Free Sewing Machine: ಕೇಂದ್ರ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ! ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣವಾದ ಮಾಹಿತಿ!

Free Sewing Machine

Free Sewing Machine: ಕೇಂದ್ರ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ! ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣವಾದ ಮಾಹಿತಿ!

ನಮಸ್ಕಾರ ಎಲ್ಲರಿಗೂ ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಅಂತಾನೆ ಉಚಿತವಾಗಿ ಹೊಲಿಗೆ ಯಂತ್ರ ನೀಡಲು ಒಂದು ಯೋಜನೆ ಇದೆ. ಅದು ಯಾವುದೇ ರೀತಿಯ ಸುಳ್ಳು ಸುದ್ದಿ ಆಗಿರುವುದಿಲ್ಲ ಯಾಕೆಂದರೆ ಕೇಂದ್ರ ಸರ್ಕಾರವು ಪಿಎಂ ವಿಶ್ವಕರ್ಮ ಯೋಜನೆಯಡಿ ಈ ಸೌಲಭ್ಯವನ್ನು ದೊರಕಿಸಿಕೊಡಲಿದೆ. ಸಂಪೂರ್ಣವಾದ ವಿವರಗಳಿಗಾಗಿ ಈ ಸುದ್ದಿಯನ್ನು ಕೊನೆಯವರೆಗೂ ಓದಿ.

ಕೇಂದ್ರ ಸರ್ಕಾರವು ಮಹಿಳೆಯರಿಗೆ ಅಂತಾನೆ ಉಚಿತವಾಗಿ ಹೊಲಿಗೆ ಯಂತ್ರವನ್ನು ನೀಡುತ್ತಿದೆ. ಈ ರೀತಿ ಅನೇಕ ಸುದ್ದಿಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಕೆಲವರು ಈ ಸುದ್ದಿಯನ್ನು ಸುಳ್ಳು ಎನ್ನುತ್ತಿದ್ದಾರೆ. ಆದರೆ ಅದು ವಾಸ್ತವಿಕವಾಗಿ ಕೇಂದ್ರ ಸರ್ಕಾರವು ನಿಜವಾಗಿಯೂ ಕೂಡ ಹೊಲಿಗೆ ಯಂತ್ರವನ್ನು ನೀಡುತ್ತಿದೆ.

ಉಚಿತ ಹೊಲಿಗೆ ಯಂತ್ರ ಯೋಜನೆ! {Free Sewing Machine}

ಈ ಯೋಜನೆಯ ಯಾವುದೇ ರೀತಿಯ ಪ್ರತ್ಯೇಕ ಯೋಜನೆ ಆಗಿಲ್ಲ. ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಉಚಿತವಾಗಿ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಲು 15,000 ಹಣವನ್ನು ಪಾವತಿಸುತ್ತದೆ ಮತ್ತು ಈ ಹಣವನ್ನು ನೇರವಾಗಿ ಫಲಾನುಭವಿಯ ಖಾತೆಗೆ ಜಮಾ ಮಾಡಲಾಗುತ್ತದೆ. 

Also Read this: ಪಿಯುಸಿ ವಿದ್ಯಾರ್ಥಿಗಳಿಗೆ ಸಿಗುತ್ತೆ ವಿದ್ಯಾಧನ್ ಸ್ಕಾಲರ್ಶಿಪ್ ! 10 ಸಾವಿರ ಹಣ ಪಡೆಯಲು ಅರ್ಜಿ ಸಲ್ಲಿಸಿ.

₹15,000 ರೂಪಾಯಿ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಲು ನೀಡಿದರೆ ಹಾಗೂ ಇದಕ್ಕಾಗಿ ಕೇಂದ್ರ ಸರ್ಕಾರವು 20 ಸಾವಿರದವರೆಗೆ ಇನ್ನಷ್ಟು ಸಾಲದ ಹಣವನ್ನು ನೀಡುತ್ತದೆ. ಅದರಿಂದ ಹೊಲಿಗೆ ಯಂತ್ರದ ಅಂಗಡಿಯನ್ನು ಕೂಡ ಪ್ರಾರಂಭಿಸಬಹುದಾಗಿರುತ್ತದೆ. ಇದಕ್ಕೆ ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನಿರಬೇಕು? 

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಉಚಿತವಾಗಿ ಹೋಲಿಗೆ ಯಂತ್ರವನ್ನು ಪಡೆದುಕೊಳ್ಳಲು ಭಾರತೀಯ ನಾಗರಿಕನಾಗಿರಬೇಕು. ಮತ್ತು ಪ್ರಸ್ತುತ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಈಗಾಗಲೇ ಹೊಲಿಗೆ ವೃತ್ತಿಯನ್ನು ಮಾಡುತ್ತಿರಬೇಕು. ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಸಾಕು ನೀವು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಬೇಕಾಗುವ ದಾಖಲೆಗಳೇನು? 
  • ಗುರುತಿನ ಚೀಟಿ 
  • ವಿಳಾಸದ ಪುರಾವೇ
  • ಆಧಾರ್ ಕಾರ್ಡ್ 
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ 
  • ಮೊಬೈಲ್ ನಂಬರ್ 
  • ಬ್ಯಾಂಕ್ ಪಾಸ್ ಬುಕ್ ವಿವರಗಳು 
  • ಪಾಸ್ ಪೋರ್ಟ್ ಸೈಜ್ ಫೋಟೋ 

ಎಲ್ಲ ಮೇಲಿನ ದಾಖಲೆಗಳನ್ನು ಸರಿಪಡಿಸಿಕೊಂಡು ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. 

ಅರ್ಜಿ ಸಲ್ಲಿಸುವುದು ಹೇಗೆ? ( How to Apply For Free Sewing Machine Scheme?)

ಮೊದಲು ಅಧಿಕೃತ ಜಾಲತಾಣವಾದ https://pmvishwakarma.gov.in/ ಇಲ್ಲಿಗೆ ಹೋಗಿ ಅಲ್ಲಿ ನೀವು ಮೊದಲು ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ನಿಮಗೆ ನಿಮ್ಮ ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದರೆ ನಿಮ್ಮ ಹತ್ತಿರದ “ಗ್ರಾಮಒನ್” ಸೆಂಟರ್ ಗೆ ಹೋಗಿ ಅಲ್ಲಿ ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *