Crop insurence claim 2024 : ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ ಬೆಳೆ ವಿಮೆಯ ಹಣವು ರೈತರ ಖಾತೆಗೆ ಜಮಾ ಆಗಿದ್ದು, ಇದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡಲಿದ್ದೇನೆ. ಲೇಖನವನ್ನು ಕೊನೆಯವರೆಗೂ ಓದಿ
ಸ್ನೇಹಿತರೆ,2023/24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆಯ ಪರಿಹಾರದ ಹಣವನ್ನು ವಿಮಾ ಕಂಪನಿಯಿಂದ ಇದೀಗ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ ಎಂದು ಇದೀಗ ತಿಳಿದು ಬಂದಿದೆ. ಯಾವ ಯಾವ ಜಿಲ್ಲೆಯ ರೈತರಿಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂಬುದನ್ನು ನಮ್ಮ ಈ ಒಂದು ಲೇಖನದಲ್ಲಿ ತಿಳಿಯಿರಿ ಆದಕಾರಣ ಕೊನೆವರೆಗೂ ಓದಿ.
Crop insurence claim 2024 Details
ಬೆಳೆವಿಮೆ ಹಣ ಪರಿಶೀಲಿಸಿಕೊಳ್ಳಲಿ ಇಲ್ಲಿದೆ ನೋಡಿ ಲಿಂಕ್:
https://samrakshane.karnataka.gov.in/
ಸ್ನೇಹಿತರೆ, ನಿಮಗೆ ಈ ಮೇಲೆ ನೀಡಿರುವ ಹಂತಗಳನ್ನು ಪೂರ್ತಿಗೊಳಿಸಿದ ನಂತರದಲ್ಲಿ ಈ ಪುಟದಲ್ಲಿ ಕೆಳಗಡೆ Farmers ಕಾಲಂನಲ್ಲಿ ಕಾಣುವ “Crop Insurance Details On Survey no” ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು ಆಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆ-2 ಕ್ಕೆ ಅರ್ಜಿ ಆಹ್ವಾನ ! ರಿಜಿಸ್ಟರ್ ಆಗುವಂತಹ ಸುಲಭ ವಿಧಾನ ಇಲ್ಲಿದೆ ನೋಡಿ.
ಸ್ನೇಹಿತರೆ, ನಂತರದಲ್ಲಿ ನಿಮ್ಮ ಜಿಲ್ಲೆ(District), ನಿಮ್ಮ ಹೋಬಳಿ(Hobli), ತಾಲ್ಲೂಕು(Talluk), ಗ್ರಾಮ(Village), ಜಮೀನಿನ ಸರ್ವೆ ನಂಬರ್(survey number) ಹಾಕಿ “Search” button ಮೇಲೆ ಕ್ಲಿಕ್(click) ಮಾಡಬೇಕು. ಅದಾದ ಮೇಲೆ ಸರ್ವೆ ಸಂಬರ್ ನಲ್ಲಿ ಲಭ್ಯವಿರುವ ಹಿಸ್ಸಾ(Hissa) ನಂಬರ್ ಅನ್ನು ತೋರಿಸುತ್ತದೆ ಒಂದೊದರ ಮೇಲೆ ಒತ್ತಿದಾಗ ಆ ಸರ್ವೆ ನಂಬರ್(survey number)ನ ಬೆಳೆ ವಿಮೆ ಅರ್ಜಿ ನಂಬರ್ ನಿಮಗೆ ತೋರಿಸುತ್ತದೆ ಅದನ್ನು ಒಂದು ಕಡೆ ತೆಗೆದುಕೊಂಡು ಇಟ್ಟುಕೊಳ್ಳಬೇಕು ಎಂದು ಹೇಳುತ್ತೇನೆ.
ನಿಮಗೆ ಈ ಮೇಲಿನ ಎಲ್ಲಾ ವಿಧಾನ ಅನುಸರಿಸಿ ಅರ್ಜಿ ನಂಬರ್(application number )ತೆಗೆದುಕೊಂಡ ನಂತರ ಅದೇ ಪೇಜ್ ನ ಮೇಲೆ ಬಲಬದಿಯ ಭಾಗದಲ್ಲಿ ಕಾಣುವ “Home” ಬಟನ್ ನ ಮೇಲೆ ಒತ್ತಿ. “check status” ಆಯ್ಕೆಯ ಮೇಲೆ ಒತ್ತಿರಿ.
ಈ ಪುಟದಲ್ಲಿ ಅರ್ಜಿ ನಂಬರ್ ಹಾಗೂ ಕ್ಯಾಪ್ಚರ್ ಕೋಡ್( capture kode) ಹಾಕಿ “Search” ಬಟನ್(button) ಮೇಲೆ ಒತ್ತಿದ್ರೆ ಕೆಳಗೆ ಅರ್ಜಿಯ ವಿವರ ಮತ್ತು ಮಧ್ಯಂತರ ಬೆಳೆ ವಿಮೆ ಹಣ ಜಮಾ ವಿವರ ಕಾಣಿಸುತ್ತದೆ ಎಂದು ಹೇಳುತ್ತೇನೆ. ಎಷ್ಟು ಹಣ ಜಮೆಯಾಗಿದೆ? ಯಾವ ದಿನಾಂಕ ಆಗಿದೆ? ಬ್ಯಾಂಕ್ ಖಾತೆ(bank account) ವಿವರವನ್ನು ಅಲ್ಲಿ ನೀವು ತಿಳಿದುಕೊಳ್ಳಬಹುದು.
ನೀವು ಈ ರೀತಿಯಾಗಿ ನಿಮ್ಮ ಬೆಳೆ ವಿಮೆಯ ಪರಿಹಾರದ ಹಣ ನಿಮ್ಮ ಖಾತೆಗೆ ಜಮಾ ಆಗಿದೆ ಎಂದು ಚೆಕ್ ಮಾಡಿಕೊಳ್ಳಬಹುದು, ಮೇಲೆ ತಿಳಿಸಿರುವಂತೆ ಬೆಳೆ ವಿಮೆ ಪರಿಹಾರದ ಹಣ ಚೆಕ್ ಮಾಡಿಕೊಳ್ಳುವುದು ನಿಮಗೆ ಅರ್ಥ ಆಗಿದೆ ಎಂದು ನಾನು ಭಾವಿಸಿಕೊಳ್ಳುತ್ತೇನೆ.