ಸರ್ಕಾರದಿಂದ ಹೊಸ ಆದೇಶ! ಗೃಹಜ್ಯೋತಿ ಯೋಜನೆಯ ನಿಯಮದಲ್ಲಿ ಹೊಸ ಬದಲಾವಣೆ!

Gruhajyoti New Rules: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಗೃಹಜೋತಿ ಯೋಜನೆಯ ನಿಯಮದಲ್ಲಿ ಸರ್ಕಾರವು ಹೊಸ ಆದೇಶವನ್ನು ಹೊರಡಿಸಿದೆ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡಲು ಈ ಲೇಖನವನ್ನು ಹಾಕಿರುತ್ತೇವೆ ಕೊನೆವರೆಗೂ ಓದಿ ಮಾಹಿತಿಯನ್ನು ಉಚಿತವಾಗಿ ಪಡೆದುಕೊಳ್ಳಿ.

ಇದೀಗ ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆ ನಿಯಮದಲ್ಲಿ ಸರ್ಕಾರ ಬದಲಾವಣೆ ತಂದ ಬೆನ್ನಲ್ಲೇ ಯೋಜನೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆಗಿಂತಲೂ ಮಾಹಿತಿ ಕೋರಿ ಅಧಿಕಾರಿಗಳ ಸಂಪರ್ಕಿಸುವವರ ಸಂಖ್ಯೆಯೇ ಹೆಚ್ಚಾಗಿದೆ ಎಂದು ಕೂಡ ಇದೀಗ ತಿಳಿದುಬಂದಿದೆ ಅಂತ ಹೇಳಬಹುದು.

ಸ್ನೇಹಿತರೆ,ಕಳೆದ ಸಂಪುಟ ಸಭೆಯಲ್ಲಿ ಗೃಹಜ್ಯೋತಿ ಯೋಜನೆಯ ಒಂದು ಹೊಸ ನಿಯಮದಲ್ಲಿ ಬದಲಾವಣೆಗಳನ್ನು ಮಾಡಿ ಸರ್ಕಾರ ಘೋಷಣೆ ಮಾಡಿತ್ತು. ಮಾಸಿಕ 48 ಯೂನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಸುವವರಿಗೆ ‘ಗೃಹಜ್ಯೋತಿ’ ಯೋಜನೆಯ ಅಡಿ ಶೇ. 10ರಷ್ಟು ಹೆಚ್ಚುವರಿ ವಿದ್ಯುತ್‌ ಉಚಿತ ನೀಡುವ ಬದಲಿಗೆ 10 ಯೂನಿಟ್‌ ಹೆಚ್ಚುವರಿ ವಿದ್ಯುತ್‌ ( Free Electricity) ಉಚಿತವಾಗಿ ನೀಡುವುದಾಗಿ ಕೂಡ ತಿಳಿಸಿತ್ತು.

ಗೃಹಜ್ಯೋತಿ ಯೋಜನೆಯಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ (BESCOM) ಮಿತಿಯಲ್ಲಿಯೇ ಸುಮಾರು 25 ಲಕ್ಷ ಗ್ರಾಹಕರು ( Customers ) ಪ್ರಯೋಜನ ಪಡೆಯುತ್ತಿದ್ದು, ಉಳಿದವು ಎಸ್ಕಾಂ ಮಿತಿಯಲ್ಲಿವೆ ಎಂದು ಕೂಡ ಅಧಿಕಾರಿಗಳು ಈ ಮೂಲಕ ತಿಳಿಸಿದ್ದಾರೆ.

ಗೃಹ ಜ್ಯೋತಿ ಯೋಜನೆಯು ಸಾಕಷ್ಟು ಪ್ರಯೋಜನವನ್ನ ನೀಡುತ್ತಿದೆ. ಇಲಾಖೆಯು ಇಂಧನ ಉಳಿತಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನ ಕೂಡ ಇದು ಮಾಡುತ್ತಿದೆ. ಯೋಜನೆಯ ಲಾಭ ಪಡೆಯಲು ಜನರು ವಿದ್ಯುತ್ ಬಳಕೆಯನ್ನಾ ಕೂಡ ಕಡಿಮೆ ಮಾಡುತ್ತಿದ್ದಾರೆ. ಇದು ದೀರ್ಘಾವಧಿಯಲ್ಲಿ ಇಂಧನ ಉಳಿತಾಯ ಮಾಡಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ಈ ಮೂಲಕ ಎಲ್ಲರಿಗೂ ತಿಳಿಸಿದ್ದಾರೆ ಅಂತಾನೆ ಹೇಳಬಹುದು.

ಹೀಗೆ ಮುಂದಿನ ದಿನಗಳಲ್ಲಿ, ತಮ್ಮ ಅಗತ್ಯಕ್ಕೆ ಅನುಗುಣವಾಗಿ, ಯೋಜನೆಯಲ್ಲಿ ಪರಿಷ್ಕರಣೆಗಳನ್ನು ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಸರ್ಕಾರದಲ್ಲಿ ಹಣದ ಕೊರತೆಯು ಕೂಡ ಇಲ್ಲ. ಗ್ರಾಹಕರಿಗೆ ನೀಡುತ್ತಿರುವ ಸಬ್ಸಿಡಿ(Subsidy) ಮತ್ತು ಶೂನ್ಯ ಬಿಲ್‌ಗಳನ್ನು ಸರ್ಕಾರವು ನಿಯಮಿತವಾಗಿ ಮರುಪಾವತಿಸುತ್ತಿದೆ ಎಂದು ಹೇಳಬಹುದು. ಎಸ್ಕಾo ಕಳುಹಿಸುವ ಬಿಲ್ ಗಳನ್ನು ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದು ಮಾಹಿತಿಯನ್ನಾ ಈ ಮೂಲಕ ನೀಡಿದ್ದಾರೆ ಅಂತ ಹೇಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *