Google Scholarship: ನಮಸ್ಕಾರ ಸ್ನೇಹಿತರೆ, ಎಲ್ಲರಿಗೂ ಇವತ್ತಿನ ಲೇಖನದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ವೇತನವನ್ನು 2 ಲಕ್ಷದವರೆಗೆ ಗೂಗಲ್ ಕಂಪನಿಯು ಇಂತಹ ವಿದ್ಯಾರ್ಥಿಗಳಿಗೆ ನೀಡುತ್ತಿರುವುದರ ಬಗ್ಗೆ ಮಾಹಿತಿಯನ್ನು ನಿಮಗೆ ತಿಳಿಸಲಾಗುತ್ತಿದೆ.ಲೇಖನವನ್ನು ಕೊನೆಯವರೆಗೂ ಓದಿ.
ಜನರೇಶನ್ ಗೂಗಲ್ ಸ್ಕಾಲರ್ಶಿಪ್(Google Scholarship):
ಪ್ರಪಂಚದ ಅತ್ಯಂತ ದೊಡ್ಡ ಕಂಪನಿಯಾದ ಗೂಗಲ್(Google)ಕಂಪನಿಯಿಂದ ಇದೀಗ ಜನರೇಶನ್ ಗೂಗಲ್ ಸ್ಕಾಲರ್ಶಿಪ್ ಫೌಂಡೇಶನ್(Generation Google Scholarship Foundation)ಅಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಉಚಿತವಾಗಿ ಸ್ಕಾಲರ್ಶಿಪ್ ಅನ್ನು ನೀಡಲಾಗುತ್ತಿದೆ. ವಿಜ್ಞಾನ ಹಾಗೂ ತಂತ್ರಜ್ಞಾನ ಅಧ್ಯಯನ ಮಾಡುವಂತಹ ವಿದ್ಯಾರ್ಥಿಗಳು ಇಸ್ಕಾಲರ್ಶಿಪ್ ನ ಅಡಿಯಲ್ಲಿ ಉಚಿತ ಸ್ಕಾಲರ್ಶಿಪ್ ಅನ್ನು ಗೂಗಲ್ ಕಂಪನಿಯಿಂದ ಪಡೆಯಬಹುದು ಎಂದು ತಿಳಿದುಬಂದಿದೆ.
ಯಾವ ವಿದ್ಯಾರ್ಥಿಗಳು(Google Scholarship) ವಿದ್ಯಾರ್ಥಿ ವೇತನ ಪಡೆಯಬಹುದು :
ಗೂಗಲ್ ಕಂಪನಿಯು ನೀಡುತ್ತಿರುವ ಜನರೇಷನ್ ಗೂಗಲ್ ಸ್ಕಾಲರ್ಶಿಪ್(Generation Google Scholarship)ಗೆ ಅರ್ಜಿ ಸಲ್ಲಿಸಬೇಕಾದರೆ ವಿಜ್ಞಾನ(Science) ಹಾಗೂ ತಂತ್ರಜ್ಞಾನ(Technology)ಕ್ಷೇತ್ರದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಇಲ್ಲವೇ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಗಳು ಉನ್ನತ ಕೌಶಲ್ಯಕ್ಕಾಗಿ ಮತ್ತು ತಮ್ಮ ಸಾಧನೆಯನ್ನು ಮಾಡಲು ಹಣದ ಸಹಾಯವನ್ನು ಈ ಸ್ಕಾಲರ್ಶಿಪ್ ನ ಮೂಲಕ ಪಡೆಯಬಹುದಾಗಿದೆ ಎಂದು ತಿಳಿಸಲಾಗಿದೆ.
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 26 ಮಾರ್ಚ್ 2024
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 16 ಮೇ 2024
ಈ ನಿಗದಿತ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸುವ ವಿದ್ಯಾರ್ಥಿಗಳಿಗೆ ಮಾತ್ರ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಎಂದು ಹೇಳಲು ಬಯಸುತ್ತೇನೆ.
ಒಟ್ಟಾರೆಯಾಗಿ ಗೂಗಲ್ ಕಂಪನಿಯು ಜನರೇಶನ್ ಗೂಗಲ್ ಸ್ಕಾಲರ್ ಶಿಪ್(Generation Google Scholarship)ನ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದ್ದು ವಿದ್ಯಾರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು.