canara bank recruitment: ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಯಾರೆಲ್ಲ ಬ್ಯಾಂಕಿನಲ್ಲಿ ಉದ್ಯೋಗವನ್ನು ಮಾಡಬೇಕು ಎಂದು ಅಂದುಕೊಂಡಿದ್ದೀರಾ ಅಂತವರಿಗೆ ಉದ್ಯೋಗವಕಾಶವೆಂದು ಹೇಳಬಹುದು. ಪ್ರತಿಷ್ಠಿತ ಬ್ಯಾಂಕಿನಲ್ಲಿ ಉದ್ಯೋಗಗಳು ದೊರೆಯಲಿದೆ.
ಆ ಹುದ್ದೆಗಳಿಗೆ ಕೆನರಾ ಬ್ಯಾಂಕ್ ಅರ್ಜಿಯನ್ನು ಕೂಡ ಆಹ್ವಾನಿಸಿದೆ. ನೀವು ಅರ್ಜಿಯನ್ನು ಸಲ್ಲಿಕೆ ಮಾಡಿದರೆ ಸಾಕು ನೇರವಾಗಿ ಕೆನರಾ ಬ್ಯಾಂಕ್ ಹುದ್ದೆಗಳಿಗೂ ಕೂಡ ಬರ್ತಿಯಾಗುತ್ತೀರಿ. ಯಾವುದೇ ರೀತಿಯ ಪರೀಕ್ಷೆಗಳು ಕೂಡ ಅನ್ವಯವಾಗುವುದಿಲ್ಲ. ನೇರವಾಗಿ ಸಂದರ್ಶನದ ಮುಖಾಂತರ ಕೆನರಾ ಬ್ಯಾಂಕ್ ಸಿಬ್ಬಂದಿಗಳು ನಿಮ್ಮನ್ನು ನೇಮಕಾತಿ ಮಾಡಿಕೊಳ್ಳುತ್ತಾರೆ.
ಕೆನರಾ ಬ್ಯಾಂಕ್ ಹುದ್ದೆಗಳ ಮಾಹಿತಿ !
ಕೆನರಾ ಬ್ಯಾಂಕಿನಲ್ಲಿ ಒಟ್ಟು ಮೂರು ರೀತಿಯ ವಿವಿಧ ಹುದ್ದೆಗಳು ಭರ್ತಿಯಾಗಲಿವೆ. ಮೊದಲನೇ ಹುದ್ದೆಯ ಹೆಸರು ಅಕೌಂಟೆಂಟ್ ಹಾಗೂ ಸೆಕ್ರೆಟರಿ ಹುದ್ದೆ, ಹಾಗೂ ಅಡ್ಮಿನಿಸ್ಟ್ರೇಷನ್ ಹುದ್ದೆ, ಈ ಮೂರು ರೀತಿಯ ಹುದ್ದೆಗಳು ಬರ್ತೀಯಾಗಳಿವೆ. ಆದರೆ ಈ ಹುದ್ದೆಗಳಿಗೆ ಸಾಕಷ್ಟು ಅಭ್ಯರ್ಥಿಗಳು ಮಾತ್ರ ನೇಮಕಾತಿ ಆಗುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಕೆನರಾ ಬ್ಯಾಂಕ್ ಹುದ್ದೆಗಳು ಬರ್ತಿಯಾಗಲಿದ್ದು, ನೀವು ಕೂಡ ಬಿಕಾಂ ಶಿಕ್ಷಣವನ್ನು ಮುಗಿಸಿದ್ದೀರಿ ಎಂದರೆ ಈ ಹುದ್ದೆಗಳಿಗೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬಹುದಾಗಿದೆ.
ಹುದ್ದೆಯ ಶೈಕ್ಷಣಿಕ ಮಾಹಿತಿ !
ಸ್ನೇಹಿತರೆ ನೀವು ಕೂಡ ಬಿಕಾಂ ಶಿಕ್ಷಣವನ್ನು ಪಡೆದಿದ್ದೀರಿ ಎಂದರೆ ಮಾತ್ರ ಈ ಕೆನರಾ ಬ್ಯಾಂಕ್ ಹುದ್ದೆಗಳು ಬರ್ತೀಯಾಗಲಿದೆ. ನೀವು ಕಡ್ಡಾಯವಾಗಿ ಬಿಕಾಂ ಶಿಕ್ಷಣವನ್ನು ಹೊಂದಿರತಕ್ಕದ್ದು. ಬಿಕಾಂ ಶಿಕ್ಷಣವನ್ನು ಹೊಂದಿದ್ದರು ಕೂಡ ನೀವು ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಈ ಎರಡು ಶಿಕ್ಷಣವನ್ನು ಯಾರೆಲ್ಲ ಪಡೆದಿರುತ್ತಾರೆ ಅಂತಹ ಅಭ್ಯರ್ಥಿಗಳಿಗೆ ಈ ಬ್ಯಾಂಕ್ ಉದ್ಯೋಗ ದೊರೆಯಲಿದೆ. ಪ್ರತಿಷ್ಠಿತ ಬ್ಯಾಂಕಿನಲ್ಲಿ ಉದ್ಯೋಗವನ್ನು ಪಡೆಯಬೇಕು ಎಂದರೆ ನೀವು ಈ ಶಿಕ್ಷಣವನ್ನು ಕಡ್ಡಾಯವಾಗಿ ಪೂರ್ಣಗೊಳಿಸಿರಬೇಕಾಗುತ್ತದೆ.
ಆಯ್ಕೆಯಾಗುವಂತಹ ಅಭ್ಯರ್ಥಿಗಳ ವಯೋಮಿತಿ ಮಾಹಿತಿ ಹೀಗಿದೆ.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ 25 ವರ್ಷದೊಳಗಿನ ವಯೋಮಿತಿ ಆಗಿರತಕ್ಕದ್ದು. ಈ ವರ್ಷದ ಹೆಚ್ಚಿನ ವಯೋಮಿತಿ ಆಗಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬೇಡಿ. ಏಕೆಂದರೆ ಅಧಿಸೂಚನೆಯಲ್ಲೂ ಕೂಡ ಈ ಒಂದು ವಯೋಮಿತಿಯನ್ನೇ ಪ್ರಕಟಣೆ ಮಾಡಲಾಗಿದೆ. ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ 28 ವರ್ಷದ ವಯೋಮಿತಿ ಇದೆ 28 ವರ್ಷದ ಒಳಗಿನ ವಯೋಮಿತಿಯನ್ನು ಯಾರೆಲ್ಲಾ ಹೊಂದಿದ್ದೀರಾ ಅಂತಹ ಅರ್ಹರು ಅರ್ಜಿ ಸಲ್ಲಿಕೆ ಮಾಡಬಹುದು.
ವೇತನದ ಮಾಹಿತಿ ಹೀಗಿದೆ !
ಬ್ಯಾಂಕಿನ ಉದ್ಯೋಗಕ್ಕೆ ನೇಮಕಾತಿ ಆಗುವಂತಹ ಅಭ್ಯರ್ಥಿಗಳಿಗೆ ಬರೋಬ್ಬರಿ 30,000 ಹಣ ಪ್ರತಿ ತಿಂಗಳು ಕೂಡ ವೇತನವಾಗಿ ದೊರೆಯುತ್ತದೆ. ಈ ವೇತನವನ್ನು ನೀವು ಕೂಡ ಪಡೆದುಕೊಂಡು ಮುಂದಿನ ಕೆಲಸವನ್ನು ಕೂಡ ನಿರ್ವಹಿಸಬಹುದು.
ಬ್ಯಾಂಕಿನ ಉದ್ಯೋಗಕ್ಕೆ ಈ ರೀತಿ ಅರ್ಜಿ ಸಲ್ಲಿಸಿ.
ಬ್ಯಾಂಕಿನ ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ ಮಾಡುವಂತಹ ಅಭ್ಯರ್ಥಿಗಳು ಈ ಒಂದು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಅರ್ಜಿ ನಮೂನೆಯನ್ನು ಕೂಡ ಡೌನ್ಲೋಡ್ ಮಾಡಿಕೊಳ್ಳಿರಿ. ಬಳಿಕ ಆ ಒಂದು ಅರ್ಜಿ ನಮೂನೆಯನ್ನು ನೀವು ಭರ್ತಿ ಮಾಡತಕ್ಕದ್ದು. ಭರ್ತಿ ಮಾಡುವಂತಹ ಸಂದರ್ಭದಲ್ಲಿ ಕೇಳುವಂತಹ ಶೈಕ್ಷಣಿಕದ ಮಾಹಿತಿ ನಿಮ್ಮ ಶಿಕ್ಷಣದ ವಿವರ ಎಲ್ಲವುದನ್ನು ಕೂಡ ಸಲಿಕೆ ಮಾಡಬೇಕು.
ಅರ್ಜಿ ಶುಲ್ಕ ನೋಡುವುದಾದರೆ ಎಸ್ಸಿ ಎಸ್ಟಿ ವರ್ಗಕ್ಕೆ 300ರೂ ಹಣ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 500 ಹಣ ವಿಧಿಸಲಾಗುತ್ತದೆ. ಈ ಒಂದು ಹಣವನ್ನು ಕೂಡ ನೀವು ಆನ್ಲೈನ್ ಪೇಮೆಂಟ್ ಗಳ ಮುಖಾಂತರ ಪಾವತಿ ಮಾಡತಕ್ಕದ್ದು. ಅರ್ಜಿ ನಮೂನೆ ಭರ್ತಿ ಮಾಡಿದ ನಂತರ ಈ ಒಂದು ವಿಳಾಸಕ್ಕೆ ಕಳುಹಿಸಿ. ಕೆನರಾ ಬ್ಯಾಂಕ್ ವೆಂಚರ್ ಕ್ಯಾಪಿಟಲ್ಸ್ ಫಂಡ್ ಲಿಮಿಟೆಡ್ (CVCFL), ಬೆಂಗಳೂರು – 560004
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಜೂನ್ 30
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…