ನಮಸ್ಕಾರ ಸ್ನೇಹಿತರೆ…. ಈ ಒಂದು ಲೇಖನದ ಮುಖಾಂತರ ಟೈಲರಿಂಗ್ ವೃತ್ತಿಯನ್ನು ಪ್ರಾರಂಭ ಮಾಡಬೇಕೆಂದು ಕೊಂಡಿರುವಂತಹ ಮಹಿಳಾ ಅಭ್ಯರ್ಥಿಗಳಿಗೆ, ಹಾಗೂ ಪುರುಷ ಅಭ್ಯರ್ಥಿಗಳಿಗೆ ಉಚಿತವಾದ ಹೊಲಿಗೆ ಯಂತ್ರವನ್ನು ಯಾವ ಯೋಜನೆ ಕಡೆಯಿಂದ ಪಡೆಯಬೇಕು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದ ಮುಖಾಂತರ ತಿಳಿಸಲಾಗಿದೆ.
ನೀವು ಕೂಡ ಲೇಖನವನ್ನು ಕೊನೆವರೆಗೂ ಓದುವ ಮುಖಾಂತರ ಈ ಸರ್ಕಾರಿ ಯೋಜನೆ ಕಡೆಯಿಂದ ಉಚಿತ ಹೊಲಿಗೆ ಯಂತ್ರವನ್ನು ಕೂಡ ಪಡೆದು, ನಿಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿರಿ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿರಿ.
free sewing machine scheme 2024:
ಎಲ್ಲಾ ಅಭ್ಯರ್ಥಿಗಳು ಕೂಡ ಕಡಿಮೆ ಹೂಡಿಕೆಯನ್ನು ಮಾಡಿ ಹೆಚ್ಚಿನ ಲಾಭದಾಯಕವಾದ ಹಣವನ್ನು ಆದಾಯವಾಗಿ ಪಡೆಯಬೇಕು ಎಂಬುದು ಎಲ್ಲರ ಆಸೆ ಆಗಿರುತ್ತದೆ. ಆದರೆ ಈ ಟೈಲರಿಂಗ್ ವೃತ್ತಿ ಜೀವನದಲ್ಲಿ ನೀವು ಕಡಿಮೆ ಹೂಡಿಕೆಯನ್ನು ಮಾಡಿದ್ರೆ ಸಾಕು, ನಿಮಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಆದಾಯವೇ ನಿಮ್ಮ ಕೈ ಸೇರುತ್ತದೆ. ಹೆಚ್ಚಿನ ಮಹಿಳೆಯರು ಈ ರೀತಿಯ ಒಂದು ವೃತ್ತಿಯನ್ನೇ ಮಾಡಿ ಹೆಚ್ಚಿನ ಲಾಭದಾಯಕದ ಹಣವನ್ನು ಕೂಡ ಪ್ರತಿ ತಿಂಗಳು ಪಡೆದುಕೊಳ್ಳುತ್ತಿದ್ದಾರೆ.
ನೀವೇನಾದರೂ 15,000 ಹಣವನ್ನು ಸರ್ಕಾರದಿಂದ ಪಡೆದುಕೊಂಡು ಆ ಒಂದು ಹಣದಲ್ಲಿ ನೀವು ಹೊಲಿಗೆ ಯಂತ್ರವನ್ನು ಖರೀದಿಸಿ. ನಿಮ್ಮ ಟೈಲರಿಂಗ್ ಕೆಲಸವನ್ನು ಕೂಡ ಪ್ರಾರಂಭ ಮಾಡಬಹುದು. ಇನ್ನು ಯಾರೆಲ್ಲ ಟೈಲರಿಂಗ್ ತರಬೇತಿಯನ್ನು ಕಲಿತಿಲ್ಲವೋ ಅಂತವರು ಕೂಡ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಮೂಲಕ ತರಬೇತಿಯನ್ನು ಕೂಡ ಕಲಿತು ಸರ್ಕಾರದಿಂದ ಹಣವನ್ನು ಕೂಡ ಪಡೆದು ಟೈಲರಿಂಗ್ ಕೆಲಸವನ್ನು ಕೂಡ ಪ್ರಾರಂಭ ಮಾಡಬಹುದು.
ಹೊಲಿಗೆ ಯಂತ್ರವನ್ನು ನೀವು ಖರೀದಿ ಮಾಡುತ್ತೀರಿ ಎಂದರೆ ನಿಮಗೆ ಬರೋಬ್ಬರಿ 15,000 ಹಣ ಕಡ್ಡಾಯವಾಗಿ ಬೇಕಾಗುತ್ತದೆ. ಆ ಒಂದು ಹಣವನ್ನು ನೀವು ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ 15,000 ಹಣವನ್ನು ಉಚಿತವಾಗಿಯೇ ಪಡೆಯಬಹುದು. 15,000 ಹಣದಿಂದ ನೀವು ಒಂದೇ ಬಾರಿಗೆ ಹೊಲಿಗೆ ಯಂತ್ರವನ್ನು ಕೂಡ ಖರೀದಿ ಮಾಡಬಹುದು. ಖರೀದಿ ಮಾಡಿದ ಬಳಿಕ ನಿಮ್ಮದೇ ಆದ ಸ್ವಂತ ಟೈಲರಿಂಗ್ ಅಂಗಡಿಯನ್ನು ಕೂಡ ಇಟ್ಟುಕೊಂಡು ಹೆಚ್ಚಿನ ಆದಾಯವನ್ನು ಗಳಿಸುವಂತಹ ವ್ಯಕ್ತಿಗಳು ನೀವಾಗಬಹುದು.
ಒಂದೇ ಬಾರಿಗೆ ಈ ರೀತಿಯ ಒಂದು ಹಣವನ್ನು ಬಂಡವಾಳವಾಗಿ ಬಳಸಿ, ಹೆಚ್ಚಿನ ಆದಾಯವನ್ನು ಮುಂದಿನ ದಿನಗಳಲ್ಲೂ ಕೂಡ ಪಡೆಯಬಹುದಾಗಿದೆ. ಈ ಒಂದು ಉಚಿತ ಹೋಲಿಗೆ ಯಂತ್ರಗಳು ಸಾಕಷ್ಟು ವರ್ಷಗಳವರೆಗೂ ಕೂಡ ಕಾರ್ಯನಿರ್ವಹಿಸಿ ನಿಮಗೆ ಆದಾಯವನ್ನು ತಂದುಕೊಡುತ್ತವೆ. ಈ ಹೊಲಿಗೆ ಯಂತ್ರದಿಂದ ಸಾಕಷ್ಟು ಜನರ ಜೀವನವೇ ಬದಲಾವಣೆ ಆಗಿದೆ ಎನ್ನಬಹುದು. ಏಕೆಂದರೆ ಕಡಿಮೆ ಹೂಡಿಕೆ ಮಾಡುವಂತಹ ವೃತ್ತಿ ಇದಾಗಿದೆ. ಆದ ಕಾರಣ ಇದು ಹೆಚ್ಚಿನ ಲಾಭದಾಯಕ ಆದಾಯವನ್ನೇ ತಂದುಕೊಡುತ್ತದೆ.
ಅರ್ಜಿ ಸಲ್ಲಿಕೆಗೆ ದಾಖಲಾತಿಗಳು ಯಾವುವು ಬೇಕು ಎಂಬುದನ್ನು ನೋಡಿ.
- ಅಭ್ಯರ್ಥಿಗಳ ಆಧಾರ್ ಕಾರ್ಡ್
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಬೇಕಾಗುತ್ತದೆ.
- ಜಾತಿ ಪ್ರಮಾಣ ಪತ್ರ
- ವೋಟರ್ ಐಡಿ ಅಥವಾ ಪಡಿತರ ಚೀಟಿ
- ಟೈಲರಿಂಗ್ ತರಬೇತಿ ಪಡೆದಂತಹ ಪ್ರಮಾಣ ಪತ್ರ
- ಕುಶಲಕರ್ಮಿ ಎಂದು ಗುರುತಿಸಿಕೊಂಡಿರುವಂತಹ ಪ್ರಮಾಣ ಪತ್ರ.
ವಿಶ್ವಕರ್ಮ ಯೋಜನೆ ಅಡಿಯಲ್ಲಿ ಹಣ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ.
- ಎಲ್ಲಾ ಪುರುಷ ಅಭ್ಯರ್ಥಿಗಳು ಹಾಗೂ ಮಹಿಳಾ ಅಭ್ಯರ್ಥಿಗಳು ಕೂಡ ಪಿಎಂ ವಿಶ್ವಕರ್ಮ ಯೋಜನೆ ಮುಖಾಂತರ ಹಣವನ್ನು ಪಡೆಯಲು ಈ ಒಂದು https://pmvishwakarma.gov.in/Home ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ.
- ನೀವು ಮೊದಲಿಗೆ ಅರ್ಜಿ ಸಲ್ಲಿಸಿದ ನಂತರವೇ ನಿಮಗೆ ತರಬೇತಿ ಜೊತೆಗೆ ಹಣ ಕೂಡ ದೊರೆಯುವುದು.
- ವೆಬ್ ಸೈಟ್ಗೆ ಭೇಟಿ ನೀಡಿದ ಬಳಿಕ ಲಾಗಿನ್ ಆಗಿರಿ.
- ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಹೆಸರನ್ನು ನೋಂದಾಯಿಸಿ ಲಾಗಿನ್ ಆಗಬೇಕು.
- ನಂತರ ಅರ್ಜಿ ನಮೂನೆ ಪುಟ ತೆರೆದುಕೊಳ್ಳುತ್ತದೆ.
- ಆ ಅರ್ಜಿ ನಮೂನೆಯಲ್ಲಿ ಕೇಳುವಂತಹ ಎಲ್ಲಾ ದಾಖಲಾತಿಗಳನ್ನು ಸಲ್ಲಿಕೆ ಮಾಡಿ.
- ಒಂದು ಬಾರಿ ಎಚ್ಚರಿಕೆಯಿಂದ ಯಾವ ದಾಖಲಾತಿಗಳನ್ನು ಭರ್ತಿ ಮಾಡುತ್ತಿದ್ದೇವೆ ಎಂಬುದನ್ನು ಕೂಡ ನೋಡಿಕೊಳ್ಳಿ.
- ದಾಖಲಾತಿಗಳನ್ನೆಲ್ಲ ಭರ್ತಿ ಮಾಡಿದ ನಂತರ ಸಬ್ಮಿಟ್ ಮಾಡಿ.
- ನಿಮ್ಮ ದಾಖಲಾತಿಗಳು ಸರ್ಕಾರಕ್ಕೆ ತಲುಪಿ. ನೀವು ಈ ಒಂದು ಯೋಜನೆಗೆ ಅರ್ಹರು ಎಂದು ಕಂಡುಬಂದರೆ ಮಾತ್ರ ಈ ಯೋಜನೆ ಕಡೆಯಿಂದ ಹಣ ದೊರೆಯುತ್ತದೆ. ಆ ಒಂದು ಹಣದಿಂದ ನೀವು ಉಚಿತ ಹೊಲಿಗೆ ಯಂತ್ರವನ್ನು ಕೂಡ ಪಡೆಯಬಹುದು.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…