ತಾಡಪತ್ರಿ ಮತ್ತು ಟ್ರ್ಯಾಕ್ಟರ್ ಕೊಳ್ಳಲು 90% ನಷ್ಟು ಸಹಾಯಧನ! ಅರ್ಜಿ ಸಲ್ಲಿಸುವುದು ಹೇಗೆ?

Formers Subsidy Scheme: ಕೃಷಿ ಇಲಾಖೆಯಲ್ಲಿ ಸಣ್ಣ ಯಂತ್ರ ( Engine) ಚಾಲಿತ ಎಣ್ಣೆಗಾಣ, ಮತ್ತು 45 P.T.O H.P ಯವರೆಗೆ ಟ್ರಾಕ್ಟರ್‍ ಗೆ ಸಹಾಯಧನ ಸಿಗುತ್ತಿದೆ:

ಆತ್ಮೀಯ ರೈತ ಬಾಂದವರೇ, ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯ ಪ್ರಮುಖ ಉದ್ದೇಶವು ಗ್ರಾಮೀಣ ಪುದೇಶಗಳಲ್ಲಿ ರೈತರು ಬೆಳೆಯುವ ಕೃಷಿ ಉತ್ಪನ್ನಗಳನ್ನು ಉತ್ತಮ ಸಂಸ್ಕರಣೆಗೆ ಒಳವಡಿಸಿ ಗುಣಮಟ್ಟದ ಉತ್ಪನ್ನಗಳನ್ನು ರೈತರಿಗೆ ಹಾಗೂ ಬಳಕೆದಾರರಿಗೆ ಒದಗಿಸುವುದ ಆಗಿರುತ್ತದೆ.

Processing of Agriculture Products: ಕೃಷಿ ಉತ್ಪನ್ನಗಳ ಸಂಸ್ಕರಣೆ ಹೇಗಿರುತ್ತೆ? :

ಉತ್ತಮ ಗುಣಮಟ್ಟದ ಹಾಗೂ ಸಂಸ್ಕರಿಸಿದ ಉತ್ಪನ್ನಗಳು ರೈತರಿಗೆ ಹೆಚ್ಚಿನ ಬೆಲೆಯನ್ನೂ ಸಹ ಒದಗಿಸಿಕೊಡುವುದರಿಂದ ಅವರ ಆರ್ಥಿಕವಾದ ಸಂಕಷ್ಟಗಳು ಸ್ವಲ್ಪ ಕಡಿಮೆಯಾಗುತ್ತದೆ. ಸದರಿ ಯೋಜನೆಯಡಿ ಕೃಷಿ ಸಂಸ್ಕರಣಾ ಘಟಕಗಳು, ಸಣ್ಣ ಯಂತ್ರ ಚಾಲಿತ ಎಣ್ಣೆಗಾಣ ಘಟಕಗಳು ಹಾಗೂ ಟಾರ್ಪಲೀನ್ ವಿತರಣೆಗೆ ಪ್ರಾಮುಖ್ಯತೆಯನ್ನು ಕೂಡ ನೀಡಲಾಗಿದೆ ಎಂದು ತಿಳಿಸಲಾಗಿದೆ.

ಕಟಾವಿನ ನಂತರ ಕೃಷಿ ಉತ್ಪನ್ನಗಳನ್ನು ಮಳೆ, ಗಾಳಿ ಹಾಗೂ ಇತರೆ ಹವಾಮಾನ ವೈಪರೀತ್ಯಗಳಿಂದ ಸಂರಕ್ಷಿಸಿ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು, 5 ಪದರಗಳನ್ನು ಒಳಗೊಂಡಿರುವ 250 GSM,ಕಪ್ಪು ಬಣ್ಣದ HDPE tarpaulins confirming IS 7903/2017 (Type-11)8X6 mtr. ಅಳತೆಯ ಟಾರ್ಪಲೀನ್ ಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ವಿಶೇಷ ಸೂಚನೆ:

ಈ ಒಂದು ಯೋಜನೆ ರಾಜ್ಯದ ಜಿಲ್ಲಾ ಕೇಂದ್ರದಲ್ಲಿ ಜಾರಿಯಲ್ಲಿರುತ್ತದೆ. ಮುಖ್ಯವಾಗಿ ಅನುದಾನದ ಅನುಗುಣವಾಗಿ ಈ ಯೋಜನೆಯನ್ನು ಕೂಡ ಜಾರಿಗೊಳಿಸಲಾಗುತ್ತದೆ. ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ಹತ್ತಿರದ ಕೃಷಿ ಇಲಾಖೆಗೆ ಭೇಟಿಯನ್ನ ನೀಡಿ ಪಡೆಯಿರಿ.ಟಾರ್ಪಲೀನ್ ಬೇಕಾದಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ತಿಳಿಸಲಾಗಿದೆ.

Required documents: ಬೇಕಾಗುವ ದಾಖಲೆಗಳು :

  • ರೈತರ ಆಧಾರ ಕಾರ್ಡ್ ಪ್ರತಿ
  • ಬ್ಯಾಂಕ್ ಪಾಸ್ ಬುಕ್ ವಿವರ
  • ಪಹಣಿ ಯ ಪ್ರತಿ( RTC)
  • ರೈತರ ಅರ್ಜಿ ಸಲ್ಲಿಕೆಯ ಆಧಾರದ ಮೇಲೆ ಹಿರಿತನದ ಆಧಾರದ ಮೇಲೆ ಟಾರ್ಪಲೀನ್ ವಿರತಣೆಯನ್ನ ಮಾಡಲಾಗುತ್ತದೆ.

 

ಕೃಷಿ ಸಂಸ್ಕರಣಾ ಘಟಕಗಳಿಗೆ ಸಾಮಾನ್ಯ ರೈತರಿಗೆ ಶೇ.50% ರಷ್ಟು ಹಾಗೂ ಪರಿಶಿಷ್ಟ ಜಾತಿ S.C / ಪಂಗಡದ S.T ರೈತರಿಗೆ ಶೇ.90% ರಷ್ಟು ಮತ್ತು ಸಣ್ಣ ಯಂತ್ರ ಚಾಲಿತವಾದ ಎಣ್ಣೆಗಾಣ. ಘಟಕಗಳಿಗೆ ಸಾಮಾನ್ಯ ರೈತರಿಗೆ ಶೇ.75% ಕ್ಕೆ ಮೀರದಂತೆ ಹಾಗೂ ಪರಿಶಿಷ್ಟ ಜಾತಿ / ಪಂಗಡದ ರೈತರಿಗೆ ಶೇ.90% ರಷ್ಟು ಸಹಾಯಧನವನ್ನು ಗರಿಷ್ಟ ರೂ.1.00 ಲಕ್ಷದವರೆಗೆ ಮಿತಿಗೊಳಿಸಿ ಕೂಡ ನೀಡಬಹುದಾಗಿದೆ.

ಸಾರ್ವಜನಿಕರ ಗಮನಕ್ಕೆ : ಈ ಒಂದು ಕೃಷಿ ಯಂತ್ರಧಾರೆ – ಕೃಷಿ ಯಂತ್ರೋಪಕರಣಗಳ ಆಧಾರಿತ ಸೇವಾ ಕೇಂದ್ರಕ್ಕೆ ಕೃಷಿ ಇಲಾಖೆ ವತಿಯಿಂದ ಎಲ್ಲಾ ರೈತರಿಗೆ ಉಪಕರಣಗಳನ್ನು ಬಾಡಿಗೆ ನೀಡಲು ಮತ್ತು ಈ ಕೇಂದ್ರವನ್ನು ನಡೆಸಲು ಶೇಕಡಾ 50% ರ ಸಹಾಯಧನವನ್ನು ಕೂಡ ನೀಡುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *