Crop Insurance Money: ನಮಸ್ಕಾರ ಸ್ನೇಹಿತರೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ನೋಂದಾಯಿಸಿಕೊಂಡ 8 ಲಕ್ಷ ರೈತರಿಗೆ ₹600 ಕೋಟಿಯನ್ನು ಬಿಡುಗಡೆ ಸರ್ಕಾರವು ಮಾಡಿದ್ದು, ಉಳಿದ ₹800 ಕೋಟಿಯನ್ನು ಮಾರ್ಚ್ ತಿಂಗಳ ಅಂತ್ಯದೊಳಗೆ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಸ್ನೇಹಿತರೆ, ಈ ಕುರಿತು ಕೃಷಿ ಸಚಿವ L ಚೆಲುವರಾಯಸ್ವಾಮಿ ಮಾಹಿತಿಯನ್ನು ನೀಡಿದ್ದು, ದೇಶದಲ್ಲಿರುವ 19 ಲಕ್ಷ ರೈತರಿಗಾಗಿ 14 ಕೋಟಿ ರೂಪಾಯಿಗಳ ಬಿಡುಗಡೆ ಮಾಡಲಾಗಿದೆ ಎಂದು ಕೂಡ ಸಾರ್ವಜನಿಕರಿಗೆ ತಿಳಿಸಿದ್ದಾರೆ.
ಬೆಳೆ ವಿಮೆಯ ಹಣವನ್ನು ಬಿಡುಗಡೆ ಮಾಡಿದ ಸರ್ಕಾರ!
ಸ್ನೇಹಿತರೆ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ(Pradhan Mantri Fasal Bima Yojana)ಯ ಅಡಿಯಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚು ರೈತರು ಇಲ್ಲಿ ನೋಂದಾಯಿಸಿಕೊಂಡಿದ್ದು, ಮಾರ್ಚ್ 31 2024, ಒಳಗೆ ಲಕ್ಷ ರೈತರ ಖಾತೆಗೆ ಹಣ ಬಿಡುಗಡೆ ಆಗಲಿದೆ ಎಂದು ತಿಳಿದುಬಂದಿದೆ. ಬೆಳೆ ವಿಮೆ (crop insurance) ಹಣವನ್ನು 25% ರಷ್ಟು ರೈತರಿಗೆ ಲಭ್ಯವಾಗಿದ್ದು, ಇನ್ನೂ 75%ರಷ್ಟು ಹಣವನ್ನು ರೈತರಿಗೆ ತಲುಪಿಸುವುದು ಬಾಕಿ ಇದೆ ಎಂದು ಕೂಡ ತಿಳಿಸಲಾಗಿದೆ.
ನಿಮ್ಮ ಖಾತೆಗೆ ಹಣ ಬಂದಿದ್ಯಾ ಅಥವಾ ಇಲ್ಲವಾ ಚೆಕ್ ಮಾಡಿಕೊಳ್ಳಿ!
ಈ ಯೋಜನೆ(Pradhan mantri fasal bima yojana)ಯ ಅಡಿಯಲ್ಲಿ ನೀವು ಹೆಸರನ್ನು ಇಲ್ಲಿ ನೋಂದಾಯಿಸಿಕೊಂಡಿದ್ದರೆ ನಿಮ್ಮ ಖಾತೆಗೆ ಹಣ ಬಂದಿದ್ಯಾ ಎಂಬುದು ಈ ರೀತಿ ಚೆಕ್ ಮಾಡಿಕೊಳ್ಳಬೇಕು.
ಕೆಳಗೆ ಕೊಟ್ಟಿರುವ ಲಿಂಕನ್ನು ಕ್ಲಿಕ್ ಮಾಡಿ
https://samrakshane.karnataka.gov.in/
ಕರ್ನಾಟಕ ಸರ್ಕಾರದ ಈ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
ಅಲ್ಲಿ ಅಗತ್ಯವಾಗಿ ಕೇಳಿರುವ ನಿಮ್ಮ ವೈಯಕ್ತಿಕ ವಿವರಗಳನ್ನು ನೀಡಬೇಕು.
ನಂತರ ನಿಮ್ಮ ಖಾತೆಗಳಿಗೆ ಬೆಳೆ ವಿಮೆಯ (crop insurance) ಡಿಬಿಟಿ(Money)ಆಗಿದೆಯೋ ಇಲ್ಲವೋ ಎನ್ನುವುದನ್ನು ತಿಳಿಯಬಹುದು ಆಗಿದೆ.