Free LPG Gas: ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೆಂದರೆ, ಯಾರೆಲ್ಲಾ ಉಚಿತ ಗ್ಯಾಸ್ ಗಳನ್ನು ಪಡೆಯಲು ಅರ್ಹರಿದ್ದೀರಾ ಅಂತವರು ಸರ್ಕಾರದಿಂದ ಸಿಗುವಂತಹ ಉಚಿತ ಗ್ಯಾಸ್ ಗಳನ್ನು ಕೂಡ ಪಡೆಯಬಹುದಾಗಿದೆ. ಉಚಿತ ಗ್ಯಾಸ್ ಗಳಿಗೆ ಯಾವ ರೀತಿ ಅರ್ಜಿ ಸಲ್ಲಿಕೆ ಮಾಡಬೇಕು ಸರ್ಕಾರದಿಂದ ಯಾರಿಗೆ ಉಚಿತ ಗ್ಯಾಸ್ ಸೌಲಭ್ಯ ದೊರೆಯುತ್ತದೆ ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ಒದಗಿಸಲಾಗಿದೆ. ನೀವು ಕೂಡ ಲೇಖನವನ್ನು ಕೊನೆವರೆಗೂ ಓದುವ ಮುಖಾಂತರ ಈ ಒಂದು ಉಪಯುಕ್ತವಾದಂತಹ ಮಾಹಿತಿಯನ್ನು ತಿಳಿದುಕೊಳ್ಳಿರಿ.
ಪ್ರಧಾನಮಂತ್ರಿ ಉಜ್ವಲ ಯೋಜನೆ 2024 !
ಪ್ರಧಾನಮಂತ್ರಿ ಉಜ್ವಲ ಯೋಜನೆ ಮುಖಾಂತರ ಎಲ್ಲಾ ಮಹಿಳಾ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಗಳನ್ನು ಕೂಡ ಸರ್ಕಾರ ನೀಡುತ್ತದೆ. ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಿರುತ್ತಾರೋ ಅಂತವರಿಗೆ ಮಾತ್ರ ಮೊದಲನೇ ಬಾರಿಯಲ್ಲಿ ಉಚಿತ ಗ್ಯಾಸ್ ಸೌಲಭ್ಯ ಹಾಗೂ ಅಂತಹ ಅರ್ಹರಿಗೆ ಪ್ರತಿ ತಿಂಗಳು ಕೂಡ ಸಿಲಿಂಡರ್ ಗಳನ್ನು ನೀಡಲಾಗುತ್ತದೆ. ಆ ಗ್ಯಾಸಿಲಿಂಡರ್ ಗಳನ್ನು ಕೂಡ ನೀವು ಪಡೆದುಕೊಂಡು ಅಡುಗೆ ಕೆಲಸಗಳಿಗೂ ಕೂಡ ಬಳಕೆ ಮಾಡಬಹುದಾಗಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು 2016ನೇ ಸಾಲಿನಲ್ಲಿ ಪ್ರಧಾನಮಂತ್ರಿ ಮೋದಿಜಿ ಅವರು ಜಾರಿಗೊಳಿಸಿದರು. ಇದುವರೆಗೂ ಕೂಡ ಕೋಟ್ಯಾಂತರ ಮಹಿಳೆಯರು ಈ ಒಂದು ಯೋಜನೆ ಮುಖಾಂತರ ಗ್ಯಾಸ್ ಗಳನ್ನು ಪ್ರತಿ ತಿಂಗಳು ಪಡೆಯುತ್ತಿದ್ದಾರೆ. ಹಾಗೂ ಸಬ್ಸಿಡಿ ಹಣವನ್ನು ಕೂಡ ಪ್ರತಿ ತಿಂಗಳು ಪಡೆಯುತ್ತಿದ್ದಾರೆ. ಯಾರೆಲ್ಲಾ ಗ್ಯಾಸ್ ಗಳನ್ನು ಪಡೆಯಲು ಮುಂದಾಗುತ್ತಾರೋ ಅಂತವರ ಖಾತೆಗೆ ಅದೇ ತಿಂಗಳಿನಲ್ಲಿ ಹಣ ಕೂಡ ಜಮಾ ಆಗಿರುತ್ತದೆ. ಬರೋಬ್ಬರಿ 300 ಹಣವನ್ನು ಸರ್ಕಾರ ಅಂತಹ ಅರ್ಹರಿಗೆ ಮಾತ್ರ ಸಬ್ಸಿಡಿಯಾಗಿ ಖಾತೆಗೆ ಜಮಾ ಮಾಡುತ್ತದೆ.
ನೀವು ಇದುವರೆಗೂ ಪ್ರಧಾನಮಂತ್ರಿ ಉಜ್ವಲ ಯೋಜನೆ ಮುಖಾಂತರ ಉಚಿತ ಗ್ಯಾಸ್ ಗಳನ್ನು ಪಡೆದುಕೊಂಡಿಲ್ಲ ಎಂದರೆ, ನೀವು ಕಡ್ಡಾಯವಾಗಿ ಒಂದು ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬೇಕಾಗುತ್ತದೆ. ಸಲ್ಲಿಕೆ ಮಾಡಲು ನೀವು ಕಡುಬಡವರಾಗಿರಬೇಕು ಅಥವಾ ಬಿಪಿಎಲ್ ರೇಷನ್ ಕಾರ್ಡ್ ಏನಾದರೂ ಹೊಂದಿರಬೇಕು. ಈ ಎರಡರಲ್ಲಿ ಒಂದನ್ನಾದರೂ ಅರ್ಹತೆಯನ್ನು ಹೊಂದಿದಂತಹ ಮಹಿಳಾ ಫಲಾನುಭವಿಗಳಿಗೆ ಮಾತ್ರ ಗ್ಯಾಸ್ ದೊರೆಯುತ್ತದೆ. ಗ್ಯಾಸ್ಗಳನ್ನು ಇದುವರೆಗೂ ಪಡೆದಿಲ್ಲದವರು ಕೂಡಲೇ ಈ ಮಾಹಿತಿಯಲ್ಲಿ ತಿಳಿಸಿರುವ ಹಾಗೆ ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಿರಿ.
ಗ್ಯಾಸ್ ಪಡೆಯಲು ಈ ದಾಖಲಾತಿಗಳು ಕಡ್ಡಾಯ !
- ಅಭ್ಯರ್ಥಿಯ ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಬಿಪಿಎಲ್ ರೇಷನ್ ಕಾರ್ಡ್ ಕಡ್ಡಾಯ
- ವಯಸ್ಸಿನ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ಮಾಹಿತಿ
- ಅರ್ಜಿದಾರರ ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಪ್ರಸ್ತುತ ಮೊಬೈಲ್ ಸಂಖ್ಯೆ
ಈ ರೀತಿ ಅರ್ಜಿ ಸಲ್ಲಿಕೆ ಮಾಡಿರಿ.
- ಉಚಿತವಾಗಿ ಗ್ಯಾಸ್ ಪಡೆಯುವಂತಹ ಎಲ್ಲಾ ಅಭ್ಯರ್ಥಿಗಳು ಕೂಡ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡತಕ್ಕದ್ದು.
- ಭೇಟಿ ನೀಡಿದ ಬಳಿಕ ಅಪ್ಲಿಕೇಶನ್ ಆಯ್ಕೆ ಕಾಣ ತೊಡಗುತ್ತದೆ ಅದರ ಮೇಲೆ ಕ್ಲಿಕ್ಕಿಸಿರಿ.
- ಬಳಿಕ ಯಾವ ಕಂಪನಿಯ ಗ್ಯಾಸ್ ಗಳನ್ನು ಬಯಸುತ್ತಿದ್ದೀರಿ ಎಂಬುದನ್ನು ಕೂಡ ಆಯ್ಕೆ ಮಾಡಿಕೊಳ್ಳಿ.
- Hearby declare ಎಂಬುದನ್ನು ಕ್ಲಿಕ್ಕಿಸುವ ಮುಖಾಂತರ ನಿಮ್ಮ ರಾಜ್ಯ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
- ಬಳಿಕ ನಿಮ್ಮ ದಾಖಲಾತಿಗಳನ್ನು ಕೇಳಲಾಗುತ್ತದೆ.
- ಕೇಳುವಂತಹ ಎಲ್ಲಾ ದಾಖಲಾತಿಗಳನ್ನು ಈ ಒಂದು ಪುಟದಲ್ಲಿ ಒದಗಿಸುವ ಮುಖಾಂತರ ಮುಂದುವರೆಯಿರಿ.
- ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ್ದೀವಿ ಎಂದು ಅನಿಸಿದರೆ ಮಾತ್ರ ನೀವು ಸಲ್ಲಿಸು ಎಂಬುದನ್ನು ಕ್ಲಿಕ್ಕಿಸಿ. ಅರ್ಜಿಯನ್ನು ಕೂಡ ಆನ್ಲೈನ್ ಮುಖಾಂತರ ಸಲ್ಲಿಕೆ ಮಾಡಬಹುದು. ಯಾರೆಲ್ಲ ಇದುವರೆಗೂ ಉಚಿತ ಗ್ಯಾಸ್ ಗಳನ್ನು ಪಡೆದಿಲ್ಲ ಅಂತವರು ಮಾತ್ರ ಈ ರೀತಿಯ ಒಂದು ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ನೀವು ಈಗಾಗಲೇ ಗ್ಯಾಸ್ ಗಳನ್ನು ಕೂಡ ಪಡೆದಿದ್ದೀರಿ ಎಂದರೆ ನೀವು ಅರ್ಜಿಯನ್ನು ಕೂಡ ಸಲ್ಲಿಕೆ ಮಾಡುವ ಹಾಗಿಲ್ಲ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…