Loan: ನಮಸ್ಕಾರ ಸ್ನೇಹಿತರೇ, ಈ ಲೇಖನದ ಮೂಲಕ ಎಲ್ಲಾ ಜನತೆಗೆ ತಿಳಿಸುವ ಪ್ರಮುಖವಾದ ವಿಷಯವೇನೆಂದರೆ, ನಿಮಗೆಲ್ಲಾ ತಿಳಿದಿರುವ ಹಾಗೆ ಕೆಲವೊಂದು ಸಂದರ್ಭದಲ್ಲಿ ಲೋನ್ ತೆಗೆದುಕೊಳ್ಳುವುದು ಎಷ್ಟು ಪ್ರಾಮುಖ್ಯತೆ ಇರುತ್ತದೆ ಎಂದರೆ, ನಿಮಗೆಲ್ಲ ಈ ವಿಚಾರದ ಬಗ್ಗೆ ಗೊತ್ತೇ ಇದೆ. ಹಾಗಾದರೆ ಸಾಲವನ್ನು ತೆಗೆದುಕೊಳ್ಳಲು ಕಡಿಮೆ ಬಡ್ಡಿ ದರದಲ್ಲಿ ಹೇಗೆ ಪಡೆದುಕೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ.
ಸ್ನೇಹಿತರೆ, ಈ ನಮ್ಮ ಜಾಲತಾಣದಲ್ಲಿ ಇದೇ ರೀತಿಯ ಸುದ್ದಿಗಳನ್ನು ದಿನನಿತ್ಯವೂ ಕೂಡ ಹಾಕಲಾಗುತ್ತದೆ. ನಮ್ಮ ಜಾಲತಾಣದಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ಹಾಗೂ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಮಾಹಿತಿಗಳನ್ನು ಕೂಡ ನಮ್ಮ ಜಾಲತಾಣದಲ್ಲಿ ನೀಡಲಾಗುತ್ತದೆ. ಆದ್ದರಿಂದ ನೀವು ನಮ್ಮ ಜಾಲತಾಣದ ಚಂದದಾರರಾಗುವ ಮೂಲಕ ನೀವು ಇಂತಹ ಸುದ್ದಿಗಳನ್ನು ದಿನನಿತ್ಯವೂ ಕೂಡ ಓದಬಹುದಾಗಿರುತ್ತದೆ.
ಇತ್ತೀಚಿನ ದಿನಮಾನಗಳಲ್ಲಿ ಎಲ್ಲಾ ಬ್ಯಾಂಕುಗಳಲ್ಲಿ ನೀವು ಕಾಣಬಹುದಾದ ಬಡ್ಡಿದರ ಸಾಮಾನ್ಯವಾಗಿ 7% ನಿಂದ 20% ರವರೆಗೆ ವಿಧಿಸಲಾಗುತ್ತದೆ. ಹಾಗೂ ನಿಮ್ಮ ಸಿಬಿಲ್ ಸ್ಕೋರ್ ನ ಮೇಲೆ ನಿಮ್ಮ ಬಡ್ಡಿದರ ನಿರ್ಧಾರವಾಗುತ್ತದೆ. ಈ ದಿನಮಾನಗಳಲ್ಲಿ ವೈಯಕ್ತಿಕ ಸಾಲ ಪಡೆದುಕೊಳ್ಳುವುದು ಬಹಳ ಜನಪ್ರಿಯ ಮತ್ತು ಅತ್ಯವಶ್ಯಕವಾಗಿ ಕೆಲವೊಂದು ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ.
ವೈಯಕ್ತಿಕ ಸಾಲ ಪಡೆಯಲು ಸುಲಭ ಮಾರ್ಗ!
ನೀವೇನಾದ್ರೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಬೇಕು ಅಂತ ಅಂದುಕೊಂಡಿದ್ದರೆ, ನೀವು ಮೊದಲು ಗಮನಹರಿಸಬೇಕಾದದ್ದು ನಿಮ್ಮ ಸಿಬಿಲ್ ಸ್ಕೋರ್ ಕಡೆ. ನಿಮ್ಮ ಸಿಬಿಲ್ ಸ್ಕೋರ್ (CIBIL SCORE) ಜಾಸ್ತಿ ಇದ್ದರೆ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುವ ಸೌಲಭ್ಯ ಇರುತ್ತದೆ. ಸುಮಾರು 750ಕ್ಕಿಂತ ಹೆಚ್ಚು ಸಿಬಿಲ್ ಸ್ಕೋರನ್ನು ನೀವು ಹೊಂದಿದ್ದರೆ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರಕುವ ಸಾಧ್ಯತೆ ಇರುತ್ತದೆ.
ಸಿಬಿಲ್ ಸ್ಕೋರ್ ಎಂದರೆ ಏನು?
ಸಿಬಿಲ್ ಸ್ಕೋರ್ ಎಂದರೆ, ನೀವು ಈ ಮೊದಲಿಗೆ ತೆಗೆದುಕೊಂಡಿರುವ ಸಾಲ ಅಥವಾ ಬ್ಯಾಂಕಿನ ವಹಿವಾಟುಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೀರಾ ಎಂದು ಅರ್ಥ ಹಾಗೂ ನೀವು ತೆಗೆದುಕೊಂಡಿರುವ ಸಾಲದ ಮರುಪಾವತಿ ಹೇಗಿದೆ ಎಂಬುವುದನ್ನು ಕೂಡ ನಿರೂಪಿಸುತ್ತದೆ. ಹಾಗೂ ನೀವು ತೆಗೆದುಕೊಂಡ ಸಾಲದ ಮರುಪಾವತಿಯ ಸಾಮರ್ಥ್ಯ ನಿಮ್ಮಲ್ಲಿ ಎಷ್ಟಿದೆ ಎಂಬುದನ್ನು ಕೂಡ ಸಿಬಿಲ್ ಸ್ಕೋರ್ ನಿರ್ಣಯ ಮಾಡುತ್ತದೆ ಎಂದು ಹೇಳಬಹುದು.
ಹಾಗಾಗಿ ನೀವು ವೈಯಕ್ತಿಕ ಸಾಲ ಆಗಲಿ ಯಾವುದೇ ರೀತಿಯ ಸಾಲವನ್ನು ಪಡೆದುಕೊಳ್ಳುತ್ತಿರುವಾಗ ನಿಮಗೆ ಮುಖ್ಯವಾಗಿ ಪಾತ್ರ ವಹಿಸುವುದು ನಿಮ್ಮ ಸಿಬಿಲ್ ಸ್ಕೋರ್. ನೀವೇನಾದರೂ ಉತ್ತಮವಾದ ಸಿಬಿಲ್ ಸ್ಕೋರನ್ನ ಹೊಂದಿದ್ದರೆ ನಿಮಗೆ ತಕ್ಷಣವೇ ಲೋನ್ ದೊರಕುವುದು ಹಾಗೂ ಕಡಿಮೆ ಬಡ್ಡಿ ದರದಲ್ಲಿ ಲೋನ್ ದೊರಕುತ್ತದೆ ಎಂದು ಹೇಳಬಹುದು.
ಸಿಬಿಲ್ ಸ್ಕೋರ್ ಸುಧಾರಿಸಲು ಏನು ಮಾಡಬೇಕು?
ನೀವು ನಿಮ್ಮ ಸಿಬಿಲ್ ಸ್ಕೋರನ್ನು ಉತ್ತಮ ಗುಣಮಟ್ಟದಲ್ಲಿ ಇರಿಸಿಕೊಳ್ಳಲು ನಿಮ್ಮ ಸಾಲದ ಮರುಪಾವತಿಯ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಸರಿಯಾದ ಸಮಯಕ್ಕೆ ನೀವು ಸಾಲದ ಮರುಪಾವತಿಯನ್ನು ಮಾಡಬೇಕು ಅಂದಾಗ ನಿಮ್ಮ ಸಿಬಿಲ್ ಸ್ಕೋರ್ ಉತ್ತಮ ರೂಪಕ್ಕೆ ಬರುತ್ತದೆ. ಹಾಗಾಗಿ ನೀವು ಮುಂದಿನ ದಿನಮಾನಗಳಲ್ಲಿ ಲೋನ್ ಪಡೆದುಕೊಳ್ಳಲು ಇನ್ನಷ್ಟು ಸಹಾಯಕಾರಿಯಾಗುತ್ತದೆ.