Crop Insurance: ನಮಸ್ಕಾರ ಸ್ನೇಹಿತರೆ ಕರ್ನಾಟಕದಲ್ಲಿ ಇದೀಗ ಬೆಳೆ ವಿಮೆಯನ್ನು ತುಂಬಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅಡಿಯಲ್ಲಿ ಮುಂಗಾರು ಹಂಗಾಮಿನ ಬೆಳೆಗಳ ಕುರಿತು ರೈತರಿಗೆ ಬೆಳಗಿಮೆಯನ್ನು ತುಂಬಲು ಅರ್ಜಿ ಸಲ್ಲಿಕೆ ಆರಂಭವಾಗಿದೆ. ಇಂತಹ ಬೆಳೆಗಳಿಗೆ ಕೊನೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಈ ಮಾಹಿತಿಯನ್ನು ಕೊನೆಯವರೆಗೂ ಓದಿ.
ಬೆಳೆ ವಿಮೆ ನೋಂದಣಿ ಆರಂಭ! (Crop Insurance)
ಅತಿಯಾದ ಮಳೆ ಹಾಗೂ ಬರಗಾಲದಿಂದ ಮತ್ತು ಇನ್ನಿತರ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಯಾದರೆ, ಹಾಗೂ ಪ್ರಕೃತಿ ವಿಕೋಪಗಳಿಂದ ಉಂಟಾಗುವ ಬೆಳೆಯ ನಷ್ಟಗಳಿಗೆ ಆರ್ಥಿಕವಾಗಿ ಸಹಾಯ ಮಾಡಲು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತರಲಾಗಿರುತ್ತದೆ. ಈಗಾಗಲೇ ಬೆಳೆ ವಿಮೆ ತುಂಬಲು ದಿನಾಂಕವು ಆರಂಭವಾಗಿದ್ದು, ಯಾವ ಬೆಳೆಗಳಿಗೆ ವಿಮೆಯನ್ನು ತುಂಬಬಹುದು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.
ಬೆಳೆ ವಿಮೆ (Crop Insurance) ತುಂಬಲು ಕೊನೆ ದಿನಾಂಕ ಯಾವಾಗ?
ಮಳೆಯಾಶ್ರಿತ ಬೆಳೆಗಳಿಗೆ ಬೆಳೆ ವಿಮೆಯನ್ನು ತುಂಬಲು ಜುಲೈ 15 ನೇ ತಾರೀಕು 2024 ಇದು ಕೊನೆ ದಿನಾಂಕ ಆಗಿರುತ್ತದೆ. ಈ ದಿನಾಂಕದೊಳಗೆ ಮಳೆಯಾಶ್ರೀತ ಬೆಳೆಗಳ ವಿಮೆಯನ್ನು ತುಂಬಬಹುದು.
ಇದನ್ನು ಸಹ ಓದಿ: ಇಂಥವರ ರೇಷನ್ ಕಾರ್ಡ್ ಆಗಲಿದೆ ಬಂದ್! ಇಲ್ಲಿದೆ ನೋಡಿ ಸಂಪೂರ್ಣವಾದ ವಿವರ!
ನೀರಾವರಿ ಮತ್ತು ಮಳೆಯಾಶ್ರಿತ ಬೆಳೆಗಳಿಗೆ ಬೆಳೆವಿಮೆಯನ್ನು ತುಂಬಲು ಆಗಸ್ಟ್ 16ನೇ ತಾರೀಕು ಕೊನೆಯ ದಿನಾಂಕವಾಗಿರುತ್ತದೆ. ಹಾಗಾಗಿ ಕೊನೆ ದಿನಾಂಕದ ಒಳಗಾಗಿ ಬೆಳೆ ವಿಮೆಯನ್ನು ತುಂಬಬಹುದಾಗಿರುತ್ತದೆ.
ವಿಶೇಷ ಸೂಚನೆ: ಸ್ನೇಹಿತರೆ, ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ರೀತಿಯ ಬೆಳೆಗಳಿಗೆ ಕೊನೆಯ ದಿನಾಂಕವನ್ನು ಬೆಳೆಗಳ ಅನುಸಾರವಾಗಿ ನಿಗದಿಪಡಿಸಲಾಗಿರುತ್ತದೆ. ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ “ಸಂರಕ್ಷಣೆ” ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ.
ಮೊದಲು ನಿಮ್ಮ ಊರನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಯಾವ ಬೆಳೆಗಳಿಗೆ ವಿಮೆಯನ್ನು ತುಂಬಲು ಅವಕಾಶವಿದೆ ಎಂಬ ಮಾಹಿತಿಯನ್ನು ಪಡೆದುಕೊಂಡು ನಂತರ ಮುಂದಿನ ಕಾರ್ಯವನ್ನು ಮಾಡಿಕೊಳ್ಳಿ.
ಸಂರಕ್ಷಣೆ ಜಾಲತಾಣದ ಲಿಂಕ್!
https://samrakshane.karnataka.gov.in/CropHome.aspx
ಈ ಜಾಲತಾಣದ ಲಿಂಕ್ ಅನ್ನು ಬಳಸಿಕೊಂಡು ಯಾವ ಬೆಳೆಗಳಿಗೆ ಬೆಳೆವಿಮೆಯನ್ನು ತುಂಬಲು ಕೊನೆಯ ದಿನಾಂಕವನ್ನು ಯಾವಾಗ ನಿಗದಿಪಡಿಸಲಾಗಿದೆ? ಮತ್ತು ಹೇಗೆ ತುಂಬಬೇಕು? ಎಂಬ ಎಲ್ಲ ಮಾಹಿತಿಯನ್ನು ತಿಳಿಸಿಕೊಡಲಾಗಿರುತ್ತದೆ.