Education Loan: ನಮಸ್ಕಾರ ಸ್ನೇಹಿತರೆ, ನಿನ್ನೆ ನಡೆದ ಬಜೆಟ್ ಮಂಡನೆ ಮೋದಿ ಸರ್ಕಾರದ 3ನೇ ಅವಧಿಯ ಮೊದಲ ಬಜೆಟ್ ಇದು ಆಗಿರುತ್ತದೆ. ಈ ಬಜೆಟ್ ನ ವಿಚಾರದಲ್ಲಿ ದೇಶದ ಜನರು ತುಂಬಾ ಕುತೂಹಲದಿಂದ ಕಾಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಯಾಕೆಂದರೆ, ಸತತವಾಗಿ ಮೂರನೇ ಅವಧಿಗೂ ಆರ್ಥಿಕ ಮಂತ್ರಿಗಳಾಗಿ ನಿರ್ಮಲ ಸೀತಾರಾಮನ್ ಅವರು ಮುಂದುವರೆದಿರುವುದರಿಂದ ಅವರು ಈಗ ಉನ್ನತ ಶಿಕ್ಷಣಕ್ಕಾಗಿ 10 ಲಕ್ಷದವರೆಗೆ ಸಾಲ ನೀಡುವುದಾಗಿ ಘೋಷಣೆ ಮಾಡಿರುತ್ತಾರೆ ಎಂದು ಹೇಳಬಹುದು.
ಈ ಲೇಖನದಲ್ಲಿ ಬಜೆಟ್ ಮಂಡನೆ ನಡೆದಾಗ 10 ಲಕ್ಷದವರೆಗೆ ಉನ್ನತ ಶಿಕ್ಷಣಕ್ಕೆ ಸಾಲವನ್ನು ನೀಡುವುದಾಗಿ ನಿರ್ಮಲ ಸೀತಾರಾಮನ್ ಅವರು ಮಾಡಿರುವ ಘೋಷಣೆಯ ಬಗ್ಗೆ ತಿಳಿಸಲಿದ್ದು, ಸಂಪೂರ್ಣ ವಿವರವನ್ನು ಪಡೆಯಲು ಲೇಖನವನ್ನು ಕೊನೆಯವರೆಗೂ ಓದಿ.
ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಸರ್ಕಾರವು ಯುವ ಸಮುದಾಯಕ್ಕೆ ಹೆಚ್ಚಿನ ಒಲವು ತೋರುವುದಿಲ್ಲ. ಯಾಕೆಂದರೆ ಯುವಕರು ದೇಶದ ಶಕ್ತಿ ಎಂದು ಹೇಳಬಹುದು. ಆದ್ದರಿಂದ ಯುವಕರ ಮುಂದಿನ ಭವಿಷ್ಯಕ್ಕಾಗಿ ಹಲವಾರು ಯೋಜನೆಗಳನ್ನು ಸರ್ಕಾರವು ಜಾರಿಗೆ ತರುತ್ತಿದೆ.
ಹಾಗಾಗಿ ದೇಶದ ಯುವ ಜನತೆಗೆ ಉದ್ಯೋಗ ಮತ್ತು ಕೌಶಲ್ಯ ಕ್ಷೇತ್ರಕ್ಕೆ ಅಂತ ಎರಡು ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ ಎಂಬುದಾಗಿ ಆರ್ಥಿಕ ಮಂತ್ರಿಗಳಾದ ನಿರ್ಮಲ ಸೀತಾರಾಮನ್ ಅವರು ತಿಳಿಸಿದ್ದಾರೆ.
ಉನ್ನತ ಶಿಕ್ಷಣಕ್ಕೆ 10 ಲಕ್ಷದವರೆಗೆ ಸಾಲ!
ಸ್ನೇಹಿತರೆ, ದೇಶದಲ್ಲಿ ಮಧ್ಯಮ ಹಾಗೂ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ದೊರಕಬೇಕೆಂಬುವುದು ಅವರ ಕನಸು ಆಗಿರುತ್ತದೆ. ಈಗಿನ ಕಾಲದಲ್ಲಿ ಲಕ್ಷ ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಒಳ್ಳೆಯ ವಿದ್ಯಾ ಸಂಸ್ಥೆಯಲ್ಲಿ ಉನ್ನತವಾದ ಶಿಕ್ಷಣವನ್ನು ಪೋಷಕರು ಮಕ್ಕಳಿಗೆ ಕೊಡಿಸುತ್ತಿದ್ದಾರೆ. ಹಾಗೂ ಕೆಲವರು ಮಧ್ಯಮ ಹಾಗೂ ಬಡ ಕುಟುಂಬದವರಿಗೆ ಇದು ಸಾಧ್ಯವಾಗುತ್ತಿಲ್ಲ.
ಹಾಗಾಗಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಮಟ್ಟದಲ್ಲಿ ಆಸಕ್ತಿವುಳ್ಳ ವಿದ್ಯಾರ್ಥಿಗಳಿಗೆ ಕೇವಲ 3% ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ವಿದ್ಯಾರ್ಥಿಗಳು ಪಡೆಯಬಹುದಾಗಿದೆ. ಹಾಗಾಗಿ ಇದರ ಅರ್ಥವೇನೆಂದರೆ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದುಕೊಳ್ಳಬೇಕೆಂಬುದು ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ.
ಓದುಗರ ಗಮನಕ್ಕೆ: ಸ್ನೇಹಿತರೆ, ಈ ಲೇಖನದಲ್ಲಿ ಉತ್ತಮ ವಿದ್ಯಾಭ್ಯಾಸಕ್ಕೇ ಎಂದೇ ಅಥವಾ ಉನ್ನತ ಶಿಕ್ಷಣಕ್ಕೆ ಎಂದೇ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿಯವರೆಗೆ ಸಾಲವನ್ನು ಬಜೆಟ್ ನಲ್ಲಿ ನಿರ್ಮಲ ಸೀತಾರಾಮನ್ ಅವರು ಘೋಷಣೆ ಮಾಡಿರುವ ಬಗ್ಗೆ ತಿಳಿಸಲಾಗಿರುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.