Davanagere City Corporation Recruitment: ದಾವಣಗೆರೆ ಸಿಟಿ ಕಾರ್ಪೊರೇಶನ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನ ಆಹ್ವಾನಿಸಿದೆ ಎಂದು ತಿಳಿಸಲಾಗಿದೆ. ಒಟ್ಟು 119 ಪೌರಕಾರ್ಮಿಕ ಹುದ್ದೆಗಳು ಕೂಡ ಖಾಲಿ ಇದ್ದು, ಆಸಕ್ತರು ಅರ್ಜಿಯನ್ನ ಸಲ್ಲಿಸಬಹುದು.
ಜನವರಿ 30, 2024 ಅಂದರೆ ನಾಳೆಯ ದಿನ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ ಎಂದು ತಿಳಿಸಲಾಗಿದೆ. ಆಸಕ್ತರು off-line/ ಪೋಸ್ಟ್ ಮೂಲಕ ಅಪ್ಲೈ (apply) ಮಾಡಬೇಕು. ಕರ್ನಾಟಕ ಸರ್ಕಾರದ ಉದ್ಯೋಗ (Job) ಹುಡುಕುತ್ತಿರುವ ಸ್ಥಳೀಯ ಅಭ್ಯರ್ಥಿಗಳು ಈ ಅವಕಾಶವನ್ನು ನೀವು ಕೂಡ ಸದುಪಯೋಗಪಡಿಸಿಕೊಳ್ಳಿ.
ವಿದ್ಯಾರ್ಹತೆ ಏನಿರಬೇಕು?
ಯಾವುದೇ ವಿದ್ಯಾರ್ಹತೆಯನ್ನ ಇಲ್ಲಿ ಕೇಳಿಲ್ಲ. ಕನ್ನಡ ಭಾಷೆ ಮಾತನಾಡಲು ಬಂದರೆ ಸಾಕು ಎಂದು ತಿಳಿಸಲಾಗಿದೆ.
ಸಂಸ್ಥೆ – ದಾವಣಗೆರೆ ಸಿಟಿ ಕಾರ್ಪೊರೇಶನ್
ಹುದ್ದೆ – ಪೌರಕಾರ್ಮಿಕ ಹುದ್ದೆಗಳು
ಒಟ್ಟು ಹುದ್ದೆ – 119 ಹುದ್ದೆಗಳು
ವಿದ್ಯಾರ್ಹತೆ – ಕೆಳಲಾಗಿಲ್ಲ
ವೇತನ ಮಾಸಿಕ – ₹ 17,000- 28,950 ರೂಪಾಯಿ
ಉದ್ಯೋಗದ ಸ್ಥಳ – ದಾವಣಗೆರೆ
ಅರ್ಜಿ ಸಲ್ಲಿಸಲು ಕೊನೆಯ ದಿನ – ಜನವರಿ 30, 2024
ವಯೋಮಿತಿ ಎಷ್ಟಿರಬೇಕು?
ದಾವಣಗೆರೆ ಸಿಟಿ ಕಾರ್ಪೊರೇಶನ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 55 ವರ್ಷ ಮೀರಿರಬಾರದು ಎಂದು ತಿಳಿಸಲಾಗಿದೆ. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಅರ್ಜಿ ಹಾಕಲು ಯಾರು ಅರ್ಹರು ಆಗಿರುತ್ತಾರೆ?
ಮುನ್ಸಿಪಲ್ (Munciple) ಕಾರ್ಪೊರೇಷನ್‌ಗಳಲ್ಲಿ(Corporation) ನೇರ ವೇತನ/ಕಲ್ಯಾಣ/ದಿನಗೂಲಿ ಆಧಾರದ ಮೇಲೆ ಕಳೆದ 2 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು ಆಗಿರುತ್ತಾರೆ ಎಂದು ತಿಳಿಸಲಾಗಿದೆ.
ಆಯ್ಕೆ ಪ್ರಕ್ರಿಯೆ:
- ಕೆಲಸದ ಅನುಭವ ಪರೀಕ್ಷೆ
- ಸಂದರ್ಶನ
ಅರ್ಜಿ ಹಾಕೋದು ಹೇಗೆ ಅಂತ ತಿಳಿದುಕೊಳ್ಳಿ:
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯ ನಮೂನೆಯನ್ನು ಅಗತ್ಯವಾದ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು ಎಂದು ತಿಳಿಸಲಾಗಿದೆ.
ದಾವಣಗೆರೆ ಮಹಾನಗರ ಪಾಲಿಕೆಯ ಪ್ರಧಾನ ಕಛೇರಿ
ರೈಲ್ವೆ ನಿಲ್ದಾಣ ಎದುರು
P.B ರಸ್ತೆ
ದಾವಣಗೆರೆ
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 29/12/2023
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಜನವರಿ 30, 2024