂಪೂರ್ಣವಾಗಿ ಅರ್ಜಿ ಸಲ್ಲಿಸಿದಂತಾಗುತ್ತದೆ.
ಅರ್ಜಿ ಹಾಕಲು ಈ ಕೆಳಗಿನ ಜಾಲತಾಣಗಳನ್ನು ಬಳಸಿ.
https://cetonline.karnataka.gov.in/kearecruitment_bmtc/Forms/Login.aspx
HK – Apply Now
Non HK – Apply Now
ಪ್ರಮುಖ ದಿನಾಂಕಗಳು!
- ಅರ್ಜಿ ಪ್ರಾರಂಭದ ದಿನಾಂಕ – 19-04-2024
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 18-05-2024
- ಅರ್ಜಿ ಸುಲ್ಕ ಪಾವತಿಸಲು ಕೊನೆ ದಿನಾಂಕ – 19-05-2024
ಬಿಎಂಟಿಸಿ ಹುದ್ದೆಗಳಿಗೆ ಮೇಲೆ ಕೊಟ್ಟಿರುವಂತಹ ಜಾಲತಾಣಗಳನ್ನು ಬಳಸಿಕೊಂಡು ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾದಲ್ಲಿ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ.