BPL Ration Card: ನಮಸ್ಕಾರ ಸ್ನೇಹಿತರೇ, ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ ನಿಮ್ಮ ಹತ್ತಿರ ಏನಾದರೂ ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಇದ್ದರೆ ಈ ಮಾಹಿತಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಏಕೆಂದರೆ ಸರ್ಕಾರವು ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಹೊಂದಿದವರಿಗೆ ಹೊಸ ರೂಲ್ಸ್ ಗಳನ್ನು ಹಾಕಿರುತ್ತದೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಯಿರಿ.
ಸ್ನೇಹಿತರೆ, ನಿಮಗೆಲ್ಲ ತಿಳಿದಿರುವ ಹಾಗೆ ಬಿಪಿಎಲ್ ರೇಷನ್ ಕಾರ್ಡ್ ಸರ್ಕಾರದ ಯಾವುದೇ ಯೋಜನೆಗಳ ಸದ್ದುಪಯೋಗಪಡಿಸಿಕೊಳ್ಳಲು ರೇಷನ್ ಕಾರ್ಡ್ ಒಂದು ಪ್ರಮುಖವಾದ ದಾಖಲೆಯಾಗಿರುತ್ತದೆ ಎಂದು ಹೇಳಬಹುದು. ಹಾಗಾಗಿ ಹಲವಾರು ಜನರು ರೇಷನ್ ಕಾರ್ಡನ್ನು ಅಕ್ರಮವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅಂತವರಿಗಾಗಿ ಹೊಸ ರೂಲ್ಸ್ ಅನ್ನು ಜಾರಿಗೆ ತರಲಾಗಿದೆ.
ಅಕ್ರಮ ರೇಷನ್ ಕಾರ್ಡು {BPL Ration Card} ಬಂದ್ ಮಾಡಲಾಗುತ್ತದೆ!
ಸ್ನೇಹಿತರೆ, ಬಹಳ ಜನರು ಬಿಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ಗಳನ್ನು ಹೊಂದಲು ಇರಬೇಕಾದಂತ ಅರ್ಹತೆ ಹೊಂದಿಲ್ಲದಿದ್ದರೂ ಕೂಡ ಸುಳ್ಳು ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ರೇಷನ್ ಕಾರ್ಡನ್ನು ಹೊಂದಿರುತ್ತಾರೆ. ಹಾಗೂ ಅಂತ್ಯೋದಯ ರೇಷನ್ ಕಾರ್ಡನ್ನು ಕೂಡ ಹೊಂದಿರುತ್ತಾರೆ. ಇಂಥವರನ್ನು ಗುರುತಿಸಿ ಸರಕಾರ ಇವರ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸುವ ಕಾರ್ಯ ಕೈಗೆತ್ತಿಕೊಂಡಿದೆ.
ಇಂತಹ ರೇಷನ್ ಕಾರ್ಡ್ {BPL Ration Card} ಇದ್ದವರಿಗೆ ಹೊಸ ರೂಲ್ಸ್!
- ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ವಾರ್ಷಿಕ ಆದಾಯ ಒಂದು ಲಕ್ಷಕ್ಕಿಂತ ಕಡಿಮೆ ಇರಬೇಕು.
- ಈ ಬಿಬಿಎಲ್ ರೇಷನ್ ಕಾರ್ಡ್ ಹೊಂದಿರುವ ಕುಟುಂಬದಲ್ಲಿ ವೈಟ್ ಬೋರ್ಡ್ ಕಾರುಗಳನ್ನು ಕುಟುಂಬದ ಯಾವುದೇ ಸದಸ್ಯರು ಹೊಂದಿರಬಾರದು.
- ನಗರದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕುಟುಂಬದಾರರು ನೂರು ಚದರ ಮೀಟರ್ ಗಿಂತ ಹೆಚ್ಚು ಜಾಗ ಮತ್ತು ದೊಡ್ಡ ಮನೆಯನ್ನು ಕೂಡ ಹೊಂದಿರಬಾರದು ಎಂದು ತಿಳಿಸಲಾಗಿದೆ.
- ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವಂತಹ ಕುಟುಂಬದ ಒಟ್ಟು ಆಸ್ತಿ 3 ಹೆಕ್ಟರಿಗಿಂತ ಗೋಪುರ ದೇಶ ಜಾಸ್ತಿ ಇರಬಾರದು.
ಈ ಮೇಲ್ಕಂಡ ಅರ್ಹತೆಗಳನ್ನು ನೀವು ಹೊಂದಿದ್ದರೆ ಹಾಗೂ ಮೇಲೆ ಕೊಟ್ಟಿರುವಂತಹ ನಿಯಮವನ್ನು ನೀವು ಪಾಲಿಸಿದರೆ ಮಾತ್ರ ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿರುತ್ತದೆ. ಇಲ್ಲ ಅಂದರೆ ನಿಮ್ಮ ರೇಷನ್ ಕಾರ್ಡ್ ಅನ್ನು ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಹಾಗೂ ನೀವೇನಾದರೂ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಬೇಕು ಎಂದು ಕಾಯುತ್ತಿದ್ದಾರೆ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕು ಎಂದು ಕಾಯುತ್ತಿದ್ದರೆ, ಇನ್ನು ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗಿಲ್ಲ. ಆದರೆ ರೇಷನ್ ಕಾರ್ಡ್ ನಲ್ಲಿ ಬದಲಾವಣೆಗಳನ್ನು ನೀವು ಮಾಡಿಸಿಕೊಳ್ಳಬಹುದಾಗಿರುತ್ತದೆ.
ಇದನ್ನು ಓದಿ: ಗೃಹಲಕ್ಷ್ಮಿ ಯೋಜನೆಯ ₹6,000 ಹಣ ಒಟ್ಟಿಗೆ ಜಮಾ ಆಗುತ್ತೆ! ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ!
ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು!
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಜನನ ಪ್ರಮಾಣ ಪತ್ರ ( ಆರು ವರ್ಷದ ಒಳಗಿನ ಮಕ್ಕಳು ಇದ್ದಲ್ಲಿ ಕಡ್ಡಾಯ)
ಈ ಮೇಲಿನ ದಾಖಲೆಗಳನ್ನು ತೆಗೆದುಕೊಂಡು ನೀವು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿಕೊಟ್ಟ ತಕ್ಷಣ ಮೇಲೆ ನೀಡಿರುವ ದಾಖಲೆಗಳನ್ನು ಬಳಸಿಕೊಂಡು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಹೋಗಿ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಇದನ್ನು ಓದಿ: LG ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿ ₹1 ಲಕ್ಷ ರೂಪಾಯಿಯನ್ನು ಪಡೆಯಿರಿ!