Central Government Insurance: ₹2 ಲಕ್ಷದ ಜೀವ ವಿಮೆ ತಿಂಗಳಿಗೆ ಕೇವಲ 36 ರೂಪಾಯಿಗಳು!

Central Government Insurance: ₹2 ಲಕ್ಷದ ಜೀವ ವಿಮೆ ತಿಂಗಳಿಗೆ ಕೇವಲ 36 ರೂಪಾಯಿಗಳು!

ನಮಸ್ಕಾರ ಎಲ್ಲರಿಗೂ, PMJJBY ಯೋಜನೆಯ ಅಡಿಯಲ್ಲಿ ಒಳ್ಳೆಯ ಜೀವವಿಮೆ (Life Insurance) ಯೊಂದಿಗೆ ನಿಮ್ಮ ಕುಟುಂಬವನ್ನು ರಕ್ಷಿಸಬಹುದಾಗಿರುತ್ತದೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿರುತ್ತೇನೆ, ಲೇಖನವನ್ನು ಕೊನೆಯವರೆಗೂ ಓದಿ.

ಸ್ನೇಹಿತರೆ ಕುಟುಂಬದಲ್ಲಿ ಯಾವುದೇ ರೀತಿಯ ಅನಿರೀಕ್ಷಿತ ಸಂಕಟಗಳು ಯಾವಾಗ ಎದುರಾಗುತ್ತವೆ ಎಂದು ಗೊತ್ತಿರುವುದಿಲ್ಲ ಆದ್ದರಿಂದ ಕುಟುಂಬಗಳಿಗೆ ವಿಮಾ ಪಾಲಿಸಿಗಳು ಪ್ರಮುಖವಾಗಿ ಆರ್ಥಿಕ ರಕ್ಷಣೆಯನ್ನು ಒದಗಿಸಲು ಮುಂದಾಗುತ್ತವೆ. ಇಲ್ಲಿ ನಿಮಗೆ ಉಪಯುಕ್ತ ಆಗುವ ಹಾಗೆ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಇದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ನೋಡಿ ಸ್ನೇಹಿತರೆ.

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ! (PMJJBY)

ನಿಮಗೇನಾದರೂ ಆರೋಗ್ಯ ಸಂಬಂಧಿತ ಹಾಗೂ ಇನ್ನಿತರ ಸಂಕಷ್ಟಗಳು ಎದುರಾದಲ್ಲಿ ಪ್ರಧಾನಮಂತ್ರಿ ಜೀವ ವಿಮಾ ಯೋಜನೆಯ ಅಡಿಯಲ್ಲಿ 2 ಲಕ್ಷದ ಕವರೇಜ್ ತಿಂಗಳಿಗೆ ಕೇವಲ 36 ರೂಪಾಯಿಯಲ್ಲಿ ನೀಡಲಾಗುವುದು. ಕೇಂದ್ರ ಸರ್ಕಾರವು ಈ ಯೋಜನೆಯನ್ನು 2015 ರಲ್ಲಿ ಜಾರಿಗೆ ತರಲಾಯಿತು.

ಅರ್ಹತೆಗಳು ಏನಿರಬೇಕು?

ಈ ಯೋಜನೆಯ ಲಾಭ ಪಡೆದುಕೊಳ್ಳಲು ಅಭ್ಯರ್ಥಿಯ ವಯೋಮಿತಿ 18 ರಿಂದ 50 ವರ್ಷಗಳು.

ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು. ಹಾಗೂ ಬ್ಯಾಂಕಿನೊಂದಿಗೆ ಅಂದರೆ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಮತ್ತು ಕೆವೈಸಿ ಕಡ್ಡಾಯವಾಗಿದೆ.

ಈ ಯೋಜನೆಯಲ್ಲಿ 55 ವರ್ಷಗಳವರೆಗಿನ ಜೀವ ವಿಮಾ ರಕ್ಷಣೆ ಲಭ್ಯವಿದೆ.

ವಿಮೆಯ (Insurance) ಬಗ್ಗೆ ಇನ್ನಷ್ಟು ವಿವರಗಳು!

ಪಾಲಿಸಿದಾರನು ಯಾವುದೇ ರೀತಿಯ ಸಂದರ್ಭದಲ್ಲಿ ಮರಣ ಹೊಂದಿದ್ದಲ್ಲಿ 2 ಲಕ್ಷ ರೂಪಾಯಿಯನ್ನು ನಾಮಿನಿಗೆ ನೀಡಲಾಗುತ್ತದೆ. ಹಾಗೂ ಯಾವುದೇ ರೀತಿಯ ಮೆಚುರಿಟಿ ಪ್ರಯೋಜನವಿಲ್ಲದ ಶುದ್ಧ ಅವಧಿಯ ನೀತಿ ಆಗಿರುತ್ತದೆ.

ಈ ಯೋಜನೆಯನ್ನು ಸೇರುವ ಮೂಲಕ ತಮ್ಮ ಕುಟುಂಬಗಳಿಗೆ ಕಡಿಮೆ ವೆಚ್ಚದಲ್ಲಿ ಗಮನಾರ್ಹವಾದ ಆರ್ಥಿಕವಾದ ಭದ್ರತೆಯನ್ನು ನೀವು ಒದಗಿಸಬಹುದಾಗಿರುತ್ತದೆ. ಹಾಗಾಗಿ ಜೀವ ವಿಮೆ(Life Insurance)ಯನ್ನು ಪಡೆದುಕೊಳ್ಳುವುದು ಎಷ್ಟು ಸೂಕ್ತ ಎಂಬುದನ್ನು ಮೊದಲು ತಿಳಿದುಕೊಳ್ಳಿ.

WhatsApp Group Join Now
Telegram Group Join Now
error: Content is protected !!