ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಅರ್ಜಿ ಆಹ್ವಾನ!

Free Sewing Machine Scheme 2024

Free Sewing Machine Scheme 2024: ನಮಸ್ಕಾರ ಸ್ನೇಹಿತರೆ ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ನೀವು ಉಚಿತ ಹೊಲಿಗೆ ಯಂತ್ರ ಪಡೆಯಬೇಕು ಎಂದು ಯೋಚಿಸುತಿದ್ದೀರಾ? ರಾಜ್ಯ ಸರ್ಕಾರವು ನೀಡುತ್ತಿರುವ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ಯಾರು ಅರ್ಹರಿರುತ್ತಾರೆ? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಎಂಬ ಎಲ್ಲಾ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ಸಿಗಲಿದೆ. ಲೇಖನವನ್ನು ಕೊನೆಯವರೆಗೂ ಓದಿ. 

ಉಚಿತ ಹೊಲಿಗೆ ಯಂತ್ರ ಯೋಜನೆ! {Free Sewing Machine Scheme 2024}

ಹೌದು ಸ್ನೇಹಿತರೆ, ಗ್ರಾಮೀಣ ಪ್ರದೇಶದಲ್ಲಿರುವ ಮಹಿಳೆಯರಿಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಕುಶಲಕರ್ಮಿಗಳಿಗೆ ಉಚಿತ ಹೊಲಿಗೆ ಯಂತ್ರ ಯೋಜನೆಯನ್ನು ಜಾರಿಗೆ ತರಲಾಗಿರುತ್ತದೆ. ಹಾಗೂ ಹೊಲಿಗೆ ಯಂತ್ರದ ಉಪಕರಣಗಳನ್ನು ಉಚಿತವಾಗಿ ಪಡೆದುಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿರುತ್ತದೆ. ಅರ್ಜಿ ಸಲ್ಲಿಸಲು ಅರ್ಹರಿರುವವರು ಮತ್ತು ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು.

ಹೌದು ಸ್ನೇಹಿತರೆ, ಈ ಉಚಿತ ಹೊಲಿಗೆ ಯಂತ್ರ ಯೋಜನೆಯ ಫಲಾನುಭವಿಯಾಗಲು ಕೆಳಗೆ ನೀಡಿರುವ ದಾಖಲೆಗಳನ್ನು ಸಲ್ಲಿಸುವ ಮೂಲಕ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಹಾಗೂ ಯಾವ ಜಿಲ್ಲೆಯವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂಬುದನ್ನು ಕೆಳಗೆ ನೀಡಿರುತ್ತೇನೆ ನೋಡಿ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು! {Free Sewing Machine Scheme 2024}

  • ಆಧಾರ್ ಕಾರ್ಡ್ 
  • ರೇಷನ್ ಕಾರ್ಡ್ 
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ 
  • ಜನನ ಪ್ರಮಾಣ ಪತ್ರ 
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ 
  • ಶೈಕ್ಷಣಿಕ ದಾಖಲೆಗಳು 

ಸ್ನೇಹಿತರೆ ಮೇಲೆ ನೀಡಿರುವ ದಾಖಲೆಗಳನ್ನು ನೀವು ತೆಗೆದುಕೊಂಡು, ಉಚಿತ ಹೊಲಿಗೆ ಅಂತ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಹಾಗಾಗಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೇಲೆ ನೀಡಿರುವ ದಾಖಲೆಗಳನ್ನು ಕಡ್ಡಾಯವಾಗಿ ಅರ್ಜಿ ಸಲ್ಲಿಸಲು ಒಪ್ಪಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಕೆಲವು ಜಿಲ್ಲೆಗಳಿಗೆ ಮಾತ್ರ ಸದ್ಯಕ್ಕೆ ಅವಕಾಶ ಕೊಡಲಾಗಿರುತ್ತದೆ. ಆ ಜಿಲ್ಲೆಗಳು ಯಾವುವು ಮತ್ತು ಯಾವ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಯಾವ ದಿನಾಂಕದಂದು ನಿಗದಿಪಡಿಸಲಾಗಿರುತ್ತದೆ? ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕನ್ನು ಕೂಡ ನೀಡಲಾಗಿದೆ ನೋಡಿ.

ಚಿಕ್ಕಬಳ್ಳಾಪುರ ಜಿಲ್ಲೆ: ಅರ್ಜಿಗಳು ಆರಂಭ ದಿನಾಂಕ 15-7-2024 ಮತ್ತು ಕೊನೆ ದಿನಾಂಕ 31-7-2024 (ಅಪ್ಲೈ ಮಾಡಿ.)

ತುಮಕೂರು ಜಿಲ್ಲೆ: ಅರ್ಜಿಗಳು ಆರಂಭದ ದಿನಾಂಕ 12-7-2024 ಮತ್ತು ಅರ್ಜಿ ಹಾಕಲು ಕೊನೆಯ ದಿನಾಂಕ 5-8-2024 (ಅಪ್ಲೈ ಮಾಡಿ.)

ಉಡುಪಿ ಜಿಲ್ಲೆ: ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 15-7-2024 ಮತ್ತು ಕೊನೆಯ ದಿನಾಂಕ 31-08-2024 (ಅಪ್ಲೈ ಮಾಡಿ.)

ಚಿಕ್ಕಮಗಳೂರು ಜಿಲ್ಲೆ: ಅರ್ಜಿಗಳು ಆರಂಭವಾದ ದಿನಾಂಕ 12-7-2024 ಮತ್ತು ಕೊನೆಯ ದಿನಾಂಕ 31-08-2024 (ಅಪ್ಲೈ ಮಾಡಿ.)

ಸ್ನೇಹಿತರೆ, ಮೇಲೆ ನಿಮಗೆ ಅರ್ಜಿ ಸಲ್ಲಿಸಲು ಬೇಕಾಗುವಂತಹ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿರುತ್ತದೆ. ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ಜಾಲತಾಣವನ್ನು ಕೂಡ ನಿಮಗೆ ನೀಡಲಾಗಿರುತ್ತದೆ. ಅದನ್ನು ಬಳಸಿಕೊಂಡು ನೀವು ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಇದನ್ನೂ ಓದಿ:  ಜಿಯೋದ 3 ಹೊಸ ಪ್ಲಾನ್ ಗಳು! ಅನ್ಲಿಮಿಟೆಡ್ 5G ಡೇಟಾ ಮತ್ತು ಇನ್ನಷ್ಟು!

WhatsApp Group Join Now
Telegram Group Join Now

Leave a Reply

Your email address will not be published. Required fields are marked *