Gruha lakshmi scheme: ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಲಕ್ಷಾಂತರ ಮಹಿಳೆಯರು ಲಾಭವನ್ನು ಪಡೆದುಕೊಳ್ಳುತ್ತಿರುವುದು ನಿಜ. ಆದರೆ ಇದುವರೆಗೆ ಸಾಕಷ್ಟು ಮಹಿಳೆಯರು ತಮ್ಮ ಖಾತೆಗೆ ಹಣ ಜಮಾ ಆಗದೆ ಇರುವ ಬಗ್ಗೆ ಅಸಮಾಧಾನವನ್ನಾ ಮಹಿಳೆಯರು ವ್ಯಕ್ತಪಡಿಸುತ್ತಿರುವುದು ಕೂಡ ಅಷ್ಟೇ ನಿಜ ಆಗಿದೆ ಎಂದು ಹೇಳಬಹುದು.
ಈ ರೀತಿಯಾಗಿ ಮಹಿಳೆಯರಿಗೆ ಹಣ ವರ್ಗಾವಣೆ (DBT) ಮಾಡಲು ಸರ್ಕಾರ ಬೇರೆ ಬೇರೆ ರೀತಿಯ ಉಪಕ್ರಮಗಳನ್ನು ಕೂಡ ಕೈಗೊಂಡಿದೆ ಎಂದು ಹೇಳಬಹುದು. ಸರ್ಕಾರದ ಕೆಲವು ನಿಯಮಗಳನ್ನು ಸರಿಯಾಗಿ ಅನುಸರಿಸಿದರೆ ಪೆಂಡಿಂಗ್ ಇರುವ ಎಲ್ಲಾ ಹಣ ಕೂಡ ನಿಮ್ಮ ಖಾತೆಗೆ ಬರುತ್ತದೆ ಎನ್ನುವುದಕ್ಕೆ ಹುಬ್ಬಳ್ಳಿಯ ಮಹಿಳೆ ಒಬ್ಬರ ಖಾತೆಗೆ ಪೆಂಡಿಂಗ್ ಹಣ ಜಮಾ ಆಗಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಲಾಗಿದೆ.
ಇಲ್ಲಿವರೆಗೆ ಸರಿಯಾಗಿ ಬ್ಯಾಂಕ್ ಖಾತೆಗೆ e-KYC ಹಾಗೂ NPCI ಮ್ಯಾಪಿಂಗ್ ಆಗದೆ ಇರುವ ಹುಬ್ಬಳ್ಳಿಯ ಮಹಿಳೆ(Women)ಒಬ್ಬರ ಖಾತೆಗೆ ಈ ಎಲ್ಲಾ ಕೆಲಸವನ್ನು ಡಿಸೆಂಬರ್ ತಿಂಗಳಿನಲ್ಲಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅವರಿಗೆ ಜನವರಿ ತಿಂಗಳಿನಲ್ಲಿ 23 ರಿಂದ 25 ನೇ ತಾರೀಖಿನ ಅವಧಿಗೆ ₹10,000ಗಳನ್ನು ಅಂದರೆ 5 ಕಂತಿನ ಹಣವನ್ನು ಜಮಾ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಈ ಕೆಲಸ ತಕ್ಷಣ ಮಾಡಿದರೆ ಪೆಂಡಿಂಗ್ ಹಣ ಬರುತ್ತೆ!
ಸ್ನೇಹಿತರೆ,ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ (Aadhaar Card link) ಆಗಿರುವುದು ಮಾತ್ರವಲ್ಲದೆ ರೇಷನ್ ಕಾರ್ಡ್ ನಲ್ಲಿಯೂ ಕೂಡ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಎಂದು ತಿಳಿಸಲಾಗಿದೆ. ಮನೆಯಲ್ಲಿ ಯಜಮಾನರು ಮಾತ್ರವಲ್ಲದೆ ಮನೆಯ ಕುಟುಂಬದ ಎಲ್ಲಾ ಸದಸ್ಯರಿಗೂ ಕೂಡ ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಕೂಡ ತಿಳಿಸಲಾಗಿದೆ. ಇದರ ಜೊತೆಗೆ NPCI ಮ್ಯಾಪಿಂಗ್ ಕೂಡ ಕಡ್ಡಾಯವಾಗಿದೆ ಎಂದು ತಿಳಿಸಲಾಗಿದೆ.
ಆಧಾರ್ ಕಾರ್ಡ್(Adhar Card)ಮತ್ತು ರೇಷನ್ ಕಾರ್ಡ್(Ration Card)ಪ್ರತಿಯನ್ನು ಒದಗಿಸಿದರೆ ನಿಮ್ಮ ಖಾತೆಯ ವಿವರಗಳನ್ನು ಪಡೆದು NPCI mapping ಅನ್ನು ಬ್ಯಾಂಕ್ ಸಿಬ್ಬಂದಿಗಳು ಮಾಡಿಕೊಡುತ್ತಾರೆ ಎಂದು ಕೂಡ ತಿಳಿಸಲಾಗಿದೆ.