ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ಬರೋಬ್ಬರಿ 2,500 ಖಾಲಿ ಇರುವಂತಹ ಬಿಎಂಟಿಸಿ ಹುದ್ದೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಲಾಗಿದೆ. ಕೊನೆವರೆಗೂ ನೀವು ಕೂಡ ಲೇಖನವನ್ನು ಓದುವ ಮುಖಾಂತರ ಈ ಬಿಎಂಟಿಸಿ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಕೆ ಮಾಡಬಹುದು. ಹಾಗೂ ಯಾರು ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು ಎಂಬ ಎಲ್ಲಾ ಮಾಹಿತಿಯನ್ನು ಕೂಡ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳಿರಿ.
ಬಿಎಂಟಿಸಿಯಲ್ಲಿ 2,500 ಹುದ್ದೆಗಳಿಗೆ ಅರ್ಜಿ ಆಹ್ವಾನ !
ಹೌದು ಸ್ನೇಹಿತರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಹುದ್ದೆಯ ಬಗ್ಗೆ ಅಧಿಸೂಚನೆಯನ್ನು ಕೂಡ ಹೊರಡಿಸಿದೆ. ಆ ಒಂದು ಅಧಿಸೂಚನೆಯಲ್ಲಿ ಈ ಹಿಂದೆ ಅರ್ಜಿ ಸಲ್ಲಿಕೆಯ ಮಾಹಿತಿ ಮಾತ್ರ ಬಿಡುಗಡೆಯಾಗಿತ್ತು, ಆದರೆ ಈ ತಿಂಗಳಿನಲ್ಲಿ ಅರ್ಜಿ ಸಲ್ಲಿಸುವಂತಹ ಲಿಂಕನ್ನು ಕೂಡ ಕರ್ನಾಟಕ ಪ್ರಾಧಿಕಾರವು ಬಿಡುಗಡೆ ಮಾಡಿದೆ. ಆ ಲಿಂಕ್ ಮುಖಾಂತರ ಆನ್ಲೈನ್ ನಲ್ಲಿಯೇ ನೀವು ಈ ಬಿಎಂಟಿಸಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
ಯಾರೆಲ್ಲ ದ್ವಿತೀಯ ಪಿಯುಸಿಯನ್ನು ಓದಿದ್ದೀರಾ ಅಂತವರು ಈ ಹುದ್ದೆಗಳನ್ನು ಕೂಡ ಪಡೆಯಲು ಅರ್ಹರಾಗಿರುತ್ತಾರೆ. ಹಾಗೂ ಸರ್ಕಾರಿ ನೌಕರಿಯನ್ನು ಹುಡುಕುತ್ತಿರುವವರಿಗೂ ಕೂಡ ಇದು ಭರ್ಜರಿ ಗುಡ್ ನ್ಯೂಸ್ ಎಂದೇ ಹೇಳಬಹುದು. ಹಲವಾರು ಕೆಲಸಗಳಿಗೂ ಕೂಡ ಬಿಎಂಟಿಸಿ ಅಧಿಸೂಚನೆಯನ್ನು ಕೂಡ ಪ್ರಕಟಣೆ ಮಾಡುತ್ತಿರುತ್ತದೆ. ಆದರೆ ಈ ಒಂದು 2,500 ಹುದ್ದೆಗಳು ನಿರ್ವಾಹಕ ಹುದ್ದೆಗಳಿಗೆ ನೇಮಕಾತಿಯಾಗುತ್ತದೆ. ನಿರ್ವಾಹಕ ಅಂದರೆ ಕಂಡಕ್ಟರ್ ಹುದ್ದೆಗಳು.
ಪ್ರತಿ ತಿಂಗಳ ವೇತನದ ಮಾಹಿತಿ !
18,660 ರಿಂದ 25,300 ಹಣವನ್ನು ಪ್ರತಿ ತಿಂಗಳು ಕೂಡ ನೀಡಲಾಗುತ್ತದೆ. ಯಾರು ಹೆಚ್ಚಿನ ಕೆಲಸವನ್ನು ನಿರ್ವಹಿಸುತ್ತಾರೆ ಅಂತವರಿಗೆ ಮಾತ್ರ ಈ ರೀತಿಯ ಒಂದು ವೇತನವನ್ನು ಬಿಎಂಟಿಸಿ ಮಂಡಳಿಯು ನೀಡುತ್ತದೆ. ಇದು ಕೂಡ ಸರ್ಕಾರಿ ಉದ್ಯೋಗವಾದ ಕಾರಣದಿಂದ ಮಾತ್ರ ಈ ರೀತಿಯ ವೇತನವನ್ನು ನಿಗದಿಪಡಿಸಿದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು.
ಈ ಶೈಕ್ಷಣಿಕ ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಉದ್ಯೋಗ !
ಕಡ್ಡಾಯವಾಗಿ ಎಲ್ಲಾ ಅಭ್ಯರ್ಥಿಗಳು ಕೂಡ ದ್ವಿತೀಯ ಪಿಯುಸಿಯಲ್ಲಿ ಪಾಸ್ ಆಗಿರಬೇಕಾಗುತ್ತದೆ. ಇದು ಶೈಕ್ಷಣಿಕ ಅರ್ಹತೆಯಾಗಿದೆ. ಈ ವಿದ್ಯಾಭ್ಯಾಸವನ್ನು ಮಾಡಿರುವಂತಹ ಯುವಕರಿಗೆ ಅಥವಾ ಯುವತಿಯರಿಗೆ ಈ ಸರ್ಕಾರಿ ಉದ್ಯೋಗಗಳು ನೇಮಕಾತಿ ಕೂಡ ಆಗುತ್ತದೆ. ಮಹಿಳೆಯರು ಅಥವಾ ಪುರುಷರು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಸಲು ಕೂಡ ಕೆಲವೊಂದು ಅರ್ಜಿ ಶುಲ್ಕ ಹಾಗೂ ಆನ್ಲೈನ್ ಪ್ರಕ್ರಿಯೆಯ ಅರ್ಜಿ ಸಲ್ಲಿಕೆ ಎಲ್ಲವುದನ್ನು ಕೂಡ ಪಾಲಿಸತಕ್ಕದ್ದು.
ಅರ್ಜಿ ಶುಲ್ಕ ಕೂಡ ಅನ್ವಯವಾಗುತ್ತದೆ.
ಸ್ನೇಹಿತರೆ ಎಲ್ಲಾ ವರ್ಗದ ಅಭ್ಯರ್ಥಿಗಳು ಕೂಡ ತಮಗೆ ಅನ್ವಯಿಸುವಂತಹ ಅರ್ಜಿ ಶುಲ್ಕವನ್ನು ಕೂಡ ಪಾವತಿಸಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮತ್ತು ಸೈನಿಕರಿಗೆ ಮಾತ್ರ 500 ಹಣ ಅನ್ವಯವಾಗುತ್ತದೆ. ಹಾಗೂ ಮಹಿಳೆಯರಿಗೂ ಕೂಡ ಅನ್ವಯವಾಗುತ್ತದೆ. ಮತ್ತು ಯಾರೆಲ್ಲಾ ಸಾಮಾನ್ಯ ವರ್ಗಕ್ಕೆ ಸೇರುತ್ತಾರೋ ಅಂತವರಿಗೆ ಮಾತ್ರ ರೂ.750 ಹಣ ಅರ್ಜಿ ಶುಲ್ಕವಾಗಿ ಅನ್ವಯವಾಗುತ್ತದೆ.
ಅರ್ಜಿ ಶುಲ್ಕದ ದಿನಾಂಕವನ್ನು ಕೂಡ ಬಿಡುಗಡೆ ಮಾಡಿದೆ ಕರ್ನಾಟಕ ಪ್ರಾಧಿಕಾರವು, ಮೇ 19 ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ. ಈ ದಿನಾಂಕದ ಒಳಗೆ ಅರ್ಜಿಯನ್ನು ಕೂಡ ಆನ್ಲೈನ್ ಮುಖಾಂತರ ಸಲಿಕೆ ಮಾಡಿರಬೇಕು. ಹಾಗೂ ಅರ್ಜಿ ಶುಲ್ಕವನ್ನು ಕೂಡ ಈ ನಿಗದಿ ದಿನಾಂಕದ ಒಳಗೆ ಪಾವತಿಸಬೇಕಾಗಿರುತ್ತದೆ.
ಬಿಎಂಟಿಸಿ ಹುದ್ದೆಗಳ ಆಯ್ಕೆ ಪ್ರಕ್ರಿಯೆ.
ಮೊದಲಿಗೆ ಎಲ್ಲಾ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬೇಕು. ಬಳಿಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವಂತಹ ಪರೀಕ್ಷೆಯಲ್ಲೂ ಕೂಡ ಹಾಜರಿರಬೇಕಾಗುತ್ತದೆ. ಆ ಒಂದು ಪರೀಕ್ಷೆಯು ನೂರು ಅಂಕಗಳನ್ನು ಪರಿಗಣಿಸುತ್ತದೆ. ಸಾಮರ್ಥ್ಯ ಪ್ರಶ್ನೆಗಳನ್ನು ಕೂಡ ಈ ಒಂದು ಪರೀಕ್ಷೆಯಲ್ಲಿ ಕೇಳಲಾಗಿರುತ್ತದೆ. ಆ ಎಲ್ಲಾ ಪ್ರಶ್ನೆಗಳಿಗೂ ಕೂಡ ಉತ್ತರಿಸುವ ಮುಖಾಂತರ ಒಳ್ಳೆಯ ಅಂಕವನ್ನು ಕೂಡ ಗಳಿಸಬೇಕು.
ಕಡ್ಡಾಯವಾಗಿ ಎಲ್ಲಾ ಅಭ್ಯರ್ಥಿಗಳು ಕೂಡ 75% ರಷ್ಟು ಅಂಕವನ್ನು ಗಳಿಸಿರಬೇಕು. ಬಳಿಕ ಆ ಒಂದು 75% ಆಧಾರದ ಮೇಲೆ 25% ಶೈಕ್ಷಣಿಕ ಅರ್ಹತೆಯನ್ನು ಪರಿಗಣಿಸಿ ಆ ಅಭ್ಯರ್ಥಿಗಳನ್ನು ಕೂಡ ನೇಮಕಾತಿ ಮಾಡಿಕೊಳ್ಳುತ್ತದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೇಮಕಾತಿ ಆಗುವ ಸಂದರ್ಭದಲ್ಲಿ ಕೂಡ ದಾಖಲಾತಿಗಳ ಪರಿಶೀಲನೆ ಕೂಡ ಮಾಡುತ್ತದೆ. ಆ ಎಲ್ಲಾ ದಾಖಲಾತಿಗಳು ಕಡ್ಡಾಯವಾಗಿ ಸರಿ ಇದೆ ಎಂದರೆ ಮಾತ್ರ ನಿಮಗೆ ಈ ಉದ್ಯೋಗ ದೊರೆಯುತ್ತದೆ.
ಆನ್ಲೈನ್ ಮುಖಾಂತರ ಈ ರೀತಿ ಅರ್ಜಿ ಸಲ್ಲಿಕೆ ಮಾಡಿ.
- ಎಲ್ಲರೂ ಕೂಡ ಈ ಒಂದು Apply Online ಲಿಂಕನ್ನು ಕ್ಲಿಕ್ಕಿಸಿ.
- ಬಿಎಂಟಿಸಿ ಹುದ್ದೆಗಳ ವೆಬ್ಸೈಟ್ಗೆ ಭೇಟಿ ನೀಡಿ.
- ಆನಂತರ HK / NHK ಎಂಬುದು ಕಾಣುತ್ತದೆ.
- ಯಾವ ವೃಂದದ ಹುದ್ದೆಗಳಿಗೆ ನೇಮಕಾತಿಯಾಗಲು ಬಯಸುತ್ತೀರಾ ಆ ವೃಂದದ ವೆಬ್ಸೈಟ್ಗೆ ಭೇಟಿ ನೀಡಬೇಕು. ಆದ್ದರಿಂದ ಈ ಎರಡರಲ್ಲಿ ಒಂದನ್ನು ಕ್ಲಿಕ್ಕಿಸಿ.
- ಬಳಿಕ ಕೆಇಎ ವೆಬ್ಸೈಟ್ ತೆರೆದುಕೊಳ್ಳುತ್ತದೆ.
- ಇದೇ ಮೊದಲ ಬಾರಿಗೆ ಅರ್ಜಿ ಸಲ್ಲಿಸುವಂಥವರು new application registration ಎಂಬುದನ್ನು ಕ್ಲಿಕ್ಕಿಸಿ.
- ಆನಂತರ ಮೊಬೈಲ್ ಸಂಖ್ಯೆ ನಿಮ್ಮ ಹೆಸರು ಇನ್ನಿತರ ಲಾಗಿನ್ ಪ್ರಕ್ರಿಯೆಯನ್ನು ಬಳಸಿಕೊಂಡು ರಿಜಿಸ್ಟ್ರೇಷನ್ ಆಗಿ.
- ರಿಜಿಸ್ಟ್ರೇಷನ್ ಆದ ಬಳಿಕ ಕೇಳಲಾಗುವಂತಹ ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿರಿ.
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 18 ಮೇ 2024
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….